ಗೋವಾ ಕನ್ನಡಿಗರನ್ನು ಕನ್ನಡಿಗರೇ ಉಳಿಸಬೇಕು

2 years ago

ಪರ್ಸನ್‌ ಆಫ್‌ ಓರಿಜಿನ್‌ ಗೋವನ್‌ (ಪೋಗೋ) ಅಭಿಯಾನದ ಮೂಲಕ ಗೋವಾ ಕನ್ನಡಿಗರನ್ನು ಅಲ್ಲಿನ ಸರಕಾರ ಮತ್ತೆ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡುತ್ತಿದೆ. ಆದ್ದರಿಂದ ಕನ್ನಡಿಗರ ಮೇಲೆ ಆಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯವನ್ನು ತಡೆಯಲು ಮಾನ್ಯ ಮುಖ್ಯಮಂತ್ರಿಗಳಾದ @siddaramaiah ರವರು ಕೂಡಲೇ ಗೋವಾ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಅಲ್ಲದೇ ಅಲ್ಲಿನ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.

ಕಳೆದ 70 ವರ್ಷಗಳಿಂದ ಗೋವಾದಲ್ಲಿ ವಾಸಿಸುತ್ತಿರುವ ಕರ್ನಾಟಕ ಮೂಲದ ಲಕ್ಷಾಂತರ ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸಲೆಂದೇ ಈ ಅಭಿಯಾನವನ್ನು ಗೋವಾದಲ್ಲಿ ಆರಂಭಿಸಲಾಗಿದೆ. ಆಡಳಿತ ಪಕ್ಷ ಬಿಜೆಪಿ ಈ ಕೆಲಸಕ್ಕೆ ಹಿಂಬಾಗಿಲಿನಿಂದ ಬೆಂಬಲ ನೀಡುವ ಕೆಲಸ ಮಾಡುತ್ತಿದೆ.

ಗೋವಾದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ಅಲ್ಲಿನ ಸರಕಾರಗಳು ಒಂದಲ್ಲ ಒಂದು ನೆಪದಲ್ಲಿ ತೊಂದರೆ ನೀಡುತ್ತಾರೆ. 3 ವರ್ಷಗಳ ಹಿಂದೆ ಬೈನಾ ಕಡಲ ತೀರದಲ್ಲಿ ವಾಸವಾಗಿದ್ದ ಸಾವಿರಾರು ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿ ಕನ್ನಡಿಗರನ್ನು ಅತಂತ್ರಗೊಳಿಸಲಾಗಿತ್ತು. ಆಗಲೂ ಕರ್ನಾಟಕ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತೆ ಅದೇ ದಾರಿಯಲ್ಲಿ ಗೋವಾ ಸರಕಾರ ಅಭಿಯಾನ ಆರಂಭಿಸಿರುವುದು ಖಂಡನೀಯ.

ಗೋವಾ ಕನ್ನಡಿಗರನ್ನು ಕನ್ನಡಿಗರೇ ಉಳಿಸಬೇಕು.

– ಅಪ್ಸರ್ ಕೊಡ್ಲಿಪೇಟೆ

Leave a Reply