ಶ್ರೀನಿವಾಸ್ ಪ್ರಸಾದ್ ಅಪರೂಪದ ಆದರ್ಶ ರಾಜಕಾರಣಿ

3 years ago

#SrinivasPrasad #rare #ideal #politician #hbd

ಚಾಮರಾಜನಗರ‌: ಶ್ರೀನಿವಾಸ್ ಪ್ರಸಾದ್ ಕರ್ನಾಟಕ ಕಂಡ ಅಪರೂಪದ  ಆದರ್ಶ ರಾಜಕಾರಣಿ ಎಂದು ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಹೇಳಿದರು.

ದೀನಬಂಧು ಆಶ್ರಮದಲ್ಲಿ ಸ್ವಾಭಿಮಾನಿ ಚಕ್ರವರ್ತಿ ವಿ ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ವಿ ಶ್ರೀನಿವಾಸ ಪ್ರಸಾದ್ 77ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿರುವ ಪ್ರಸಾದ್ ರವರು ನೇರ ನಡೆ ದಿಟ್ಟ ನುಡಿಯ ಸಾಮಾಜಿಕ ಬದ್ಧತೆಯ ವ್ಯಕ್ತಿ ಹಾಗೂ ಸಮಾಜದ ಅಸಮಾನತೆ ಅಸ್ಪೃಶ್ಯತೆ ಅನ್ಯಾಯ ವಿರುದ್ಧ ಹೋರಾಟ ಮಾಡುವ ಮಹತ್ವ ವ್ಯಕ್ತಿತ್ವವುಳ್ಳ ದಲಿತ ಧ್ವನಿಯಾಗಿದ್ದಾರೆ. ಅವರ 77ನೇ ಹುಟ್ಟುಹಬ್ಬವನ್ನು ದಿನಬಂಧು ಆಶ್ರಮದ ಮಕ್ಕಳೊಂದಿಗೆ ಆಚರಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.

ದೀನ ಬಂದು ಆಶ್ರಮದ ಪ್ರಭುಸ್ವಾಮಿ ಮಾತನಾಡಿ, ಸಂಸದರಾದ ವಿ ಶ್ರೀನಿವಾಸ ಪ್ರಸಾದ್ ರವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ದೀನಬಂದು ಆಶ್ರಮಕ್ಕೆ ಅನುದಾನ ನೀಡಿ ಸಹಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಒಂದು ದಿನ ಆಶ್ರಮಕ್ಕೆ ಭೇಟಿ ನೀಡಿ ನಮ್ಮ ಮಕ್ಕಳ ಜೊತೆ ಇರಬೇಕು ಎಂದು ನಮ್ಮ ಮಕ್ಕಳು ಆಡಳಿತ ವರ್ಗದವರು ಆಸೆ ಪಟ್ಟಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಆಶ್ರಮದ ಮಕ್ಕಳಿಗೆ ಬೆಳಗಿನ ಉಪಹಾರ ಮತ್ತು ನೋಟ್ ಪುಸ್ತಕ ಪೆನ್ನು ಪೆನ್ಸಿಲ್ ಗಳನ್ನು ಸ್ವಾಭಿಮಾನಿ ವಿ. ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ಅಧ್ಯಕ್ಷ ರಾಮಸಮುದ್ರ ಬಸವರಾಜ್ ವಿತರಣೆ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಗೋಪಾಲ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇದೇವರು, ವೀರಶೈವ ಮುಖಂಡ ಆರ್ ಪುಟ್ಟಮಲ್ಲಪ್ಪ, ಉದ್ಯಮಿ ವೆಂಕಟೇಶ್, ಮಂಜುನಾಥ್ ರಾಮಸಮುದ್ರ, ಅಶೋಕ್ ಮೊದಲಾದವರು ಹಾಜರಿದ್ದರು.

Leave a Reply