ಸಾವಯವ ಹಾಲಿನ ಡೈರಿಗೆ ಭೇಟಿ ನೀಡಿದ ಮಹಿಮಾ ಪಟೇಲ್, ರವಿಕೃಷ್ಣಾರೆಡ್ಡಿ

4 years ago

ತುಮಕೂರು: ತಿಪಟೂರಿನ ಬಳಿ ಇರುವ Akshayakalpa ಸಾವಯವ ಹಾಲಿನ ಡೈರಿಗೆ ಇಂದು ಮಹಿಮಾ ಪಟೇಲ್ ಅವರೊಂದಿಗೆ ಕೆ ಆರ್ ಎಸ್ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಭೇಟಿ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿರುವ ರವಿಕೃಷ್ಣಾರೆಡ್ಡಿ, ಸಾವಯವ ಹಾಲಿನ ಡೈರಿಯ ಹಿರಿಯ ನೌಕರರಲ್ಲಿ ಒಬ್ಬರಾದ Manjunath H Holalu ತುಂಬಾ ಚೆನ್ನಾಗಿ ಇಡೀ ಘಟಕದ ಮತ್ತು ಈ ಡೈರಿಯ ಮೂಲ ಉದ್ದೇಶದ ಬಗ್ಗೆ ಪರಿಚಯ ಮಾಡಿಕೊಟ್ಟರು ಎಂದರು.

ಅಕ್ಷಯಕಲ್ಪದ ಮೂಲ ಪ್ರವರ್ತಕರಲ್ಲಿ ಒಬ್ಬರಾದ ಡಾ.GNS ರೆಡ್ಡಿಯವರ ಬಗ್ಗೆ ಮಹಿಮಾ ಪಟೇಲರಿಗೆ ವಿಶೇಷ ಗೌರವ. ಡಾ.ರೆಡ್ಡಿಯವರಿಗೂ ಮಹಿಮಾ ಪಟೇಲರ ಬಗ್ಗೆ ಗೌರವ ಮತ್ತು ಅಭಿಮಾನ. ಹಾಗಾಗಿ ಡಾ.ರೆಡ್ಡಿಯವರನ್ನು ಇಂದು ತಿಪಟೂರಿನ ಅವರ ಮನೆಯಲ್ಲಿ ಭೇಟಿ ಮಾಡಲಾಯಿತು ಎಂದರು.

ನಂತರ ಡಾ.ರೆಡ್ಡಿಯವರು Permaculture ವಿಧಾನದಲ್ಲಿ ತಾವು ರೂಪಿಸುತ್ತಿರುವ ತಮ್ಮ ಹೊಸ ತೋಟವನ್ನು ತೋರಿಸಲು ಕರೆದುಕೊಂಡು ಹೋದರು. ಅಲ್ಲಿ ತಮ್ಮ ಸಾಕಷ್ಟು ಚಿಂತನೆ ಮತ್ತು ಪ್ರಯೋಗಗಳನ್ನು ನಮ್ಮೊಡನೆ ಹಂಚಿಕೊಂಡರು ಎಂದಿದ್ದಾರೆ.

Leave a Reply