ಬೆಂಗಳೂರು: ಹೊಂಬೇಗೌಡನಗರ ವಾರ್ಡ್ ಬಿ.ಜೆ.ಪಿ. ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಅಂದೋಲನ ಮತ್ತು ತ್ರಿರ್ವಣ ಧ್ವಜದ ಇತಿಹಾಸದ ಕಿರುಹೊತ್ತಿಗೆ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತಾಡಿದ ನಿವೃತ್ತ ನ್ಯಾಯಮೂರ್ತಿ ಶೈಲೇಂದ್ರಕುಮಾರ್, ಹರ್ ಘರ್ ತಿರಂಗಾ ಪ್ರತಿ ಮನೆ, ಮನದಲ್ಲಿ ರಾಷ್ಟ್ರೀಯ ಹಬ್ಬವಾಗಿದೆ. 75ನೇ ವರ್ಷದ ಅಮೃತ ಮಹೋತ್ಸವ ಪ್ರಧಾನಿ ನರೇಂದ್ರ ಮೋದಿರವರು ಕರೆ ನೀಡಿದ ಹರ್ ಘರ್ ತಿರಂಗಾ ಬಹಳ ಯಶ್ವಸಿಯಾಗಿ ಸಾಗುತ್ತಿದೆ. ದೇಶ, ನಾಡು, ನುಡಿಯ ಬಗ್ಗೆ ಎಲ್ಲರು ಅಭಿಮಾನ ಬೆಳಸಿಕೊಳ್ಳಿ, ಸಮ್ಮದ್ಧ, ಸಧೃಡ ಭಾರತ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.
ಗರುಡಾ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗರುಡಾಚಾರ್ ಮಾತನಾಡಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಹೊಂಬೇಗೌಡನಗರ ವಾರ್ಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹರ್ ಘರ್ ತಿರಂಗಾ ಅಂದೋಲನದ ಪ್ರಯುಕ್ತ ಪ್ರತಿ ಮನೆಗಳಿಗೆ ತ್ರಿರ್ವಣ ಧ್ವಜ ವಿತರಿಸಲಾಗುತ್ತಿದೆ. 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ದೇಶದ ನಾಗರಿಕರು ಪಾಲ್ಗೊಳಬೇಕು ಎಂದರು.
ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ರವರು ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ಶಾಸಕರಾದ ಉದಯಗರುಡಾಚಾರ್ ಅವರ ನೇತೃತ್ವದಲ್ಲಿ ಹೊಂಬೇಗೌಡನಗರ ವಾರ್ಡ್ ನಲ್ಲಿ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿ ಮನೆಮನೆಗಳ ಮೇಲೆ ಹಾರಿಸಲು ತ್ರಿರ್ವಣ ಧ್ವಜ ಉಚಿತವಾಗಿ ವಿತರಿಸಲಾಗುತ್ತಿದೆ ಮತ್ತು ತ್ರಿರ್ವಣ ಧ್ವಜದ ಇತಿಹಾಸವಿರುವ ಕಿರುಹೊತ್ತಿಗೆ ಪುಸ್ತಕವನ್ನು ಪ್ರತಿ ಮನೆಗಳಿಗೆ ತಲುಪಿಸಲಾಗುತ್ತಿದೆ ಎಂದರು.
ಇಂದಿನ ಯುವ ಸಮೂಹಕ್ಕೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿಯಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ಸಮೂಹ ಸಾಗಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕದ ಉದಯಗರುಡಾಚಾರ್, ವಾರ್ಡ್ ಅಧ್ಯಕ್ಷ ಅಜಿತ್, ನಿರ್ಮಾಪಕ ಜಾಕ್ ಮಂಜು, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಟ್ರಸ್ಟಿ ಅಮರೇಶ್ ಮೊದಲಾದವರು ಹಾಜರಿದ್ದರು.




