ಕುಡ್ತಡ್ಕದವರೆಗಿನ ರಸ್ತೆ‌ ಕಾಂಕ್ರಿಟೀಕರಣ ಕಾಮಗಾರಿ ತ್ವರಿತಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿ: ಸಿಪಿಐಎಂ

3 years ago

#Speed ​​#road #concreting #work #Kudtadka #make #open #CPIM

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಅಳಪೆ ದಕ್ಷಿಣ ವಾರ್ಡಿನ ಬಜಾಲ್ ಚರ್ಚ್ ಬಳಿಯಿಂದ ಕುಡ್ತಡ್ಕದವರೆಗಿನ ಮುಖ್ಯರಸ್ತೆಯ ಕಾಂಕ್ರಟೀಕರಣದ ಕಾಮಗಾರಿ ನಿಧಾನ ಗತಿಯಿಂದ ನಡೆಯುತ್ತಿರುವ ಕಾರಣ ಈ ಭಾಗದ ಜನರ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಿದೆ ಎಂದು ಸಿಪಿಐಎಂ ಅಳಪೆ ದಕ್ಷಿಣ ಶಾಖಾ ಸಮಿತಿಯು ಒತ್ತಾಯಿಸಿದೆ ಎಂದು ಶಾಖಾ ಕಾರ್ಯದರ್ಶಿ ವರಪ್ರಸಾದ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಈ ರಸ್ತೆಯ ಕಾಮಗಾರಿಯ ಕಾರಣಕ್ಕಾಗಿ ಈ ಮಾರ್ಗದಲ್ಲಿ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವನ್ನು ನೀಡದ ಪರಿಣಾಮ ಈ ಭಾಗದ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಬಹಳ ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಈಗಾಗಲೇ ಈ ರಸ್ತೆಯ ಕಾಮಗಾರಿಗಾಗಿ ವಾಹನ‌ಸಂಚಾರಕ್ಕೆ ಅವಕಾಶಕೊಡದೆ ಹಲವು ತಿಂಗಳುಗಳು ಕಳೆದಿದ್ದು ನಿಧಾನಗತಿಯ ಕಾಮಗಾರಿಯಿಂದಾಗಿ ಸ್ಥಳೀಯರು ಬಹಳ ಬೇಸತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಬರಿಸಿದ್ದರೂ ಕಾಮಗಾರಿ ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ‌ ಆಡಳಿತದಲ್ಲಿ  ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದ್ದು ಗ್ರಾಮೀಣ ಭಾಗದ ಬಹುತೇಕ ಕಡೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಯು ಆಮೆವೇಗದಲ್ಲಿ ಸಾಗುತ್ತಿದ್ದೆ ಎಂದು ಹೇಳಿದ್ದಾರೆ.

ಸದ್ಯ ಅಳಪೆ ದಕ್ಷಿಣ ವಾರ್ಡಿನ ಬಜಾಲ್ ಚರ್ಚ್ ಬಳಿಯ ರಸ್ತೆಯ ಸಮಸ್ಯೆಯಿಂದ ಬೇಸತ್ತಿರುವ ಜನರ ಆಕ್ರೋಶವು ಕಟ್ಟೆ ಓಡೆಯುವುದರ ಮುನ್ನ ನಿಧಾನಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ ಕೆಲಸವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಆಡಳಿತವನ್ನು ಒತ್ತಾಯ ಮಾಡಿದ್ದಾರೆ.

Leave a Reply