ಕೊವಿಡ್ ನಿಂದ ಮೃತಪಟ್ಟವರ ನೆನದು ಕಣ್ಣಿರು ಹಾಕಿದ ವಿ.ಸೋಮಣ್ಣ

4 years ago

ಕೊವಿಡ್ ನಿಂದ ಮೃತಪಟ್ಟವರ ನೆನದು ಕಣ್ಣಿರು ಹಾಕಿದ ವಿ.ಸೋಮಣ್ಣ

ಕೊವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಆಸರೆ ನಮ್ಮ ಕರ್ತವ್ಯ, ನಿಮ್ಮ ಜೊತೆಯಲ್ಲಿ ನಾವಿದ್ದೇವೆ ಎಂದು ಅಭಯ

300 ಕುಟುಂಬಗಳಿಗೆ ಪರಿಹಾರ ಧನ ವಿತರಣೆ

ಎಂಗಳೂರು: ಸಂಬಂಧಿಕರು, ಸ್ನೇಹಿತರು, ಕ್ಷೇತ್ರದ ಹಲವರು ಕೊವಿಡ್ ಸೋಂಕಿನಿಂದ ಮೃತಪಟ್ಟಿರುವುದನ್ನ ನೆನದು ವಸತಿ ಸಚಿವ ವಿ.ಸೋಮಣ್ಣ ಕಣ್ಣಿರು ಹಾಕಿದ ಘಟನೆ ನಡೆಯಿತು.

ಗೋವಿಂದರಾಜನಗರ ವಿಧಾನಸಭಾ ಮಾರುತಿ ಮಂದಿರ ವಾರ್ಡ್, ಸಂಗೊಳ್ಳಿ ರಾಯಣ್ಣ ಉದ್ಯಾನವನ ಅವರಣದಲ್ಲಿ ಕೊವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಧನ ಚೆಕ್ ಮತ್ತು ಮಂಜೂರಾತಿ ಆದೇಶ ಪತ್ರವನ್ನು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ಅರುಣ್ ಸೋಮಣ್ಣ ವಿತರಿಸಿದರು.

ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ವಾಗೀಶ್ ರಾಮಪ್ಪ, ದಾಸೇಗೌಡ, ಜಯರತ್ನ, ರೂಪ ಲಿಂಗೇಶ್ವರ್ ಮತ್ತು ಸ್ಲಂ ಬೋರ್ಡ್ ನಿರ್ದೇಶಕ ಕ್ರಾಂತಿರಾಜು ಪಾಲ್ಗೊಂಡಿದ್ದರು.

ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ದುರಂತದಲ್ಲಿ ಮಡಿದ ಎಲ್ಲರಿಗೂ ಶ್ರದ್ದಾಂಜಲಿ ಸಲ್ಲಿಸಿ 2 ನಿಮಿಷ ಮೌನಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತಾಡಿದ ವಿ.ಸೋಮಣ್ಣ, ಇದು ಕೊರೋನಾ ಎರಡನೇಯ ಅಲೆಯಿಂದ ಮೃತಪಟ್ಟ ಕುಟುಂಬದವರ ನೋವಿಗೆ ಸ್ಪಂದಿಸುವ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ.ಪ್ರಧಾನಿ ನರೇಂದ್ರ ಮೋದಿರವರ ದೂರದೃಷ್ಟಿ ಚಿಂತನೆ ಮತ್ತು ರಾಜ್ಯ ಸರ್ಕಾರದ ದಿಟ್ಟ ನಿಲುವು ಕ್ರಮಗಳಿಂದ ಕೊರೋನಾ ಸಾಂಕ್ರಮಿಕ ರೋಗ ಹತೋಟಿಯಲ್ಲಿದೆ ಎಂದರು.

ಕೊರೋನ ಸಾಂಕ್ರಮಿಕ ರೋಗದ ಭಯ ಮತ್ತು ಅಂಜಿಕೆಪಟ್ಟು ಸಾಕಷ್ಟು ಜನ ಮೃತಪಟ್ಟರು. ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದರು. ನೋವಿನಲ್ಲಿ, ಕಣ್ಣಿರಿನಲ್ಲಿ ಜೀವನ ಸಾಗಿಸುವ ಕುಟುಂಬಕ್ಕೆ ಆಸರೆಯಾಗಬೇಕು ಮತ್ತು ನಿಮ್ಮ ಕುಟುಂಬದ ಜೊತೆಯಲ್ಲಿ ನಾವಿದ್ದೇವೆ ಎಂದು ಆ ಕುಟುಂಬದ ಸಹಾಯಕ್ಕೆ ನಿಂತಿದ್ದೇವೆ ಎಂದರು.

ಬಿ.ಪಿ.ಎಲ್.ಕಾರ್ಡ್ ದಾರರ ಕುಟುಂಬಕ್ಕೆ 1.50 ಲಕ್ಷ ಚೆಕ್ ಮತ್ತು ಎ.ಪಿ.ಎಲ್. ಕುಟುಂಬದವರಿಗೆ 50 ಸಾವಿರ ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 65 ಹಾಸಿಗೆ ಸಾಮ್ಯರ್ಥವುಳ್ಳ ಐ.ಸಿ.ಯು.ಆಸ್ಪತ್ರೆ ನಿರ್ಮಿಸಲಾಗಿದೆ ಮತ್ತು ಕಿಡ್ನಿ ಸಂಬಂಧುಸಿದ ರೋಗಿಗಳಿಗೆ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದರು.

ಕೊರೋನ ಎರಡನೇಯ ಲಾಕ್ ಡೌನ್ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು 70 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಸೋಂಕಿತರಿಗೆ ಮನೆಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು. ಕೊವಿಡ್-19ರಿಂದ ಮೃತಪಟ್ಟ ತಂದೆ, ತಾಯಿ ಇಲ್ಲದಿರುವ ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕೆ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

Leave a Reply