ಕೆ.ಎಸ್.ಇ.ಬಿ.ಪುರುಷ ವಾಲಿಬಾಲ್ ವಾಜಪೇಯಿ ಕಪ್-2022 ಮುಡಿಗೆ
ದ್ವೀತಿಯ ಸ್ಥಾನ ಕರ್ನಾಟಕ
ಸಾಯಿ ಕೆ.ಎಸ್.ಇ.ಬಿ. ಮಹಿಳಾ ತಂಡ ಪ್ರಥಮ ಸ್ಥಾನ
ಬೆಂಗಳೂರು: ವಿವೇಕಾನಂದ ಆಟದ ಮೈದಾನ, ಶಂಕರಮಠದಲ್ಲಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ ಪ್ರಯುಕ್ತ 20ನೇ ವರ್ಷದ ವಾಜಪೇಯಿ ಕಪ್-2022 ರಾಷ್ಟ್ರಮಟ್ಟದ ಹೊನಲು, ಬೆಳಕಿನ ಪುರುಷ, ಮಹಿಳಾ ವಾಲಿಬಾಲ್ ಫೈನಲ್ ಪಂದ್ಯಾವಳಿ ನಡೆಯಿತು.
ಲೋಕಸಭಾ ಸದಸ್ಯ ಸದಾನಂದಗೌಡ, ಅದ್ಯಮ ಚೇತನ ಸಂಸ್ಥಾಪಕಿ ತೇಜಸ್ವಿನಿ ಆನಂತ್ ಕುಮಾರ್, ಮಾಜಿ ಉಪಮಹಾಪೌರ ಎಸ್.ಹರೀಶ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿನುತಾ ಹರೀಶ್ ರವರು ಪ್ರಶಸ್ತಿ ಪ್ರಧಾನ ಮಾಡಿದರು.
ಕರ್ನಾಟಕ ಮತ್ತು ಕೆ.ಎಸ್.ಇ.ಬಿ. ಪುರುಷರ ಫೈನಲ್ ಪಂದ್ಯದಲ್ಲಿ 25-22,25-27, ಮಳೆಯ ಕಾರಣದಿಂದ ಪಂದ್ಯ ರದ್ದು .
ಉತ್ತಮ ಪಾಯಿಂಟ್ ಗಳಿಸಿದ ಕೆ.ಎಸ್.ಇ.ಬಿ ತಂಡ ಪ್ರಥಮ ಸ್ಥಾನ ಹಾಗೂ ಟಾಸ್ ಮೂಲಕ ದ್ವೀತಿಯ ಸ್ಥಾನ ಕರ್ನಾಟಕ, ತೃತೀಯ ಸ್ಥಾನ ಬಿ.ಪಿ.ಸಿ.ಎಲ್. ಪಡೆಯಿತು.
ಪುರುಷರ ಪ್ರಥಮ ಸ್ಥಾನ ಪಡೆದ ತಂಡಕ್ಕೆ 1.75 ಲಕ್ಷ ನಗದು ಪುರಸ್ಕಾರ ನೀಡಲಾಯಿತು.
ದ್ವೀತಿಯ ಸ್ಥಾನ ಪಡೆದ ತಂಡಕ್ಕೆ 1.25 ಲಕ್ಷ ನಗದು ಪಾರಿತೋಷಕ ನೀಡಲಾಯಿತು
ಉತ್ತಮ ಆಟಗಾರ ಪ್ರಶಸ್ತಿಗೆ ಜೆರೋಮ್, ಅರವಿಂದ್, ಕಾರ್ತಿಕ್, ಅಶ್ವಲ್ ರೈ ಭಜನರಾದರು.
ಕೇರಳ ಪೊಲೀಸ್ ಮತ್ತು ಸಾಯಿ ಕೆ.ಎಸ್.ಇ.ಬಿ. ಮಹಿಳಾ ವಾಲಿಬಾಲ್ ತಂಡ ಪೈನಲ್ ನಲ್ಲಿ ಸೆಣಸಾಟ ನಡೆಯಿತು.
17-25, 14-25 ಕೆ.ಎಸ್.ಇ.ಬಿ.ಗೆಲುವು .
ಕೃಷ್ಣ, ಮಾಯಥಾಮಸ್, ಸೂರ್ಯರವರ ಆಕರ್ಷಕ ಹೊಡೆತಗಳಿಂದ ಕೆ.ಎಸ್.ಇ.ಬಿ.ಪ್ರಥಮ ಸ್ಥಾನ, ದ್ವೀತೀಯ ಸ್ಥಾನ ಕೇರಳ ಪೊಲೀಸ್, ಮೂರನೇಯ ಸ್ಥಾನ ತಮಿಳುನಾಡು.
ಪ್ರಥಮ ಸ್ಥಾನ ಪಡೆದ ಮಹಿಳಾ ತಂಡಕ್ಕೆ 75 ಸಾವಿರ ಮತ್ತು ದ್ವೀತಿಯ ಸ್ಥಾನ ಪಡೆದ ಮಹಿಳಾ ತಂಡಕ್ಕೆ 50 ಸಾವಿರ ನಗದು, ಪಾರಿತೋಷಕ ನೀಡಿಲಾಯಿತು.
ಉತ್ತಮ ಮಹಿಳಾ ವಾಲಿಬಾಲ್ ಪಟು ಅನುಶ್ರೀ, ಶರಣ್ಯ ಆಯ್ಕೆಯಾದರು.
ಪದ್ಮಶ್ರೀ ಪುರಸ್ಕೃತ ವಾಲಿಬಾಲ್ ಆಟಗಾರ ಜೋಸೆಫ್ ರವರಿಗೆ ಸನ್ಮಾನಿಸಲಾಯಿತು




