ಮೈಸೂರು: ಮಾನ್ಯ ಆರೋಗ್ಯ ಸಚಿವರಾದ #ದಿನೇಶ್_ಗುಂಡೂರಾವ್, ಸ್ಥಳೀಯ ಶಾಸಕರಾಗಿರುವ #ಮಂಥರ್_ಗೌಡ, ಸಂಸದರಾಗಿ ಆಯ್ಕೆಯಾಗಿರುವ #ಯದುವೀರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ #ಬೋಸ್_ರಾಜ್ ರವರೇ ಕೊಡಗು ಜಿಲ್ಲೆಯ ಗಡಿಭಾಗದ ಗ್ರಾಮವಾಗಿರುವ #ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೆಲ್ದರ್ಜೆಗೆ ಏರಿಸಿ ಆಸ್ಪತ್ರೆಗೆ ಈಗಿರುವ ವ್ಯೆದ್ಯರೊಂದಿಗೆ ಇನ್ನೊರ್ವ ವ್ಯೆದ್ಯರನ್ನು ನೇಮಿಸಿ ಶಾಶ್ವತವಾಗಿ ಅಂಬುಲೆನ್ಸ್ ಮಂಜೂರು ಮಾಡಲು ಆಗ್ರಹಿಸುತ್ತೇನೆ ಎಂದು ಎಸ್.ಡಿ.ಪಿ.ಐ. ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
#ಕೊಡ್ಲಿಪೇಟೆಯ_ಪ್ರಾಥಮಿಕ_ಆರೋಗ್ಯ_ಕೇಂದ್ರದ_ಅವ್ಯವಸ್ಥೆಯ_ಒಂದು_ಸಣ್ಣ_ತುಣುಕು_ಇಲ್ಲಿದೆ_ನೋಡಿ ಎಂದು ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನೆನ್ನೆ ದಿನ ಬಸ್ಸು ಮತ್ತು ಕಾರ್ ನಡುವೆ ಅಪಘಾತವಾದ ಸಮೀಪದ ನಿವಾಸಿ ಸ್ನೇಹಿತರಾದ Umeshgowda Umesh (ಉಮೇಶ್ ಗೌಡ) ಉಮೇಶ್ ತನ್ನು ಓಮಿನಿ ಕಾರಿನಲ್ಲಿ 6 ಜನರನ್ನು ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಆ ಸಂಧರ್ಭದಲ್ಲಿ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಪತ್ರಕರ್ತರು ಆಗಿರುವ ಇನ್ನೊಬ್ಬ ಸ್ನೇಹಿತರಾಗಿರುವ Haneef Kodlipet ರವರು ಕಣ್ಣಾರೆ ಕಂಡ ಆಸ್ಪತ್ರೆಯ ಅವ್ಯವಸ್ಥೆಯ ದೃಶ್ಯಗಳು ಮತ್ತು ಸನ್ನಿವೇಶ….
ಎರಡು ಜನ ಡಿ ಗ್ರೂಪ್ ನವರು ಬಿಟ್ಟರೆ ಯಾರು ಇಲ್ಲ, ಒಬ್ಬರು ರಾತ್ರಿ ಡ್ಯೂಟಿ ಮಾಡಿ ಹೊರಡುವವರು ಇನ್ನೊಬ್ಬರು ಆವಾಗ ಡ್ಯೂಟಿಗೆ ಬದವರು, ರಾತ್ರಿ ಕಾರ್ಯ ನಿರ್ವಹಿಸಿ ಆಗ ತಾನೆ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ತೆರಳಿದ್ದ ನಂದಿನಿ ಸಿಸ್ಟರ್ ಪುನಃ ಬಂದು ಪ್ರಥಮ ಚಿಕಿತ್ಸೆ ನೀಡಿದರು, ಇವರು ಸಹ ಬರದಿದ್ದರೆ ಎರಡು ಜೀವ ಇಲ್ಲಿಯೇ ಹೊಗುತ್ತಿತ್ತೊ ಏನೋ…!
