ರಾಷ್ಟ್ರದ ದುರ್ಬಲ ನಿರುದ್ಯೋಗಿ ಯುವಕರ ಜೀವನವನ್ನು ಸಾವಿನ ಬಲೆಯಲ್ಲಿ ಸಿಲುಕಿಸುತ್ತದೆ

2 years ago

ಯುದ್ಧ ಪೀಡಿತ ಇಸ್ರೇಲ್‌ಗೆ ಭಾರತೀಯ ಕಾರ್ಮಿಕರನ್ನು ಕಳುಹಿಸಲು ಅನುಕೂಲವಾಗುವಂತೆ ಅವರ ರಕ್ಷಣೆಯ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ಮತ್ತು ಉದ್ಯೋಗ/ಆದಾಯ ಖಾತರಿ ಇಲ್ಲದೇ ಭಾರತದ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಇಸ್ರೇಲ್ ಗೆ ಕಳುಹಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಸಿಐಟಿಯು ಖಂಡಿಸುತ್ತದೆ.

ಪ್ಯಾಲೆಸ್ಟೈನ್ ಮೇಲೆ ಅಮಾನವೀಯ ಬರ್ಬರ ನರಮೇಧದ ಯುದ್ಧವನ್ನು ತೆರೆದಿರುವ ಇಸ್ರೇಲ್‌ಗೆ ಭಾರತೀಯ ಕಾರ್ಮಿಕರನ್ನು ಒದಗಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಖಂಡಿಸುತ್ತದೆ ಮತ್ತು ಭಾರತೀಯ ಕಾರ್ಮಿಕರನ್ನು ಕಳುಹಿಸಲು ಇಸ್ರೇಲ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತದೆ.

ಯುದ್ಧಪೀಡಿತ ಪ್ರದೇಶವಾಗಿರುವ ಇಸ್ರೇಲ್‌ನಲ್ಲಿ ಉದ್ಯೋಗಕ್ಕಾಗಿ ಹೋಗುವುದಕ್ಕಾಗಿ ಕೇಂದ್ರ ಮತ್ತು ರಾಜ್ಯಗಳ ಬಿಜೆಪಿ ನೇತೃತ್ವದ ಸರ್ಕಾರಗಳ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಸಿಐಟಿಯು ಭಾರತೀಯ ಕಾರ್ಮಿಕರಿಗೆ ಮನವಿ ಮಾಡುತ್ತದೆ ಮತ್ತು ಇಲ್ಲಿನ ಸರ್ಕಾರವು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಪ್ಯಾಲೆಸ್ತೀನಿಯರನ್ನು ನಿರುದ್ಯೋಗಿಗಳಾಗಿಸುತ್ತಿದೆ.  ಪ್ಯಾಲೆಸ್ಟೈನ್ ಮೇಲೆ ಈಗಲೂ ನರಮೇಧದ ದಾಳಿಗಳನ್ನು ನಡೆಸುತ್ತಿದೆ.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯ (NSDC) ಮೇಲ್ವಿಚಾರಣೆಯ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯವು ನವೆಂಬರ್ 2023ರಲ್ಲಿ ಇಸ್ರೇಲ್‌ನೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅದರ ಪ್ರಕಾರ ನಿರ್ಮಾಣ ಮತ್ತು ಆರೈಕೆಯಂತಹ ನಿರ್ದಿಷ್ಟ ಕಾರ್ಮಿಕ ವಲಯಗಳಲ್ಲಿನ ತಾತ್ಕಾಲಿಕ ಉದ್ಯೋಗಗಳು ಭಾರತೀಯ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎನ್ನಲಾಗುತ್ತಿದೆ.

ಪ್ಯಾಲೆಸ್ಟೈನ್ ಮೇಲೆ ನಡೆಸುತ್ತಿರುವ ನರಮೇಧದ ಮಧ್ಯೆ, ಯುದ್ಧದ ನಡುವೆ ಒಪ್ಪಂದ ಏರ್ಪಟ್ಟಿತ್ತು. ಆದರೆ ಆ ದಿನಾಂಕದಂದು ಸಾವಿರಾರು ಸಾವುನೋವುಗಳು ವರದಿಯಾಗಿವೆ.  ಸಿಐಟಿಯು ಮತ್ತು ಅದರ ಅಂಗಸಂಸ್ಥೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಫ್ ಇಂಡಿಯಾ (ಸಿಡಬ್ಲ್ಯುಎಫ್‌ಐ) ಆಗ ಸ್ವತಃ ಇದನ್ನು ಖಂಡಿಸಿತ್ತು ಮತ್ತು ಇದು ರಾಷ್ಟ್ರದ ದುರ್ಬಲ ನಿರುದ್ಯೋಗಿ ಯುವಕರ ಜೀವನವನ್ನು ಸಾವಿನ ಬಲೆಯಲ್ಲಿ ಸಿಲುಕಿಸುತ್ತದೆ ಎಂದು ಹೇಳಿದೆ.

