ಆಹಾರ ಸುರಕ್ಷತೆಯಿಂದ ಮನುಷ್ಯನ ಆರೋಗ್ಯ
ಉತ್ತಮ ಆಹಾರ ಸುರಕ್ಷತೆಗಾಗಿ ಜಾಗೃತಿ ಅಭಿಯಾನ
ಬೆಂಗಳೂರು: ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಪ್ರಖಾರ್ ಫೌಂಡೇಷನ್ ಮತ್ತು ರಾಷ್ಟ್ರೀಯ ಆಹಾರ ಸುರಕ್ಷತಾ ವತಿಯಿಂದ ಆಹಾರ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾ ಸಂಯೋಜಕರಾದ ಸೋಮಶೇಖರ್, ಸುಧಾಕರ್, ರಾಜ್ಯ ಯೋಜನಾ ಸಂಯೋಜಕಿ ರೇಣುಕಾ ಅಣ್ಣುರೆ ಮತ್ತು ಪ್ರಖಾರ್ ಫೌಂಡೇಷನ್ ಆಹಾರ ನಿರ್ವಾಹರಾದ ಮಹೇಂದ್ರಬಾಬು.ಆರ್., ಹರೀಶ್.ಎನ್.ಅಕೀಲ್, ಎಸ್.ಕಾರ್ತಿಕ್, ಕೆ.ಎಸ್.ವೆಂಕಟರಮಣ ಎಸ್. ಇತರ ಗಣ್ಯರು ಹಾಜರಿದ್ದರು.
ಆಹಾರ ಪದಾರ್ಥಗಳ ಉದ್ದಿಮೆದಾರರನ್ನು ಒಂದೇ ಸೂರಿನಡಿಯಲ್ಲಿ ನಿಬಂಧನೆ ಮತ್ತು ಪರಿವೀಕ್ಷಣೆಗೆ ಒಳಪಡಿಸುವುದಾಗಿದೆ. ಆಹಾರ ಮತ್ತು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುವ ವಿವಿಧ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು, ಮಾನವನ ಸೇವನೆಗೆ ಯೋಗ್ಯವಾದ ಆಹಾರವನ್ನು ಪೂರೈಸುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿರುತ್ತದೆ ಎಂದು ಪ್ರಖಾರ್ ಫೌಂಡೇಷನ್ ಅಭಿಪ್ರಾಯಪಟ್ಟಿದೆ.
ಈ ನಿಟ್ಟಿನಲ್ಲಿ ಪ್ರಖಾರ ಫೌಂಡೇಷನ್ ಮತ್ತು ಆಹಾರ ಗುಣಮಟ್ಟದ ನಿಯಂತ್ರಕ ಇಲಾಖೆ ಸಹಕಾರದಲ್ಲಿ ಬೀದಿ ಬದಿಯ ವ್ಯಾಪಾರಿಗಳು, ಆಹಾರ ಪದಾರ್ಥಗಳ ತಯಾರಕರು,ಸಾಗಣೆದಾರರು ಮತ್ತು ಚಿಲ್ಲರೆ ಮಳಿಗೆ ಮಾರಟಗಾರರು, ಹೋಟೆಲು ,ರೆಸ್ಟೋರೆಂಟ್ ಗಳು ಆಹಾರ ಸುರಕ್ಷತೆ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಯಿತು.
ಆಹಾರ ಸುರಕ್ಷತೆಯನ್ನ ವೈಜ್ಞಾನಿಕವಾಗಿ, ಶಿಸ್ತಾಗಿ ಬಳಸಬೇಕು. ಆಹಾರ ಸುರಕ್ಷತೆ ಇಲ್ಲದಿದ್ದರೆ ಅನಾರೋಗ್ಯ ತಡೆಗಟ್ಟಲು ಸಾಧ್ಯವಿಲ್ಲ. ಆದ್ದದರಿಂದ ಆಹಾರ ನಿರ್ವಹಣೆ, ತಯಾರಿಕೆ ಮತ್ತು ಸಂಗ್ರಹಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಆಹಾರ ಸುರಕ್ಷತೆಯ ಪರಿಗಣನೆಗಳು ಆಹಾರದ ಮೂಲವನ್ನು ಒಳಗೊಂಡಿವೆ ಎಂದು ಸಂಘಟಕರು ಹೇಳಿದರು.
ಆಹಾರ ಲೇಬಲಿಂಗ್, ಆಹಾರ ನೈರ್ಮಲ್ಯ, ಆಹಾರ ಸೇರ್ಪಡೆಗಳು ಮತ್ತು ಕೀಟನಾಶಕಗಳ ಅವಶೇಷಗಳು, ಹಾಗೆಯೇ ಜೈವಿಕ ತಂತ್ರಜ್ಞಾನದ ನೀತಿಗಳು ಮತ್ತು ಆಹಾರ ಮತ್ತು ಸರ್ಕಾರಿ ಆಮದು ಮತ್ತು ರಫ್ತು ನಿರ್ವಹಣೆಗೆ ಮಾರ್ಗದರ್ಶನಗಳು ತಪಾಸಣೆ ಮತ್ತು ಪ್ರಮಾಣೀಕರಣ ಆಹಾರ ವ್ಯವಸ್ಥೆಗಳು, ಗ್ರಾಹಕರ ಅಭ್ಯಾಸಗಳಿಗೆ ಮಾರುಕಟ್ಟೆಯನ್ನು ಪರಿಗಣಿಸುವಾಗ, ಆಹಾರವು ಮಾರುಕಟ್ಟೆಯಲ್ಲಿ ಸುರಕ್ಷಿತವಾಗಿರಬೇಕು ಮತ್ತು ಗ್ರಾಹಕರಿಗೆ ಸುರಕ್ಷಿತ ವಿತರಣೆ ಮತ್ತು ಆಹಾರವನ್ನು ತಯಾರಿಸುವುದು ಸಾಮಾನ್ಯ ಚಿಂತನೆಯಾಗಿದೆ ಎಂದು ಫೌಂಡೇಷನ್ ವತಿಯಿಂದ ವಿವರಣೆ ನೀಡಲಾಯಿತು.
ಆಹಾರ ಸುರಕ್ಷತೆ ಇಲ್ಲದೇ ಲಕ್ಷಾಂತರ ಜನರು ಆನಾರೋಗ್ಯ ಪೀಡಿತರಾಗುತ್ತಾರೆ. ಜನರ ಜೀವ ರಕ್ಷಣೆಗಾಗಿ ಆಹಾರ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.ಪ್ರಖಾರ್ ಫೌಂಡೇಷನ್ ಕಳೆದ ಎಂಟು ವರ್ಷಗಳಿಂದ ಆಹಾರ ಸುರಕ್ಷತಾ, ನಿಯಂತ್ರಣದ ಬಗ್ಗೆ ತರಬೇತಿ ನೀಡುತ್ತಿದೆ. ಆಹಾರ, ತಯಾರಕರು, ವಿತರಕರು ಕಡ್ಡಾಯವಾಗಿ ಆಹಾರ ಸುರಕ್ಷತಾ ತರಬೇತಿ ಪಡೆದಿರಬೇಕು ಮತ್ತು ಸರ್ಕಾರದ ವತಿಯಿಂದ ಆಹಾರ ಸುರಕ್ಷತಾ ತರಬೇತಿಯನ್ನು ಆನ್ ಲೈನ್ ಮತ್ತು ನೇರ ತರಬೇತಿ ನೀಡಲಾಗುತ್ತಿದೆ. ನಂತರ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.




