30 ಸಾಧಕಿ ವಿಪ್ರ ಮಹಿಳೆಯರಿಗೆ ಧೀ ಶಕ್ತಿ ಪುರಸ್ಕಾರ
ಬೆಂಗಳೂರು: ಶಂಕರಪುರಂನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಅಭಿಜಾತೆ-2024ರ ರಾಜ್ಯಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆ, ಸೇವೆಗೈದ ಬ್ರಾಹ್ಮಣ ಸಮುದಾಯದ 30 ಮಹಿಳೆಯರಿಗೆ ಧೀ ಶಕ್ತಿ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ಬ್ರಾಹಣ ಸಮುದಾಯದ ಮಹಿಳೆಯರು ಸಂಘಟಿತರಾಗಬೇಕು. ವಿಪ್ರ ಮಹಿಳೆಯರಲ್ಲಿ ಬಹಳಷ್ಟು ಸಾಧಕಿಯರು ಇದ್ದಾರೆ. ಆದರೂ ಕೆಲವು ಮಹಿಳೆಯರಿಗೆ ಸನ್ಮಾನಿಸಲು ಸಾಧ್ಯವಾಗಿದೆ. ಎಲ್ಲ ವಿಪ್ರ ಮಹಿಳೆಯರು ಸಾಧಕಿಯರೆ. ಪುರುಷರಿಗಿಂತ ಮಹಿಳೆಯರು ರಾಜಕೀಯ, ಕ್ರೀಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಛಲ, ಹುಮಸ್ಸು ಇದೆ ಎಂದರು.
ವಿಪ್ರ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ನಿಮ್ಮ ಸಹಕಾರಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇರುತ್ತದೆ ಎಂದರು.
ವಿಪ್ರ ಮಹಿಳಾ ಸಮ್ಮೇಳನದಲ್ಲಿ ಸ್ವಯಂ ಉದ್ಯೋಗದಲ್ಲಿ ತಯಾರಿಸಿದ ಆಹಾರ ಪದಾರ್ಥಗಳು, ಕರಕುಶಲ ಮತ್ತು ವಿವಿಧ ವಸ್ತುಗಳ 300 ಮಾರಟ ಮಳಿಗೆಗಳು ಭರ್ಜರಿ ಮಾರಾಟವಾಯಿತು. ಯಕ್ಷಗಾನ ಮತ್ತು ಭರತನಾಟ್ಯ ಸಂಗೀತ ಹಾಗೂ ಮಹಿಳಾ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಮಹಿಳಾ ವಿಭಾಗದ ಸಂಚಾಲಕರಾದ ಡಾ.ಶುಭಾಮಂಗಳ ಸುನೀಲ್, ಕರ್ನಾಟಕ ಸಂಸ್ಕೃತ ಮಹಾವಿಶ್ವವಿದ್ಯಾಲಯ ಉಪಕುಲಪತಿ ಡಾ.ಅಹಲ್ಯಾ ಶರ್ಮ, ಗರುಡ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗರುಡಾಚಾರ್ ವಿಪ್ರ ಮಹಿಳೆಯರಿಗೆ ಗೌರವಿಸಿ, ಸನ್ಮಾನಿಸಿದರು.




