ಹರಿಯುವ ನೀರಿನಲ್ಲಿಯೇ ಸೇತುವೆ ದಾಟುವ ದುಸ್ಸಾಹಸ

4 years ago

ಕಲಬುರಗಿ: ಜಿಲ್ಲೆಯ ಹಲವಡೆ ಕಳೆದರೆಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿವೆ. ತುಂಬಿ ಹರಿಯುವ ನೀರಿನಲ್ಲಿಯೇ ನದಿ ದಾಟುವ ದುಸ್ಸಾಹಸ ಜನ ಮಾಡುತ್ತಿದ್ದಾರೆ.ಹಲವು ಕಡೆ ಸೇತುವೆ ಕಿತ್ತುಹೋದ ಪರಿಣಾಮ ಹೊಲಗಳಿಗೆ ಹೋಗಲು ರೈತರು ಕಷ್ಟ ಪಡುತ್ತಿದ್ದಾರೆ.

ವರುಣನ ಅಬ್ಬರದಿಂದ ಕಲಬುರಗಿ ಜಿಲ್ಲೆಯ ಗ್ರಾಮಸ್ಥರ ಜೀವನ ಅಕ್ಷರಶಃ ದುಸ್ಥರಗೊಂಡಿದೆ. ಧಾರಾಕಾರ ಮಳೆಯಿಂದ ಅಫಜಲಪುರ ತಾಲೂಕಿನ ರೇವೂರ (ಬಿ) ಗ್ರಾಮದ ಹಳ್ಳದ ನೀರು ಸೇತುವೆ ಮೇಲೆ ತುಂಬಿ ರಭಸವಾಗಿ ಹರಿಯುತ್ತಿದೆ. ರೇವೂರ (ಬಿ) – ಸಿದನೂರ ಗ್ರಾಮದ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ತುಂಬಿ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲೇ ನಡೆದುಕೊಂಡು ಸೇತುವೆ ದಾಟುವ ದುಸ್ಸಾಹಸ ಜನರು ಮಾಡುತ್ತಿದ್ದಾರೆ‌. ಕೊಂಚ ಯಾಮಾರಿದರೂ ನೀರಿನಲ್ಲಿ‌ ಕೊಚ್ಚಿಕೊಂಡು ಹೋಗುವ ಆತಂಕ ಎದುರಾಗಿದೆ.
ಎರಡು ದಿನ ಸುರಿದ ಧಾರಾಕಾರ ಮಳೆಯಿಂದಾಗಿ ಭೀಮಳ್ಳಿ- ಕೆರೆಬೋಸಗಾ ಗ್ರಾಮಕ್ಕೆ‌ ಸಂಪರ್ಕ‌ ಕಲ್ಪಿಸುವ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದ್ದು ಸುಮಾರು ಹತ್ತು ಕಿಲೋ ಮೀಟರ್ ದೂರ ಸೂತ್ತಾಗಿ ಗ್ರಾಮಸ್ಥರು ತೆರಳುತ್ತಿದ್ದಾರೆ. ಎರಡು ಗ್ರಾಮದ ಮಧ್ಯದಲ್ಲಿರುವ ಜಮೀನಿಗೆ ಹೋಗಲು ರೈತರು ಕಷ್ಟ ಪಡುತ್ತಿದ್ದಾರೆ‌. ಹಳೆ ಸೇತುವೆ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಆದರೂ ಮಳೆಯ ಕಾರಣದಿಂದಾಗಿ ಕಾಮಗಾರಿಗೆ ತೊಡಕುಂಟಾಗುತ್ತಿದೆ. ಮಳೆ ನಿಂತ ಕೂಡಲೆ ಶೀಘ್ರವಾಗಿ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯಗೊಳಿಸುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Leave a Reply