ಮಂಗಳೂರು: ಪಡೀಲ್ ಪಂಪ್ವೆಲ್ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ಸ್ವಾರ್ಟ್ ಸಿಟಿ ಈವರೆಗೂ ರಸ್ತೆ ನಿರ್ಮಿಸದೆ ಬೇಜವಾಬ್ದಾರಿ ವಹಿಸಿದೆ. ಕಳೆದ ಎರಡು ವರ್ಷಗಳಿಂದ ಈ ರಸ್ತೆ ನಿರ್ಮಾಣ ಕೆಲಸಗಳಿಂದ ದಿನನಿತ್ಯ ಓಡಾಡುವ ಜನ ಪರಿತಪಿಸುವಂತಾಗಿದೆ ಸಿಪಿಐಎಂ ನಾಯಕ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.
- ಕನ್ನಡ ಪರ ನೀತಿ ನಿರೂಪಣೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ
- ಕನ್ನಡ, ಕನ್ನಡಿಗರ ಪರ ದುಂಡುಮೇಜಿನ ಸಭೆ
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
ನಾಗುರಿ ಜಂಕ್ಷನ್ ನಲ್ಲಿ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನೇತೃತ್ವದಲ್ಲಿ ಪಡೀಲ್ ಪಂಪ್ವೆಲ್ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಾದ್ಯಂತ ಅಭಿವೃದ್ಧಿ ಕಾಮಗಾರಿಗಳ ಅವ್ಯವಸ್ಥೆ ನೋಡಿದರೆ ಇದೆಲ್ಲಾ ಶಾಸಕ ವೇದವ್ಯಾಸರ ಮುಖಕ್ಕೆ ಹಿಡಿದ ಕೈಗನ್ನಡಿ ಎಂದು ವ್ಯಂಗಸಿದರು. ರಸ್ತೆ ನಿರ್ಮಾಣ ತ್ವರಿತಗತಿಯಲ್ಲಿ ಪೂರ್ಣಗೊಳಿಸದಿದ್ದಲ್ಲಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ಮೇಯರ್ ಕಚೇರಿಗೆ ಮುತ್ತಿಗೆ ಹೋರಾಟ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಪಂಪ್ವೆಲ್ ಪಡೀಲ್ ರಸ್ತೆ ಕಾಮಗಾರಿ ಆಮೆವೇಗ ಮಾತ್ರವಲ್ಲ ಕಳಪೆ ಮಟ್ಟದಿಂದ ಕೂಡಿದೆ. ಅಳಪೆ ಕೆಂಬಾರ್, ರೈಲ್ವೇ ಸ್ಟೇಷನ್ ಬಳಿ ನಿರ್ಮಿಸುವ ರಸ್ತೆಯನ್ನೊಮ್ಮೆ ಗಮನಿಸಬೇಕು. ಒಂದು ಕಡೆ ಎತ್ತರ ಇನ್ನೊಂದೆಡೆ ತಗ್ಗುಗಳಲ್ಲಿ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಬಿಜೆಪಿ ಆಡಳಿತದಲ್ಲಿ ಯಾವೊಂದು ಕಾಮಗಾರಿಗಳನ್ನು ಸರಿಯಾಗಿ ನಿರ್ಮಿಸುತ್ತಿಲ್ಲ ಎಂದು ಆರೋಪಿಸಿದರು.
ಜನರ ಭಾವನಾತ್ಮಕ ಪ್ರಶ್ನೆಯನ್ನಿಟ್ಟು ಇತ್ತೀಚೆಗೆ ನಿರ್ಮಿಸಿದ ರಾಮ ಮಂದಿರವೇ ಸೋರುತ್ತಿವೆ. ದೆಹಲಿ ವಿಮಾನ ನಿಲ್ದಾಣ ಕುಸಿದಿದೆ. ಬಿಹಾರದಲ್ಲಿ 17 ದಿನಕ್ಕೆ 13 ಸೇತುವೆಗಳು ಬಿದ್ದು ಹೋಗಿವೆ. ಇನ್ನು ಮಂಗಳೂರು ಈ ಘಟನೆಗಳಿಗೆ ಹೊರತಾಗಿಲ್ಲ. ಈ ರೀತಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಅಭಿವೃದ್ಧಿ ಕಾಮಗಾರಿಯ ಬೇಜಬಾವ್ದಾರಿಗೆ ಯಾರ ಕೆನ್ನೆಗೆ ಬಾರಿಸಬೇಕೆಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಬಿ.ಕೆ ಇಮ್ತಿಯಾಜ್, ಯೋಗೀಶ್ ಜಪ್ಪಿನಮೊಗರು, ನಗರ ಸಮಿತಿ ಸದಸ್ಯ ಸಾಧಿಕ್ ಕಣ್ಣೂರು, ಡಿವೈಎಫ್ಐ ಮುಖಂಡ ಜಗದೀಶ್ ಬಜಾಲ್, ದಲಿತ ಸಂಘಟನೆಯ ಮುಖಂಡ ಕಮಲಾಕ್ಷ ಬಜಾಲ್, ಮದರ್ ತೆರೆಸಾ ವಿಚಾರ ವೇದಿಕೆಯ ಡೋಲ್ಪಿ ಡಿಸೋಜ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ಬಿ.ಎಮ್ ಮಾಧವ, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮಿಳಾ ದೇವಾಡಿಗ, ಯೋಗಿತಾ ಜಪ್ಪಿನಮೊಗರು ಹಾಜರಿದ್ದರು.
ಪ್ರತಿಭಟನೆ ನೇತೃತ್ವವನ್ನು ಸಿಪಿಐಎಂ ಬಜಾಲ್ ವಿಭಾಗ ಸಮಿತಿಯ ಸಂಚಾಲಕರಾದ ದೀಪಕ್ ಬಜಾಲ್, ವರಪ್ರಸಾದ್, ಅಶೋಕ್ ಸಾಲ್ಯಾನ್, ಜಯಪ್ರಕಾಶ್ ಜಲ್ಲಿಗುಡ್ಡೆ, ಧೀರಾಜ್ ಬಜಾಲ್, ಉದಯಚಂದ್ರ ರೈ, ಇಸಾಕ್ ಕಣ್ಣೂರು, ಅಶೋಕ, ಆನಂದ ಎನೆಲ್ಮಾರ್, ಸಿಂಚನ್, ತೇಜಸ್ವಿನಿ ಮುಂತಾವರು ವಹಿಸಿದ್ದರು.



