ಸತ್ಯವನ್ನು ಹೇಳಿ ಜನಜಾಗೃತಿ ಗೊಳಿಸುತ್ತಿರುವ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ದನಿಯನ್ನು ಸುಳ್ಳು ಮೊಕದ್ದಮೆಗಳು ಮತ್ತು ಮಾಧ್ಯಮಗಳ ಮೂಲಕ ನಡೆಸುವ ಅಪಪ್ರಚಾರದಿಂದ ಉಡುಗಿಸಲಾಗದು. ರಾಹುಲ್ ಗಾಂಧಿಯವರ ಜೊತೆ ಇಡೀ ದೇಶ ಇದೆ.
ಸೂರತ್ ಸೆಷನ್ಸ್ ನ್ಯಾಯಾಲಯದ ತೀರ್ಪು ಅಂತಿಮ ಅಲ್ಲ, ಮೇಲಿನ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆ ನಮಗಿದೆ. ಸುಳ್ಳು ಪ್ರಚಾರ, ಪೊಳ್ಳು ಬೆದರಿಕೆಗಳು ಹೇಡಿಗಳ ಲಕ್ಷಣ. ಇದರಿಂದಾಗಿ ತಲೆ ತಗ್ಗಿಸುವ ಪ್ರಶ್ನೆಯೇ ಇಲ್ಲ. ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ, ಅಂತಿಮ ಗೆಲುವು ನಮ್ಮದೇ ಆಗಿರುತ್ತದೆ.
ಇದು ರಾಹುಲ್ ಗಾಂಧಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಅಲ್ಲ, ಇದು ಇಡೀ ದೇಶದ ಜನತೆಗೆ ಸಂಬಂಧಿಸಿದ್ದು. ಸರ್ಕಾರದ ವಿರುದ್ದ ಮಾತನಾಡಿದವರ ಮೇಲೆ ನೂರಾರು ಸುಳ್ಳು ಪ್ರಕರಣಗಳನ್ನು ಬಿಜೆಪಿ ಸರ್ಕಾರ ದಾಖಲಿಸುತ್ತಿದೆ,
ಇಂದು ರಾಹುಲ್ ಗಾಂಧಿ
ನಾಳೆ ನಾವು…. ಕೂಡಾ ಆಗಬಹುದು,
ಎಚ್ಚರ..!!
-ಸಿದ್ದರಾಮಯ್ಯ, ಮಾಜಿ ಸಿಎಂ
