ಭಾರತದ ಅರ್ಥವ್ಯವಸ್ಥೆಯ ಅಸಮಾನತೆಯ ವಿರಾಟ್ ಸ್ವರೂಪ ತಿಳಿದುಕೊಳ್ಳಬೇಕೆ?

2 years ago

ಭಾರತದ ಅರ್ಥವ್ಯವಸ್ಥೆಯ ಅಸಮಾನತೆಯ ವಿರಾಟ್ ಸ್ವರೂಪ ತಿಳಿದುಕೊಳ್ಳಬೇಕೆ?

ನವ ಉದಾರವಾದ ಪ್ರತಿಪಾದಿಸಿದ್ದು ಏನು? ಅದು ಅಸಮಾನತೆಯ ಹಳ್ಳವನ್ನು ದೊಡ್ಡ ಕಣಿವೆ ಮಾಡಿದ್ದು ಹೇಗೆ?

ಆರ್ಥಿಕ ವ್ಯವಸ್ಥೆ ರೂಪಿಸುವುದರಲ್ಲಿ ಸರ್ಕಾರದ ಪಾತ್ರ ಏನು?

ಇಂತ ಹತ್ತು ಹಲವು ಪ್ರಶ್ನೆಗಳನ್ನು ಚರ್ಚಿಸುತ್ತಾ, ಟ್ರಿಲಿಯನ್ ಡಾಲರ್ ಎಕಾನಮಿ ಎಂದು ಕೊಚ್ಚಿಕೊಳ್ಳುವ ಈ ದಿನಗಳಲ್ಲಿ, ಅದು ಯಾರ ಹಿತವನ್ನು ಕಾಯುತ್ತಿದೆ ಎಂಬುದನ್ನು ಸರಳವಾಗಿ
ಬಿಚ್ಚಿಡುತ್ತದೆ ಚಂದ್ರ ಪೂಜಾರಿ ಅವರ ಈ ಕಿರುಹೊತ್ತಿಗೆ.

ಆಕೃತಿಯ ಹೊಸ ಪ್ರಕಟಣೆಯಾದ ‘ಟ್ರಿಲಿಯನ್ ಡಾಲರ್  ಎಕಾನಮಿಯ ಒಳ ಹೊರಗೆ- ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ’- ಈ ಕಿರು ಪುಸ್ತಕವನ್ನು ಓದಿ ಮತ್ತು ಓದಿಸಿ.. ಹೌದು ಇದನ್ನು ಗೆಳೆಯ ಗೆಳತಿಯರಿಗೆ, ಸ್ಟೂಡೆಂಟ್ಸ್ ಗೆ ಕೊಟ್ಟು ಓದಿಸಿ. ಜಗತ್ತಿನ ಹಲವೆಡೆಗಳಲ್ಲಿ ಆರ್ಥಿಕ ಅಸಮಾನತೆ ಚುನಾವಣಾ ವಿಷಯವಾಗಿದೆ. ಆದರೆ ಭಾರತದಲ್ಲಿ?? ಯಾವ ಪಕ್ಷಗಳೂ ಅದರ ಬಗ್ಗೆ ಕಾಳಜಿಯುತವಾಗಿ ಮಾತಾಡುತ್ತಿಲ್ಲ…

ಅಸಮಾನತೆಯ ಆಯಾಮಗಳು ಸಾಮಾನ್ಯರ ಮಾತು ತಿಳಿವಳಿಕೆ ಮತ್ತು ಚಿಂತನೆಯ ಭಾಗ ಆಗಬೇಕಿರುವುದು ಇಂದಿನ ತುರ್ತು ಅಗತ್ಯ.. ಈ ನಿಟ್ಟಿನಲ್ಲಿ ಚಂದ್ರ ಪೂಜಾರಿ ಅವರು ಬರೆದಿರುವ ‘ಟ್ರಿಲಿಯನ್ ಡಾಲರ್ ಎಕಾನಮಿಯ ಒಳಹೊರಗೆ – ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ’ ಒಂದು ಚಿಮ್ಮು ಹಲಗೆಯಾಗಬಲ್ಲದು.

80 ಪುಟಗಳ ಈ ಕಿರುಹೊತ್ತಿಗೆಗೆ 80. ನೀವು ಓದುವುದರೊಂಡಿಗೆ 5 10 20 30 40 50 100 ಹೀಗೆ ಪ್ರತಿಗಳನ್ನು ಕೊಂಡು ಹಂಚಿ ಎಂಬುವುದು ನನ್ನ ಕಳಕಳಿಯ ಮನವಿ.

1 ಪ್ರತಿಗೆ 10 ಪರ್ಸೆಂಟ್ ಡಿಸ್ಕೌಂಟ್ = 72/-
5 ಪ್ರತಿ ತಗೊಂಡರೆ 15 ಪರ್ಸೆಂಟ್ = 68 per copy
10 ಪ್ರತಿ ತಗೊಂಡರೆ 65 per copy
25 ಪ್ರತಿ ತಗೊಂಡರೆ 60 per copy
50 ಪ್ರತಿ ತಗೊಂಡರೆ 55 per copy
100 ಮತ್ತು ಹೆಚ್ಚಿನ ಪ್ರತಿಗಳನ್ನು ಕೊಂಡರೆ 50 per copy

ಯಾವುದೇ ಜಾಗಕ್ಕೆ ಪೋಸ್ಟ್ ಮೂಲಕ ಉಚಿತವಾಗಿ ಕಳುಹಿಸಲಾಗುವುದು.

ಸಂಪರ್ಕಕ್ಕೆ: 98866 94580

Leave a Reply