ಜೈಪುರ: ದೇಶಭಕ್ತರು ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರು ಅನಾಹುತಕಾರಿ ಹೇಳಿಕೆ ನೀಡುವುದರಿಂದಲೇ ಕುಖ್ಯಾತರಾಗುತ್ತಾರೆ. ಅಂತಹದ್ದೇ ಮತ್ತೊಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿರುವುದು ಇದೇ ಬಿಜೆಪಿ ಸಚಿವ. ಸನ್ಮಾನ್ಯರ ಹೆಸರು ಬಾಬುಲಾಲ್ ಖರಾಡಿ. ಸದ್ಯಕ್ಕೆ ಇವರು ರಾಜಸ್ಥಾನದ ಬಿಜೆಪಿ ಸರ್ಕಾರದಲ್ಲಿ ಬುಡಕಟ್ಟು ಅಭಿವೃದ್ಧಿ ಸಚಿವ.
#WATCH | Udaipur | Rajasthan Minister Babulal Kharadi says, "…It is the dream of the Prime Minister to see that nobody sleeps hungry or without a roof over their head. You give birth to children, Prime Minister will build your houses. What is the difficulty?…" (09.01.2024) pic.twitter.com/ybx1RYyKgS
— ANI MP/CG/Rajasthan (@ANI_MP_CG_RJ) January 10, 2024
ಅಂದಹಾಗೆ ಇವರು ಕೊಟ್ಟಿರುವ ಹೇಳಿಕೆ ಏನು ಗೊತ್ತೇ? ನೀವು ಹೆಚ್ಚು ಮಕ್ಕಳನ್ನು ಹುಟ್ಟಿಸಿ. ಅವರಿಗೆ ಮನೆಗಳನ್ನು ಕಟ್ಟಿಕೊಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷದ ವತಿಯಿಂದ ರಾಜಸ್ಥಾನದ ಉದಯಪುರದ ನಾಯ್ ಗ್ರಾಮದಲ್ಲಿ ನಡೆದ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯಲ್ಲಿರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ಅವರ ಸಮ್ಮುಖದಲ್ಲೇ ಇಂತಹ ವಿಚಿತ್ರ ಹೇಳಿಕೆಯನ್ನು ನೀಡಿ ಪಕ್ಷವನ್ನು, ಪ್ರಧಾನಿ ನರೇಂದ್ರ ಮೋದಿಯವರನ್ನೂ ಮುಜುಗರಕ್ಕೆ ಸಿಲುಕಿಸಿದ್ದಾರೆ.
ಇವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವ್ಯಾಪಕವಾಗಿ ಜನರಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಬಿಜೆಪಿ ರೂಪಿಸುತ್ತಿದೆ. ಇದರ ಭಾಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಪ್ರಚಾರ ಮಾಡುತ್ತ ಇಂತಹ ಮಾತುಗಳನ್ನು ಆಡಿದ್ದಾರೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಬುಲಾಲ್ ಖರಾಡಿ ಎರಡು ಬಾರಿ ಉದಯಪುರ ಜಿಲ್ಲೆಯ ಝಡೋಲ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎರಡು ಮದುವೆಯಾಗಿರುವ ಇವರಿಗೆ ತಲಾ 4 ಗಂಡು, ಹೆಣ್ಣು ಸೇರಿ 8 ಮಕ್ಕಳಿದ್ದಾರೆ. ಮೂಲಗಳ ಪ್ರಕಾರ ಸ್ವತಃ ಬಾಬುಲಾಲ್ ಖರಾಡಿ ಮಣ್ಣಿನ ಮನೆಯಲ್ಲಿ ವಾಸವಾಗಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜನಸಂಖ್ಯಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿವೆ. ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಿ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಲು ಯೋಜನೆಗಳನ್ನು ರೂಪಿಸುತ್ತಿವೆ. ಆದರೆ, ಬಿಜೆಪಿ ಸಚಿವರು ಇಂತಹ ಹೇಳಿಕೆ ನೀಡಿರುವುದು ನಗೆಪಾಟಲಿಗೆ ಗುರಿಯಾಗಿದೆ.




