ಬೆಂಗಳೂರು: ಮತದಾನ ನ್ಯಾಯಯುತವಾಗಿ ಚಲಾಯಿಸಿ, ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದು ಶಿಕ್ಷಣ ತಜ್ಞ ಜಿಮುನಿರಾಜು ಕರೆನೀಡಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಡಾ.ಎಸ್ ಗೋಪಾಲರಾಜ್ ಕಾಲೇಜು ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಮತದಾನದ ಕುರಿತಾಗಿ ಅರಿವು ಮೂಡಿಸಲು ಜಾಥಾವನ್ನು ಕಾಲೇಜಿನಿಂದ ಆನೇಕಲ್ ನ ಟೌನ್ ಪ್ರಮುಖ ಬೀದಿಯಲ್ಲಿ ಸಂಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಓಟು ಒಂದು ಮೌಲ್ಯ, ಭಾರತದ ಪ್ರತಿಯೊಬ್ಬರಿಗೂ ಹಕ್ಕಿದೆ ಎಂದರು.
ವಕೀಲ ಆರ್ ವಿ ಮೂರ್ತಿ ಮಾತನಾಡಿ, ದುಡ್ಡಿಗೆ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ನಮ್ಮ ಮನೆಯಿಂದಲೇ ಶುರುಮಾಡಬೇಕು. ನಮಗೆ ತುಂಬಾ ಜವಾಬ್ದಾರಿ ಇದೆ. ನಾವು ನಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದರು.
ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಗಳು ಇದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಮತದಾನದ ಅರಿವನ್ನು ತಿಳಿಸುವುದರ ಜೊತೆಗೆ ಈ ರೀತಿ ಜನರಿಗೆ ಓಟಿನ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಗೋಪಾಲರಾಜ್ ಕಾಲೇಜು ವಿದ್ಯಾರ್ಥಿಗಳು, ಡಾ.ಹೇಮಾವತಿ, ಡಾ.ಸುನೀತಾ ಕುಮಾರಿ, ಮಂಜುನಾಥ ವಿ, ಕೋಕಿಲಾ ಎಂ, ಪ್ರವೀಣ್ ಕುಮಾರ್, ಸತೀಶ್ ಕುಮಾರ್ ಡಾ. ಪಾಂಡುರಂಗ, ವೀಣಾ, ರಶ್ಮಿ, ಡಾ. ಯೋಗೇಶ್ವರಿ, ಮುನಿರಾಜು, ಶೃತಿ ನಾಗವೇಣಿ, ನಂದಿನಿ, ಜವಲಿ ಮಂಜುನಾಥ್ ಗರೀಶ್ ಸೋಮಶೇಖರ್, ಹಲಪ್ಪನರ್ ನಿಂಗಪ್ಪ, ಚೈಪ್ರಕಾಶ್ ಹಾಜರಿದ್ದರು.




