ನ.28 ರಂದು ವಿಕಲಚೇತನರಿಗೆ ವಿವಿಧ ಕ್ರೀಡಾಕೂಟ

2 years ago

#Various #sports #event #disabled #people

ಬೆಂಗಳೂರು: ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24 ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ -2023 ರ ಅಂಗವಾಗಿ ವಿಕಲಚೇತನರಿಗೆ ನವೆಂಬರ್ 28 ರಂದು ಬೆಳಿಗ್ಗೆ 09.00 ಗಂಟೆಗೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಬುದ್ಧಿಮಾಂದ್ಯದವರಿಗೆ ಮ್ಯೂಸಿಕಲ್ ಚೇರ್, ಸಾಪ್ಟ್ ಬಾಲ್ ಥ್ರೋ (6 ರಿಂದ 15 ವರ್ಷ), 100 ಮೀಟರ್ ಓಟ, ಶಾರ್ಟ್ ಪುಟ್ (06 ರಿಂದ 25 ವರ್ಷಮೇಲ್ಪಟ್ಟು) , ದೃಷ್ಠಿದೋಷ / ಅಂಧದವರಿಗೆ 100 ಮೀಟರ್ ಓಟ, ಸಾಪ್ಟ್ ಬಾಲ್ ಥ್ರೋ (6 ರಿಂದ 15 ವರ್ಷ), ಲಾಂಗ್ ಜಂಪ್ ಮತ್ತು ಸ್ಕಿಪಿಂಗ್ (06 ರಿಂದ 25 ವರ್ಷ), ಮ್ಯೂಸಿಕಲ್ ಚೇರ್, ಶಾರ್ಟ್ ಪುಟ್ (25 ವರ್ಷ ಮೇಲ್ಪಟ್ಟು), ಶ್ರವಣದೋಷ ವಿಕಲತೆಯುಳ್ಳವರಿಗೆ ಕಪ್ಪೆ ಓಟ, ಬಾಂಬ್ ಇನ್ ದಿ ಸಿಟಿ ಹಾಗೂ ಮ್ಯೂಸಿಕಲ್ ಚೇರ್ (6 ರಿಂದ 10 ವರ್ಷ), 100 ಮೀಟರ್ ಓಟ, ಲಾಂಗ್ ಜಂಪ್, ಶಾರ್ಟ್ ಪುಟ್ (11 ರಿಂದ 14 ವರ್ಷ), ಜಾವಲಿನ್ ಥ್ರೋ, ಲಾಂಗ್ ಜಂಪ್ ಮತ್ತು 100 ಮೀಟರ್ ಓಟ (15 ರಿಂದ 18 ವರ್ಷ), 100 ಮೀಟರ್ ಓಟ, ಶಾರ್ಟ್ ಪುಟ್ (18 ವರ್ಷ ಮೇಲ್ಪಟ್ಟು) ಮತ್ತು ದೈಹಿಕ ವಿಕಲತೆಯರಿಗೆ ವೀಲ್ ಚೇರ್ ರೇಸ್, ಸ್ಲೋ ವಾಕ್ (6 ರಿಂದ 15 ವರ್ಷ), ವೀಲ್ ಚೇರ್ ರೇಸ್ , 100 ಮೀಟರ್ ಓಟ (16 ರಿಂದ 25 ವರ್ಷ), ಹಾಗೂ 100 ಮೀಟರ್ ಓಟ , ಶಾರ್ಟ್ ಪುಟ್ (25 ವರ್ಷ ಮೇಲ್ಪಟ್ಟು) ಕ್ರೀಡೆಗಳಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೂಸೂರು ರಸ್ತೆ, ಬೆಂಗಳೂರು ನಗರ ಜಿಲ್ಲೆ -560 029ಅಥವಾ ದೂರವಾಣಿ ಸಂಖ್ಯೆ: 080-29752324 ಗೆ ಸಂರ್ಕಿಸಬಹುದು.

Leave a Reply