ಚಾಮರಾಜನಗರ: ನೀವು ಎಂತೆಂಥ ಕಳ್ಳರ ಕುರಿತು ಕೇಳಿರುತ್ತೀರಿ. ಆದರೆ ಇಂಥಾ ಕಳ್ಳರ ಕುರಿತು ಕೇಳಿದ್ದೀರಾ? ಪೊಲೀಸರು ಜಪ್ತಿ ಮಾಡಿ ಠಾಣೆಯ ಕಾಂಪೌಂಡ್ ಆವರಣದಲ್ಲಿ ನಿಲ್ಲಿಸಿರುವ ಬೈಕ್ ಕದ್ದು ಪರಾರಿಯಾಗಿದ್ದ ಖತರ್ನಾಕ್ ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಚಾಮರಾಜನಗರ ಪೊಲೀಸ್ ಠಾಣೆಯ ಗೇಟಿಗೆ ಹಾಕಿದ್ದ ಬೀಗ ಮುರಿದು ಒಳ ನುಗ್ಗಿ ಜಪ್ತಿ ಮಾಡಿದ್ದ ಬೈಕ್ ಕಳವು ಮಾಡಿರುವ ಅರ್ಫಾಜ್ ಹಾಗೂ ಇಮ್ರಾನ್ ಎಂಬ ಆರೋಪಿಗಳನ್ನು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ಅರ್ಫಾಜ್ ಮತ್ತು ಇಮ್ರಾನ್ ಕಾಂಪೌಂಡ್ ಹಾರಿ ಠಾಣಾ ಆವರಣಕ್ಕೆ ಬಂದು ಗೇಟಿನ ಬೀಗ ಮುರಿದಿದ್ದಾರೆ. ಅನಂತರ ಎನ್ ಡಿ ಪಿ ಎಸ್ ಕಾಯ್ದೆಯಡಿ ಜಪ್ತಿ ಮಾಡಿದ್ದ ಹೊಂಡಾ ಶೈನ್ ಬೈಕ್ ಕದ್ದೊಯ್ದಿದ್ದಾರೆ. ಬೆಳಗ್ಗೆ ಠಾಣೆಗೆ ಬಂದ ಪೊಲೀಸರು ಗೇಟ್ ಬೀಗ ಇಲ್ಲದಿರುವುದನ್ನು ಕಂಡು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರು ಬೈಕ್ ಕದ್ದೊಯ್ದಿರುವ ಸಂಗತಿ ಬಹಿರಂಗವಾಗಿದೆ.
ತಕ್ಷಣ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಇಬ್ಬರನ್ನು ಬಂಧಿಸಿ, ಬೈಕ್ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.




