ಬದಲಾಗದವರು
ಹಲವಾರು ಸಹಸ್ರಾರು ವರ್ಷಗಳಿಂದ ನೂರಾರು ಮಂದಿ ದಾರ್ಶನಿಕರು ಎಷ್ಟೇ ಅರಿವು ಮೂಡಿಸುವ ಮಾತುಗಳ ನಾಡಿದರು, ಬದಲಾಗದ ಮಂದಿ ಎಲ್ಲಾ ಕಾಲದಲ್ಲೂ ಇದ್ದಾರೆ.
ಕರೋನ ಸಂಕಷ್ಟದ ಕಾಲದಲ್ಲಿ ಬದುಕನ್ನು ಕಂಡ ಜನ ಬದಲಾಗುತ್ತಾರೆ ಎಂದು ಭಾವಿಸಿದ್ದು ಸರಿಯಲ್ಲ ಎಂದು ಈಗ ಅನಿಸುತ್ತಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಯಾವುದೋ ಹೆಣ, ಯಾರೋ ಸಂಸ್ಕಾರವನ್ನು ಮಾಡಿದ್ದು, ರೋಗಿ ಯಾರು, ಹೊತ್ತು ತಿರುಗಿದವರು ಮತ್ತ್ಯಾರೋ, ರಕ್ತ ಕೊಟ್ಟವರು ಯಾರು? ರಕ್ತ ಪಡೆದವರು ಮತ್ತಿನ್ಯಾರು, ಯಾರಿಗೋ ಉಸಿರಾಟದ ತೊಂದರೆ, ಎಲ್ಲಿಂದಲೋ ಆಮ್ಲಜನಕದ ಸಿಲಿಂಡರ್ಗಳ ರವಾನೆ, ಯಾರದೋ ಮನೆಯ ಊಟ, ನೀಗಿಸಿತು ಅದೆಷ್ಟೋ ಮಂದಿಯ ಹಸಿವು, ಜಾತಿ, ಮತ, ಧರ್ಮಗಳು ನೋಡಲು ಯಾರಿಗೂ ಪುರುಸೊತ್ತಿರಲಿಲ್ಲ.
ಬದುಕಿದರೆ ಸಾಕು ಎನ್ನುವ ಆತಂಕ, ಜನರನ್ನು ಬದುಕಿಸಲೇಬೇಕೆಂಬ ಮಾನವೀಯತೆ ಉಳ್ಳವರ ಪರದಾಟ, ಇನ್ನು ಮುಂದಾದರೂ ರಾಗ ,ದ್ವೇಷ, ಅಸೂಯೆ, ಮತ್ಸರ, ಮಾಯವಾಗಿ ಮಾನವೀಯತೆ ವಿಜೃಂಭಿಸುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದೆವು, ಹಾಗೆ ಆಗಲೇ ಇಲ್ಲ ,ಮತ್ತೆ ಅದೇ ಜಾತಿಯ ಮಾತು, ಧರ್ಮದ ಮಾತು, ವಿಭಜನೆಯ ಮಾತು, ಅಸಮಾನತೆಯ ಕೂಗು ಪ್ರಚೋದನೆಯ ನುಡಿಗಳು, ಅವಿಶ್ವಾಸ ಮೂಡಿಸುವ ಅಬ್ಬರದ ಭಾಷಣಗಳು.
ಬುದ್ಧನಿಂದ ಬದಲಾಯಿಸಲು ಆಗಲಿಲ್ಲ, ಬಸವಣ್ಣನ ಪ್ರಯತ್ನ ಮಾಡಿದ, ಅಂಬೇಡ್ಕರ್ ರವರು ಕೊಟ್ಟಿರುವ ಸಂವಿಧಾನವೆಂಬ ದೊಡ್ಡದಾದ ರಕ್ಷಣೆ ಒಂದಷ್ಟು ಜನರ ಬದುಕನ್ನ ಕಾಪಾಡುತ್ತಿದೆ.
ಕೊನೆಗೆ ಜನರಿಗೆ ಸತ್ಯವನ್ನು ತಿಳಿಸುವ, ಬದುಕಿನ ಅರ್ಥವನ್ನು ತೋರಿಸುವ ಜಾತಿ ಮತ ಧರ್ಮಗಳ ಮೀರಿಸಿದ್ದು ಮಾನವೀಯತೆ ಎಂದು ಸಾಕ್ಷಿಕರಿಸುವ ಘಟನೆಗಳ ಸಂಭವಿಸಿದರು ನಮ್ಮ ಆದ್ಯತೆಗಳು ಬದಲಾಗಲೇ ಇಲ್ಲ.
ಎಲ್ಲ ಕಾಲದಲ್ಲೂ ಮನಸ್ಸುಗಳು ಬದಲಾಗದಂತೆ ಕಾಯುವ ಜನರಿದ್ದಾರೆ, ಸಾಮರಸ್ಯ ಮೂಡದಂತೆ ಕಿಚ್ಚು ಹಚ್ಚುವರಿದ್ದಾರೆ, ಅಶಾಂತಿ ಇದ್ದರೆ ಮಾತ್ರ ಕೆಲವರಿಗೆ ನಾಯಕತ್ವ ಸಿಗುತ್ತದೆ, ಸಂಘರ್ಷಗಳಿದ್ದಾಗ ಮಾತ್ರ ಇವರ ವ್ಯಕ್ತಿತ್ವಗಳು ರೂಪುಗೊಳ್ಳುತ್ತವೆ.
ಅದಕ್ಕಾಗಿ ಒಂದಷ್ಟು ಮಂದಿ ಜಾತಿ ಮತ ಧರ್ಮದ ಹೆಸರಿನಲ್ಲಿ ಸಹಸ್ರಾರು ವರ್ಷಗಳಿಂದ ತಮ್ಮ ಬೇಳೆಯನ್ನ ಬೇಯಿಸಿಕೊಳ್ಳುತ್ತಲೇ ಇದ್ದಾರೆ. ಇಂಥವರ ನಾಜೂಕಿನ ದಿಕ್ಕು ತಪ್ಪಿಸುವ ಮಾತುಗಳಿಗೆ, ಮರುಳಾಗುತ್ತಲೇ ಇದ್ದಾರೆ. ಮತ್ತೆ ಮತ್ತೆ ಕತ್ತಲು ಆವರಿಸುತ್ತದೆ, ಸತ್ಯವ ಓಡಿಸುವ ಮಂದಿ ಹೆಚ್ಚು ಜಾಗೃತರಾಗಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




