ಕರ್ನಾಟಕ ಇತಿಹಾಸದಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ಜೆಡಿಎಸ್ ಪಕ್ಷವು ಅಧಿಕಾರವನ್ನೇ ಪ್ರಮುಖ ಉದ್ದೇಶವನ್ನಾಗಿಸಿಕೊಂಡು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬದುಕಿನ ಹಿತಾಸಕ್ತಿಯನ್ನು, ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಇದು ಅದರ ಮುಂದುವರೆದ ಭಾಗವಷ್ಟೇ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಾಮಾಜಿಕ ಮತ್ತು ಐತಿಹಾಸಿಕ ಅವಮಾನ ಹಾಗೂ ದೌರ್ಜನ್ಯಗಳೇ ಮೀಸಲಾತಿಗೆ ಪ್ರಮುಖ ಮಾನದಂಡ ಎಂಬ ಸಂಗತಿಯು ಸ್ಪಷ್ಟವಾಗಿದೆ. ಇನ್ನು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸಹಾಯ ಮಾಡಲು ಸರ್ಕಾರಗಳು ಪೂರಕ ಯೋಜನೆಗಳನ್ನು ರೂಪಿಸುವುದು ಹೆಚ್ಚು ಸೂಕ್ತವೂ ಮತ್ತು ನ್ಯಾಯಯುತವಾದ ಬೆಳವಣಿಗೆಯೂ ಆಗಿದೆ.
ಇಂತಹ ಸಂದರ್ಭಗಳಲ್ಲಿ, ಜಾತ್ಯಾತೀತ ರಾಜಕೀಯ ಸಿದ್ಧಾಂತದ ಹಿನ್ನಲೆಯಲ್ಲಿ ಗುರುತಿಸಿಕೊಂಡು ವಿವಿಧ ರಾಜಕೀಯ ಅಧಿಕಾರವನ್ನು ಅನುಭವಿಸಿದ ದೇವೇಗೌಡರು ಇದೀಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಸಾಮಾಜಿಕ ವಾಸ್ತವಕ್ಕೆ ಎದುರಾಗಿ ನಿಂತು ಆರ್ಥಿಕತೆಯ ಮಾನದಂಡದಲ್ಲಿ ಮೀಸಲಾತಿಯನ್ನು ನೀಡುವ ಕುರಿತು ಸಲಹೆ ನೀಡುತ್ತಿದ್ದಾರೆ ಎಂದರೆ ಜೆಡಿಎಸ್ ಪಕ್ಷ ಮತ್ತದರ ಸಿದ್ಧಾಂತವನ್ನು ಮನುವಾದಿಗಳಿಗೆ ಅಡವಿಟ್ಟಿದ್ದಾರೆಂದೇ ಅರ್ಥ.
ಮಾಜಿ ಪ್ರಧಾನಿಯಾಗಿ ಸಾರ್ವಜನಿಕ ಜೀವನದಲ್ಲಿ ಸಾಮಾಜಿಕ ನ್ಯಾಯದ ಕುರಿತು ಅರಿವಿಲ್ಲದೇ, ಸಹಜವಾದ ಸಾರ್ವಜನಿಕ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿರುವ ದೇವೇಗೌಡರು ತಮ್ಮ selective ಸಿದ್ಧಾಂತ ಮತ್ತು ಅವಕಾಶವಾದಿ ನಡವಳಿಕೆಯ ಕಾರಣದಿಂದಾಗಿ ಇಷ್ಟು ವರ್ಷಗಳ ಕಾಲ ಉಳಿಸಿಕೊಂಡಿದ್ದ ಗೌರವಕ್ಕೆ ತಮ್ಮ ಕೈಯಾರೆ ಮಸಿ ಬಳಿದುಕೊಂಡಿದ್ದಾರೆ.
ಇಂತಹ ಅವಕಾಶವಾದಿ ಮನಸ್ಥಿತಿಗಳ ಎದುರು ಅಂದು ಬಾಬಾ ಸಾಹೇಬರು ಹೋರಾಡಿ ಶೋಷಿತರಿಗೆ ನ್ಯಾಯ ಕೊಡಿಸಬೇಕಿದ್ದರೆ, ಅದೆಷ್ಟು ಹೋರಾಟ ನಡೆಸಿರಬೇಕು ಎಂದು ನೆನೆಸಿಕೊಂಡರೆ ಮನಸ್ಸು ಭಾರವಾಗುತ್ತದೆ.
ಡಾ.ಎಚ್.ಸಿಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




