ಬಡ ವಿದ್ಯಾರ್ಥಿಗೆ ನೆರವಾದ ಸಚಿವ ಭೈರತಿ ಸುರೇಶ್: ವೈದ್ಯಕೀಯ ಶಿಕ್ಷಣಕ್ಕೆ ವೈಯಕ್ತಿಕ ನೆರವು

2 days ago

ಬೆಂಗಳೂರು: ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಅವರು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಯೊಬ್ಬರಿಗೆ ಮಾನವೀಯ ನೆರವು ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಸತ್ತೂರು ಗ್ರಾಮದ ನಿವಾಸಿ ರವಿಕುಮಾರ್‌ ಅವರು ಬಳ್ಳಾರಿಯ VIJANAGAR INSTITUTE OF MEDICAL SCIENCES ಕಾಲೇಜಿನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರವಿಕುಮಾರ್‌ ಅವರು ಸಚಿವರ ಗೃಹ ಕಚೇರಿಗೆ ಭೇಟಿ ನೀಡಿದ್ದರು.ವಿದ್ಯಾರ್ಥಿಯ ಶೈಕ್ಷಣಿಕ ಪರಿಸ್ಥಿತಿಯನ್ನು ಮನಗಂಡ ಸಚಿವ ಭೈರತಿ ಸುರೇಶ್ ಅವರು ಈ ವರ್ಷದ ಕಾಲೇಜು ಶುಲ್ಕವನ್ನು ತಮ್ಮ ಸ್ವಂತ ಹಣದಿಂದ ಚೆಕ್‌ ಮೂಲಕ ನೀಡಿದರು.
“ವಿದ್ಯಾರ್ಥಿಯ ಜೀವನ ಉತ್ತಮವಾಗಲಿ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸಲಿ” ಎಂದು ಅವರು ಹಾರೈಸಿದರು.

ಸಚಿವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.


Leave a Reply