7.45 ಕ್ಕೆ ಅಪಘಾತವಾಗಿದೆ .. ಬಸ್ ನೊಳಗೆ ನುಗ್ಗಿದ ಕಾರನ್ನು ಉಮೇಶ್ ಮತ್ತು ಸ್ಥಳಿಯರು ಕಬ್ಬಿಣದ ಹಾರೆಯಲ್ಲಿ ಮೀಟಿ, 8 .5 ಕ್ಕೆ ಅಸ್ಪತ್ರೆಗೆ ತಂದಿದ್ದಾರೆ, ಪ್ರಥಮ ಚಿಕಿತ್ಸೆ 8.30 ಗೆ ದೊರಕಿದೆ, 9 ಗಂಟೆಗೆ ಅಂಬುಲೆನ್ಸ್ ಬಂದಿದೆ.
ನಮ್ಮೂರಿನ ಸರಕಾರಿ ಅಸ್ಪತ್ರೆಯ ವ್ಯವಸ್ಥೆಯನ್ನು ಯಾರತ್ತಿರ ಹೇಳುವುದು, ನಾನು ಸಹ ಎರಡು ಮೂರು ಬಾರಿ ಪತ್ರಿಕೆಯಲ್ಲಿ ವರದಿ ಮಾಡಿ ಸಂಬದ್ದಪಟ್ಟವರ ಗಮನಕ್ಕೆ ತರಲಾಯಿತು, ಏನು ಪ್ರಯೋಜವಾಗಲಿಲ್ಲ, ಹೇಳಬೇಕಾದವರು /ಕೇಳಬೇಕಾದವರು ಮೌನ, ಸಂಘ ಸಂಸ್ಥೆಗಳ ದ್ವನಿ ಅಡಗಿದೆ. ಇರುವ ಒಬ್ಬರು ವ್ಯೆದ್ಯರಿಂದ ಏನು ಮಾಡಲು ಸಾಧ್ಯವಿಲ್ಲ, ಅವರನ್ನು ಸಹ ವಾರದಲ್ಲಿ ಎರಡು ದಿನ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಡ್ಯೂಟಿಗೆ ಹಾಕುತ್ತಾರೆ.
ಬಾಕಿ ಉಳಿದ ರಕ್ಷಕಿ, ಶಿಕ್ಷಕಿ. ನಿರೀಕ್ಷಕಿ ಅಂತಾ ಸುಮಾರು ಜನ ಇದ್ದಾರೆ, ಇವರು ಏನು ಕರ್ತವ್ಯ ನಿರ್ವಹಿಸುತ್ತಾರೆ ಗೊತ್ತಿಲ್ಲ, ಇವರಿಂದ ಜನರಿಗೆ ಏನು ಅನುಕೂಲವಾಗಿದೆ ಎಂದು ಯಾರದರೂ ತಿಳಿಸಬೇಕು, ಇವರು 11 ಗಂಟೆಗೆ ಬ್ಯಾಗ್ ಹಾಕೊಂಡು ಟಿಪ್‌ಟಾಪಾಗಿ ಬರುತ್ತಾರೆ, ಬೆಳಿಗ್ಗೆ 11 ರಿಂದ ಮದ್ಯಾಹ್ನ ದವರೆಗೆ ಅಸ್ಪತ್ರೆ ತುಂಬಾ ಸಿಬ್ಬಂದಿಗಳಿರುತ್ತಾರೆ, ಅಮೇಲೆ ಎಲ್ಲಾ ಮಾಯ, ಇವರಿಗೆಲ್ಲ ಸರಕಾರ ಸಂಬಳ ನೀಡುತ್ತಿರುವುದು ಯಾಕೆ…? ಗೊತ್ತಿದ್ದವರು ತಿಳಿಸಿ,
ಏನಾದರೂ ಕಾರ್ಯಕ್ರಮ ನಡೆದರೆ ಇವರುಗಳ ಹೆಸರುಗಳು ಮಾತ್ರ ಪತ್ರಿಕೆಗಳಲ್ಲಿ ಬರಬೇಕು ಅಷ್ಟೇ, ಇಲ್ಲಿ ಇದ್ದಂತಹ 108 ಅಂಬುಲೆನ್ಸ್ ಅನ್ನು ಎರಡು ವರ್ಷದ ಹಿಂದೆ ಪ್ರಬಾವಿಗಳ ಒತ್ತಡಕ್ಕೆ ಇಲ್ಲಿಂದ ಬೇರೆಕಡೆ ವರ್ಗಾಯಿಸಿದರು ಎಂದು ಆಸ್ಪತ್ರೆಯ ಅವ್ಯವಸ್ಥೆಯೆಡೆಗೆ ಗಮನ ಸೆಳೆದಿದ್ದಾರೆ.