ಇದೀಗ ಇಸ್ರೇಲ್‌ನಿಂದ ಗಾಜಾದ ಮೇಲಿನ ಬರ್ಬರ ದಾಳಿ 100ನೇ ದಿನಕ್ಕೆ ಕಾಲಿಟ್ಟಿರುವಾಗಲೇ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಮತ್ತು ಹರಿಯಾಣ ಸರಕಾರಗಳು ಇಸ್ರೇಲ್‌ನಲ್ಲಿ ಉದ್ಯೋಗಕ್ಕಾಗಿ ಯುವಕರನ್ನು ಪರೀಕ್ಷಿಸಲು ಸಿದ್ಧತೆ ನಡೆಸಿವೆ ಎಂದು ವರದಿಯಾಗಿದೆ. ಆದರೆ ಕೇಂದ್ರ MSDE ಮತ್ತು NSDCಗಳು ಸಾಮಾಜಿಕ ಭದ್ರತೆ ಮತ್ತು ಇತರ ಕನಿಷ್ಠ ಕಾರ್ಮಿಕ ರಕ್ಷಣೆ ಸೇರಿದಂತೆ ಕಾರ್ಮಿಕರ ಭವಿಷ್ಯ ಮತ್ತು ಸುರಕ್ಷತೆಯ ಬಗ್ಗೆ ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ. ಅದೇ ಸಮಯದಲ್ಲಿ NSDC ಇಸ್ರೇಲ್‌ನಲ್ಲಿ ಉದ್ಯೋಗಗಳಿಗೆ ಅಗತ್ಯವಿರುವ ಕೌಶಲ್ಯ ಸೆಟ್‌ಗಳನ್ನು ಅಳವಡಿಸುವ ಹೆಸರಿನಲ್ಲಿ ನಿರುದ್ಯೋಗಿ ಯುವಕರನ್ನು ರೂ.10000 ಶುಲ್ಕದೊಂದಿಗೆ ಲೂಟಿ ಮಾಡುತ್ತಿದೆ.

ನರಹಂತಕ ಯುದ್ಧದಲ್ಲಿ ಮುಳುಗಿರುವ ದೇಶಕ್ಕೆ ಅಗ್ಗದ ಮಾನವ ಶಕ್ತಿಯನ್ನು ಒದಗಿಸಲು ಭಾರತ ಸರ್ಕಾರ ಮುಂದಾಗಿದೆ. ವಿಶ್ವಸಂಸ್ಥೆಯ ನಿರ್ಣಯದಂತೆ ಎರಡೂ ರಾಷ್ಟ್ರಗಳು ಕದನ ವಿರಾಮ ಘೋಷಿಸಬೇಕು ಮತ್ತು ಪ್ಯಾಲೆಸ್ಟೈನ್ ಅನ್ನು ಸ್ವತಂತ್ರ ಸಾರ್ವಭೌಮ ರಾಷ್ಟ್ರವೆಂದು ಗುರುತಿಸಿದೆ. ಆದರೆ ಇದುವರೆಗೂ ಅನುಸರಿಸಿಕೊಂಡ ಬಂದ ತನ್ನ ಅಲಿಪ್ತ ವಿದೇಶಾಂಗ ನೀತಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದು ಅಮಾನವೀಯ ಝಿಯೋನಿಸ್ಟ್ ನರಮೇಧದ ಯುದ್ಧದ ಇಸ್ರೇಲ್‌ನೊಂದಿಗೆ ನಿಂತು ಭಾರತೀಯ ಕಾರ್ಮಿಕರ ಜೀವ-ಜೀವನವನ್ನು ಪಣಕ್ಕಿಡುವ ಕ್ರಿಯೆಯಾಗಿದೆ. ಈ ಅಮಾನವೀಯ ಕ್ರಮದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸುತ್ತದೆ.

– ತಪನ್ ಸೇನ್, ಸಿಐಟಿಯು ಪ್ರಧಾನ ಕಾರ್ಯದರ್ಶಿ

Leave a Reply