ಶಿವಮೊಗ್ಗ: ಪಶು ಸಂಗೋಪನೆಯ ಆಧುನಿಕ ಪದ್ಧತಿಗಳು ಹಾಗೂ ಯೋಜನೆಗಳ ಕುರಿತು ಪಶು ಸಖಿಯರು ವಿವಿಧ ಹಂತಗಳಲ್ಲಿ ತರಬೇತಿ ಪಡೆದು ರೈತರಿಗೆ ಮಾಹಿತಿಯನ್ನು ನೀಡಿ ಅವರ ಆದಾಯ ಹೆಚ್ಚಿಸುವಲ್ಲಿ ಸಹಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಜಿ.ಪಂ ಉಪ ಕಾರ್ಯದರ್ಶಿ ಸುಜಾತ ತಿಳಿಸಿದರು.
ಸಂಜೀವಿನಿ ಕೆಎಸ್ಆಯರ್ಎತಲ್ಪಿಂಎಸ್, ಬೆಂಗಳೂರು, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೃಷಿ ವಿಜ್ಞಾನ ಕೇಂರ ಶಿವಮೊಗ್ಗ ಇವರುಗಳ ಸಹಯೋಗದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿರುವ ‘ಸಮಗ್ರ ಜಾನುವಾರು ನಿರ್ವಹಣೆ ಕುರಿತಾದ ಕೃಷಿ ಜೀವನೋಪಾಯ’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಶುಸಖಿಯರು ಸರ್ಕಾರದ ವಿವಿಧ ಯೋಜನೆಗಳು, ಕಾರ್ಯಕ್ರಗಳ ಬಗ್ಗೆ ತಿಳಿದುಕೊಂಡು ಸೇವಾ ಮನೋಭಾವದಿಂದ ರೈತರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ರೈತರು ಅಭಿವೃದ್ದಿ ಹೊಂದಲು ಸಹಕರಿಸಬೇಕು ಎಂದು ಕರೆನೀಡಿದರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಬಿ ಯಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನೆಗಳನ್ನು ರೈತರಿಗೆ ತಲುಪಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಿ.ಪಂ. ಯೋಜನಾ ನಿರ್ದೇಶಕಿ ನಂದಿನಿ ಬಿ ಆರ್ ಮಾತನಾಡಿ, ಹೊಸ ಹೊಸ ಲಸಿಕೆಗಳು, ಆಹಾರ, ವಿವಿಧ ತಳಿಗಳ ಬಗ್ಗೆ ಮಾಹಿತಿ ತಿಳಿದುಕೊಂಡು ರೈತರು ಅಳವಡಿಸಿಕೊಳ್ಳಲು ಪಶುಸಖಿಯರು ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಬೇಕು ಎಂದು ಕರೆನೀಡಿದರು.
ಹಿರಿಯ ವಿಜ್ಞಾನಿ ಡಾ.ಜಿ.ಕೆ ಗಿರೀಶ್ ಮಾತನಾಡಿ, ಪಶುಪಾಲನೆ ಇಲ್ಲದೆ ಕೃಷಿ ನಿರ್ವಹಣೆ ಸಾಧ್ಯವಿಲ್ಲ. ರೈತರ ಆದಾಯ ಹೆಚ್ಚಿಸುವಲ್ಲಿ ಪಶುಸಂಗೋಪನೆ ಮೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಪಶು ಸಂಗೋಪನೆಯಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದೆ. ತರಬೇತಿಯಲ್ಲಿ ತಿಳಿಸಿದ ಮಾಹಿತಿಯನ್ನು ಪಶುಸಖಿಯರು ತಮ್ಮ ಗ್ರಾಮಗಳಲ್ಲಿ ತಿಳಿಸಿ ಪಶುಸಂಗೋಪನೆಯನ್ನು ಹೆಚ್ಚು ಲಾಭದಾಯಕವಾಗಿ ಮಾಡಬೇಕೆಂದು ತಿಳಿಸಿದರು.
ಕೆಎಸ್ಎಳನ್ಯುಿಎಹೆಚ್ಎನಸ್ ನ ಸಹ ವಿಸ್ತರಣಾಧಿಕಾರಿ ಡಾ.ಬಿ.ಸಿ.ಹನುಮಂತರಾಯ ಮಾತನಾಡಿ, ರೈತರ ಆದಾಯವನ್ನು ಹೆಚ್ಚಿಸಲು ಸಾವಯವ ಕೃಷಿ, ಜಾನುವಾರುಗಳ ಗೊಬ್ಬರ, ಮೇವಿನ ಬೆಳೆಗಳು, ರೋಗಗಳ ಹತೋಟಿ ಕ್ರಮಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದರು.
ಮೊದಲೇ ಹಂತದ ತರಬೇತಿಯಲ್ಲಿ 33 ಪಶು ಸಖಿಯರು ಪಾಲ್ಗೊಂಡಿದ್ದರು. ಕೆವಿಕೆ ವಿಜ್ಞಾನಿ ಡಾ.ಅಶೋಕ್ ಎಂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಪಶುವೈದ್ಯಾಧಿಕಾರಿ ಡಾ.ನಾಗರಾಜ್ ಕೆ.ಹೆಚ್ ನಿರೂಪಿಸಿದರು. ತರಬೇತಿ ನೋಡಲ್ ಅಧಿಕಾರಿ ಡಾ.ಕೆಂಚಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ದಿವ್ಯಾ, ಕೃಷಿ ವಿಜ್ಞಾನ ಕೇಂದ್ರ, ಜಿ.ಪಂ, ಪಶುಪಾಲನಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.




