ಶಾಸಕರ, ಅಧಿಕಾರಿಗಳ ದಬ್ಬಾಳಿಕೆ ಮಾಗಡಿ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಆರೋಪ
ಬೆಂಗಳೂರು: ನಾಡು ಕಟ್ಟಿದ ಕೆಂಪೇಗೌಡರಿಗೆ ಅವರ ಪ್ರತಿಮೆ ಸ್ಥಳವಾಕಾಶ ಇಲ್ಲದಂತೆ ಆಗಿದೆ ಎಂಬುದು ಶೋಚನೀಯ ಸಂಗತಿ. ಕೆಂಪೇಗೌಡರು ಪ್ರತಿಮೆ ಕಳೆದ 22 ವರ್ಷಗಳ ಹಿಂದೆ ಪುರಸಭೆ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರತಿವರ್ಷ ಕೆಂಪೇಗೌಡ ಜನ್ಮದಿನಾಚರಣೆ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ ಎಂದು ಶ್ರೀ ಕೆಂಪೇಗೌಡ ಅಭಿವೃದ್ದಿ ಸಮಿತಿ ವತಿಯಿಂದ ಅಧ್ಯಕ್ಷ ಡಾ.ಹೆಚ್.ಎಂ.ಕೃಷ್ಣಮೂರ್ತಿ ಹೇಳಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾಗಡಿ ತಾಲೂಕು ಪುರಸಭೆ ಮುಂಭಾಗದಲ್ಲಿ ಇರುವ ಕೆಂಪೇಗೌಡರ ಪ್ರತಿಮೆ ಉಳಿವಿಗಾಗಿ ಮತ್ತು ಪ್ರತಿಮೆ ಸುತ್ತ ಮುತ್ತಲು ಇರುವ 400ಕ್ಕೂ ಹೆಚ್ಚು ಮರಗಳ ಮರಣಹೋಮ ಮಾಡಲು ಹೊರಟಿರುವ ಪುರಸಭೆ ಮತ್ತು ಸ್ಥಳೀಯ ಶಾಸಕರ ನಡವಳಿಕೆ ವಿರುದ್ದ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಅಭಿವೃದ್ದಿಯ ಹೆಸರಿನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮತ್ತು ಅದರ ಸುತ್ತಮುತ್ತಲ 400 ಮರಗಿಡಗಳಗಳನ್ನು ಕಡಿಯಲಾಗುತ್ತಿದೆ. ಮಾಗಡಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಬಾಲಕೃಷ್ಣರವರು ದುರಾಡಳಿತ ನಡೆಸುತ್ತಿದ್ದು, ಬೆದರಿಕೆ ಒಡ್ಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಆಡಳಿತ ಮಾಗಡಿ ಕೆಂಪೇಗೌಡರರ ಕುರಿತು ಅಭಿಮಾನವಿಲ್ಲದ ಶೂನ್ಯರು ಇವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಗಡಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದೇ ಕೊಂಪೆಯಾಗಿದೆ ಮತ್ತು ಜಿಲ್ಲಾ ದಂಡಾಧಿಕಾರಿ ಕಛೇರಿ ಮುಂಭಾಗದಲ್ಲಿ ನಾಯಿ ಸತ್ತು ಹತ್ತು ದಿನವಾದರು ತೆರವುಗೊಳಿಸಿಲ್ಲ. ಇವರು ಏನು ಅಭಿವೃದ್ದಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಕೋಟೆ ಕಂದಕ ಮುಚ್ಚುವ ಕಾರ್ಯ ಮಾಡುವ ಪ್ರಯತ್ನ ಮಾಡಿದರು. ಇದೀಗ ಕೆಂಪೇಗೌಡರ ಪ್ರತಿಮೆ ತೆಗೆಯುವ ಪ್ರಯತ್ನ, 400 ಮರಗಳ ತೆರವು ಕಾರ್ಯಕ್ಕೆ ತಡೆ ನೀಡಬೇಕು. ಕೋರ್ಟ್ ನಲ್ಲಿ ಕೇಸ್ ದಾಖಲಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಜನರ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಮಾಡಬಾರದು ಹಾಗೂ ಮರಗಳನ್ನು ಉಳಿಸಬೇಕು ಎಂದು ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಸಮುದಾಯದ ಮುಖಂಡ ಜಯರಾಮಯ್ಯ, ಹಿರಿಯ ಪತ್ರಕರ್ತ ಕುಮಾರ್ ಹಾಜರಿದ್ದರು.




