ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ 03 ರಿಂದ 5 ರವರೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ‘ಐಕಾಂತಿಕ ಸಮುದಾಯ’ ಇವರ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ “ಸಹಜ ಕೃಷಿ – ಆನಂದಮಯ ಜೀವನಕ್ಕೆ ದಾರಿ’’ ಎನ್ನುವ ವಿಷಯದ ಕುರಿತು ಮೂರು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಕೋರಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸೆ.03ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನೆ ನೆರವೇರಲಿದ್ದು, ತರಬೇತಿ ಕಾರ್ಯಕ್ರಮದಲ್ಲಿ ‘ಐಕಾಂತಿಕ ಸಮುದಾಯ’ದ ಪ್ರಗತಿಪರ ಸಹಜ ಕೃಷಿಕರಾದ ದಾವಣಗೆರೆಯ ರಾಘವ, ಚಿಕ್ಕಜಾಜೂರಿನ ವೀರೇಶ್, ಮಲೇಬೆನ್ನೂರಿನ ಪಾಂಡುರಂಗ, ದಾವಣಗೆರೆಯ ಅಭಿಶೇಕ್ ಮತ್ತು ಹರಿಹರದ ಜಬೀವುಲ್ಲಾ ಇವರುಗಳು ಕೃಷಿ ಬೆಳೆದು ಬಂದ ಹಾದಿ, ಸುಸ್ಥಿರ ಕೃಷಿ ಪದ್ದತಿಗಳು, ಸಹಜ ಕೃಷಿಯ ಪರಿಚಯ, ಸಜೀವ ಮಣ್ಣು, ನೀರು ನಿರ್ವಹಣೆ ಮತ್ತು ಸಹಜ ಕೃಷಿಯಿಂದ ಅಂತರ್ಜಲ ಮಟ್ಟ ಹೆಚ್ಚಿಸುವ ಬಗೆ, ಕಳೆ ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ಬಹುಪಯೋಗಿ ಜೀವಂತ ಬೇಲಿ, ತೋಟಗಾರಿಕೆ ಬೆಳೆಗಳಲ್ಲಿ ಗಿಡಗಳ ಸಂಯೋಜನೆ, ಹೊಸದಾಗಿ ತೋಟ ಕಟ್ಟಲು ಅನುಸರಿಸುವ ಕ್ರಮಗಳು, ಹಾಲಿ ಇರುವ ಹಳೆಯ ತೋಟವನ್ನು ಉತ್ತಮಪಡಿಸುವ ವಿಧಾನಗಳು, ತೋಟದ ಕೆಲಸ ಮತ್ತು ಖರ್ಚು ಕಡಿಮೆ ಮಾಡಲು ಇರುವ ಪರಿಹಾರಗಳು, ‘ಚೌಕಾಬಾರ’ ಪದ್ಧತಿಯಲ್ಲಿ ಸುಲಭವಾಗಿ ಬೆಳೆಯಬಹುದಾದ ಸೊಪ್ಪು ಮತ್ತು ತರಕಾರಿಗಳು, ಬಿದಿರಿನ ಮಹತ್ವ, ಸಹಜ ಕೃಷಿಯ ಪುಸ್ತಕಗಳ ಪರಿಚಯ ಮತ್ತು ಮಾರಾಟ, ನೇರ ಮಾರುಕಟ್ಟೆ ವ್ಯವಸ್ಥೆ ಹಾಗೂ ಸಹಜ ಜೀವನದ ವಿಚಾರಗಳ ಕುರಿತ ವಿಷಯಗಳನ್ನು ಮಂಡನೆ ಮಾಡಲಿದ್ದಾರೆ.
ಈಗಾಗಲೇ ಸಹಜ ಕೃಷಿಯಲ್ಲಿ ತೊಡಗಿರುವ ಮತ್ತು ತಮ್ಮ ತಾಕಿನಲ್ಲಿ ಸಹಜ ಕೃಷಿ ಪ್ರಾರಂಭಿಸಲು ಆಸಕ್ತಿ ಇರುವ ಹಾಗೂ ಕಾರ್ಯಗಾರದ 3 ದಿನವೂ ಕಡ್ಡಾಯವಾಗಿ ತರಬೇತಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿ ಭಾಗವಹಿಸುವ ಚಿತ್ರದುರ್ಗ ಜಿಲ್ಲೆಯ ಪ್ರತಿ ತಾಲ್ಲೂಕಿಗೆ 10 ರಂತೆ, ಆರು ತಾಲ್ಲೂಕಿನ 60 ಜನ ಉತ್ಸಾಹಿ ಯುವ ಕೃಷಿ ದಂಪತಿಗಳು ಅಥವಾ ಯುವ ರೈತಭಾಂದವರು ದೂರವಾಣಿ ಸಂಖ್ಯೆ 8277931058 ಗೆ ಕರೆ ಮಾಡಿ ಸೆ.02 ರೊಳಗೆ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು, ನೋಂದಾವಣಿ ಮಾಡಿಸದೆ ಇರುವ ಮತ್ತು ನಿಗದಿತ ಸಮಯದ ನಂತರ ಬರುವವರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಮೊದಲು ನೋಂದಾವಣಿ ಮಾಡಿಕೊಂಡ ಅರ್ಹ 60 ಜನ ರೈತ ಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.
ತರಬೇತಿ ಕಾರ್ಯಗಾರ ಮೊದಲನೇ ದಿನ ಬೆಳಿಗ್ಗೆ 9 ಗಂಟೆಗೆ, ಎರಡನೇ ಮತ್ತು ಮೂರನೇ ದಿನ ಬೆಳಿಗ್ಗೆ 6.30 ರಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಅಧಿವೇಶನ ಮತ್ತು ಚಟುವಟಿಕೆಗಳನ್ನು ಒಳಗೊಂಡಿರುವುದರಿಂದ ಆಸಕ್ತ ಉತ್ಸಾಹಿ ಯುವ ರೈತಭಾಂದವರು ಭಾಗವಹಿಸುವಂತೆ ಕೋರಿದೆ.




