3,352.57 ಕೋಟಿ ರೂ. ಮೊತ್ತದ ರಾಜ್ಯದ ಪೂರಕ ಅಂದಾಜು ಮಂಡನೆ

8 months ago

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ತರಕಾರಿ ನೌಕರರ ಸಂಬಳ ಸೇರಿದಂತೆ ವಿವಿಧ ವಲಯಗಳ ವಿನಿಯೋಗಕ್ಕಾಗಿ 3,352.57 ಕೋಟಿ ರೂ. ಮೊತ್ತದ ರಾಜ್ಯದ ಪೂರಕ ಅಂದಾಜು ಮಂಡಿಸಲಾಗಿದೆ. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಸಮಾಜ ಕಲ್ಯಾಣ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಮಂಡಿಸಿದರು.

ಪೂರಕ ಅಂದಾಜುಗಳು ಹೆಚ್ಚುವರಿ ಅನುದಾನಗಳು ಮತ್ತು ಲೆಕ್ಕ ಹೊಂದಾಣಿಕೆಗಳಿಗೆ ಸಂಬಂಧಿಸಿವೆ. ಒಟ್ಟು ಮೊತ್ತದಲ್ಲಿ 0.60 ಕೋಟಿ  ರೂ. ಪ್ರಕೃತ ವೆಚ್ಚ ಮತ್ತು 3,351.97 ಕೋಟಿ  ರೂ. ಪುರಸ್ಕೃತ ವೆಚ್ಚ ಸೇರಿವೆ. ಮೀಸಲು ನಿಧಿಯಿಂದ ಭರಿಸಲಾಗುವ 262.20  ಕೋಟಿ ರೂ. ಸಹ ಪುರಸ್ಕೃತವಾಗಬೇಕಾಗಿದೆ. ಇದರಲ್ಲಿ ಕೇಂದ್ರ ಸಹಾಯಕ್ಕೆ ಸಂಬಂಧಿಸಿದ ರೂ. 820.70 ಕೋಟಿ ಸೇರಿದೆ. ಹೊರ ಹೋಗುವ ನಿವ್ವಳ ನಗದು ಮೊತ್ತ 2,269.66 ಕೋಟಿ ರೂ. ಆಗಿದೆ.

ಈ ಮೊತ್ತವನ್ನು ರಾಜ್ಯದ ರಾಜಸ್ವ ಸ್ವೀಕೃತಿಗಳು, ವೆಚ್ಚದ ಮರುಪ್ರಾಧಾನ್ಯತೆ, ಸಂಭವನೀಯ ಉಳಿತಾಯ ಮತ್ತು ಸಾಲದ ಮೂಲಕ ಭರಿಸಲಾಗುತ್ತದೆ ಎಂದು ಹೇಳಲಾಗಿದೆ.

Leave a Reply