ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸಂತ ಜೆರೋಸಾ ಶಾಲೆ ಜೆಪ್ಪು ಇದರ ಸಹಯೋಗದೊಂದಿಗೆ ಮೇ 13 ರಿಂದ 17 ರವರೆಗೆ ಜೆಪ್ಪು ಸಂತ ಜೆರೋಸಾ ಶಾಲೆಯ ಸಭಾಂಗಣದಲ್ಲಿ ಚಿಣ್ಣರ ಕಲರವ – 2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವು ಜರುಗಲಿದೆ.
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಬೇಸಿಗೆ ರಜಾ ಕಾಲದಲ್ಲಿ ನಮ್ಮ ಮನೆಯ ಮಕ್ಕಳು ವಿನಾಃ ಕಾರಣ ರಜೆಯನ್ನು ಪೋಲು ಮಾಡುವ ಬದಲು ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿದರೆ ಅವರಲ್ಲಿರುವ ಸುಪ್ತ ಪ್ರತಿಭೆಗಳಿಗೆ ನೀರೆರೆದು ಪೋಷಿಸಲು ಸಾಧ್ಯವಾಗುತ್ತದೆ. ಕೇವಲ 5 ದಿವಸಗಳ ಈ ಕಾರ್ಯಾಗಾರದಲ್ಲಿ ನಿಮ್ಮ ಮಕ್ಕಳು ತುಂಬಾ ವಿಷಯಗಳನ್ನು ಕಲಿತು ಸಂತೋಷಪಡಲಿದ್ದಾರೆ.
ಈಗಾಗಲೇ ಈ ಕಾರ್ಯಾಗಾರಕ್ಕೆ ಬೇಡಿಕೆ ಇರುವುದರಿಂದ ಪ್ರಾರಂಭದಲ್ಲಿ ಬಂದ 80 ವಿದ್ಯಾರ್ಥಿಗಳಿಗೆ (5ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ) ಮಾತ್ರ ಅವಕಾಶ. ಪ್ರವೇಶ ಶುಲ್ಕ – ರೂ.100/-. ಪ್ರವೇಶ ಪತ್ರವನ್ನು ಮೇ 5 ರೊಳಗೆ ಸಂಬಂಧಪಟ್ಟವರಿಗೆ ತಲುಪಿಸಬೇಕು. ಇಲ್ಲದಿದ್ದರೆ ಸಂಘಟಕರಿಗೆ ಕರೆ ಮಾಡಿ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಬೇಕು.
ಶಿಬಿರವು ಪ್ರತೀ ದಿನ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಲಿದೆ. ಪ್ರತೀದಿನ ಬೆಳಿಗ್ಗೆ ಮತ್ತು ಸಂಜೆ ಪಾನೀಯ ಹಾಗೂ ಫಲಾಹಾರವನ್ನು ವ್ಯವಸ್ಥೆ ಮಾಡಲಾಗುವುದು. ಮದ್ಯಾಹ್ನದ ಊಟವನ್ನು ಸ್ವತಃ ಮಕ್ಕಳೇ ಮನೆಯಿಂದ ತರತಕ್ಕದ್ದು. ಕಲಿಕೆಗೆ ಬೇಕಾದ ಎಲ್ಲಾ ರೀತಿಯ ಸಾಮಾಗ್ರಿಗಳನ್ನು ಸಂಘಟಕರೇ ಒದಗಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9448503739, 9964186046, 9845084707 ನಂಬರಿಗೆ ಸಂಪರ್ಕಿಸಿ.
ಇದು ನಿಮಗಾಗಿ, ನಿಮ್ಮ ಮನೆಯ ಮಕ್ಕಳಿಗಾಗಿ….
ಸಾಧ್ಯವಾದರೆ ಇತರ ಮಕ್ಕಳಿಗೂ forward ಮಾಡಿರಿ……
- ರೋಯ್ ಕ್ಯಾಸ್ಟಲಿನೋ
- ಸುನಿಲ್ ಕುಮಾರ್ ಬಜಾಲ್




