ಕಲಬುರಗಿ: ವಕೀಲರ ಮೇಲೆ ನಡೆಯುವ ಹಲ್ಲೆ ತಡೆಯುವ ಉದ್ದೇಶದಿಂದ ಹಾಗೂ ಆರೋಪಿಗಳಿಗೆ ಕಾನೂನು ಮೂಲಕ ಶಿಕ್ಷೆ ನೀಡುವ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ನಗರದ ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ಭಾಗವಹಿಸಿ ಮತಯಾಚಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲಾ ನ್ಯಾಯಾಲಯ, ವಕೀಲರ ಸಂಘದ ಕಟ್ಟಡ, ಕೆಎಟಿ, ಹೈಕೋರ್ಟ್, ಜಯದೇವ, ಕಿದ್ವಾಯಿ, ಟ್ರಾಮಾ ಕೇರ್ ಸೆಂಟರ್, ಕೇಂದ್ರಿಯ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಗಮನಾರ್ಹ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಜಾರಿಗೆ ತಂದಿದ್ದಾರೆ. ನಿಮ್ಮೆಲ್ಲರ ಮತದಾನದ ಆಶೀರ್ವಾದದಿಂದ ಇಷ್ಟೆಲ್ಲಾ ಅಭಿವೃದ್ಧಿಗೆ ಕಾರಣವಾಯಿತು ಎಂದರು.
ಕಳೆದ ಹತ್ತು ವರ್ಷದಲ್ಲಿ 30,000 ಕಾಮಗಾರಿಗಳು 8,000 ಮೆಡಿಕಲ್, 22,219 ಇಂಜಿನಿಯರಿಂಗ್, 5,500 ಫಾರ್ಮಸಿ, 3,448 IHRC ಸೀಟುಗಳು ಪಡೆದುಕೊಳ್ಳಲಾಗಿದೆ ಹಾಗೂ 1,19,419 ನೇರ ನೇಮಕಾತಿ ಮಾಡಲಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಆರ್ಟಿಕಲ್ 371 (J) ತಿದ್ದುಪಡಿಯಿಂದ ಎಂದರು.
ಮುಂದಿನ ಐದು ವರ್ಷದಲ್ಲಿ ಕಲಬುರಗಿಯ ಚಿತ್ರಣವನ್ನೇ ನಾವು ಬದಲಾಯಿಸಲಿದ್ದೇವೆ. ಇದಕ್ಕೆ ತಕ್ಕಂತೆ ರಾಧಾಕೃಷ್ಣ ಅವರು ಈಗಾಗಲೇ ನೀಲಿ ನಕ್ಷೆ ತಯಾರಿಸಿದ್ದಾರೆ. ಹಾಗಾಗಿ, ಕಲಬುರಗಿಯ ಅಭಿವೃದ್ದಿಗಾಗಿ ನೀವೆಲ್ಲ ಸಹಕರಿಸಿ, ಯುವಕರ ಭವಿಷ್ಯ ನಿರ್ಮಿಸುವ ನಮ್ಮ ಕೆಲಸಕ್ಕೆ ನಿಮ್ಮೆಲ್ಲ ಮತ ಹಾಕುವ ಮೂಲಕ ನಮ್ಮೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.


