ಅಮಿತ್ ಶಾ ಕಾರ್ಯಕ್ರಮಕ್ಕೆ ಜನರನ್ನು ತರಲು ಸಹಕಾರ ಸಂಘಗಳ ಹಣ ಬಳಕೆ: CPIM ಖಂಡನೆ

3 years ago

ಮಂಡ್ಯ: ನಾಳೆ ನಡೆಯಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಣ ಬಳಸುತ್ತಿರುವುದನ್ನು CPIM ಮಂಡ್ಯ ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ.

ಅಮಿತ್ ಶಾ ಕಾರ್ಯಕ್ರಮಕ್ಕೆ ಜನ ಕರೆ ತರಲು, ಹಣ ವೆಚ್ಚ ಮಾಡುವಂತೆ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಒತ್ತಡ ಹಾಕುತ್ತಿರುವ ಮನ್ಮುಲ್ ಆಡಳಿತ ಮಂಡಳಿಯ ಸಹಕಾರಿ ವಿರೋಧಿ ನಡವಳಿಕೆ ಖಂಡನೀಯ. ಈ ಉದ್ದೇಶಕ್ಕೆ ಯಾವುದೇ ಕಾರಣಕ್ಕೂ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದ ಹಣ ಬಳಸದಂತೆ ಪ್ರತಿ ಷೇರುದಾರರು ವಿರೋಧಿಸಬೇಕೆಂದು CPIM ಕರೆ ನೀಡುತ್ತದೆ.

ಬಿಜೆಪಿಯ ರಾಜಕೀಯ ಬೆಳೆಸಲು ಸಹಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಈ ಕೂಡಲೇ ನಿಲ್ಲಬೇಕು, ರೈತರಿಗೆ ಉತ್ಪಾದನಾ ವೆಚ್ಚ ಭರಿಸುವ, ಹಾಲು ಖರೀದಿ ದರ ನೀಡಲು ಕೂಡ ಸಾಧ್ಯವಾಗದೇ ಇರುವ ಮನ್ಮುಲ್ ಸಂಸ್ಥೆಯ ಹಣವನ್ನು ಈ ರೀತಿ ದುರುಪಯೋಗ ಮಾಡುವುದು ರೈತ ವಿರೋಧಿ ಹಾಗೂ ಸಹಕಾರಿ ಸಂಘಗಳನ್ನು ನಾಶ ಮಾಡುವ ಹುನ್ನಾರದ ಭಾಗವಾಗಿದೆ.

ಜನರನ್ನು ಕರೆತರಲು, ಬೇಕಾದರೆ ರಾಜಕೀಯ ಪಕ್ಷಗಳಲ್ಲೇ ಅತ್ಯಂತ ಶ್ರಿಮಂತವಾಗಿರುವ ಬಿಜೆಪಿ , ಚುನಾವಣಾ ಬಾಂಡ್ ಗಳ ಮೂಲಕ ಅಕ್ರಮವಾಗಿ ಸಂಗ್ರಹಿಸಿರುವ ಸಹಸ್ರಾರು ಕೋಟಿ ಹಣದಲ್ಲಿ ಖರ್ಚು ಮಾಡಲಿ, ಬಿಜೆಪಿಯ ಖಯಾಲಿಗೆ ಬಡ ಹಾಲು ಉತ್ಪಾದಕರ ಹಣವನ್ನು ವ್ಯಯ ಮಾಡುವುದು ಬೇಡವೇ ಬೇಡ ಎಂದು CPIM ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.

Leave a Reply