ದುಂಡು ಮೇಜಿನ ಸಭೆ
ಬೆಂಗಳೂರು: ಕರ್ನಾಟಕದಲ್ಲಿ ಸಮುದಾಯಗಳ ನಡುವೆ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಈ ನಿರ್ಣಾಯಕ ಹಂತದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಜನಗಣತಿ ಹಾಗೂ ಅದರ ಜೊತೆಯಲ್ಲೇ ನಡೆಯಲಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಳ ಬಗ್ಗೆ ಉಂಟಾಗಿರುವ ಕೆಲ ಗೊಂದಲಗಳಿಗೆ ಸಮಾಧಾನಕಾರವಾಗಿ ಪರಿಹಾರ ಕಂಡು ಕೊಳ್ಳಲು ಮತ್ತು ಸಮುದಾಯದಲ್ಲಿ ಒಮ್ಮತಾಭಿಪ್ರಾಯ ಮೂಡಿಸಲು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಇಂದು ಬೆಂಗಳೂರಿನಲ್ಲಿ 2 ನೇ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸಭೆಯಲ್ಲಿ ರಾಜ್ಯದ ಪ್ರಮುಖ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಚಿಂತಕರು ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಸಮಾಜವಾದ ಹಾಗೂ ಭಾರತೀಯ ಸಂವಿಧಾನದ ಪರಿಕಲ್ಪನೆಗಳನ್ನು ಆಧರಿಸಿಕೊಂಡು, ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಹಕ್ಕು, ಸಮಗ್ರ ಅಭಿವೃದ್ಧಿ ಹಾಗೂ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಶೋಷಿತ ಸಮುದಾಯಗಳ ನಡುವೆ ಜಾಗೃತಿ ಮೂಡಿಸಲು ಮುಂದಿನ ಹಂತದಲ್ಲಿ ಎಲ್ಲ ಸಂಘಟನೆಗಳು, ರಾಜಕೀಯ ಹಾಗೂ ಧಾರ್ಮಿಕ ನಾಯಕರುಗಳು ಪಾಲ್ಗೊಂಡು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು ಹಾಗೂ ಈ ಸಂಬಂಧ ಸುಧಿರ್ಘ ಅಧ್ಯಯನ ನಡೆಸಲು ವಿಷಯಧಾರಿತ ತಜ್ಞರ ಸಮಿತಿಯೊಂದನ್ನು ರಚಿಸಲು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು, ಮುಸ್ಲಿಂ ಸಮುದಾಯವು ಈ ಜನಗಣತಿ ಸರ್ವೆಯಲ್ಲಿ ಸಕ್ರಿಯವಾಗಿ ಹಾಗೂ ಸ್ಪಷ್ಟತೆಯೊಂದಿಗೆ ಪಾಲ್ಗೊಳ್ಳಬೇಕು. ಜಾತಿ ನಮೂದಿಸುವ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಉದ್ಭವವಾಗಿದೆ ತಡೆಯುವುದು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕರ ಪ್ರಮುಖ ಹೊಣೆಗಾರಿಕೆಯಾಗಿರುತ್ತದೆ ಎಂದರು.
ಕಾರ್ಯಕ್ರಮವನ್ನು ಅಮ್ಜದ್ ಖಾನ್ ನಿರೂಪಿಸಿದರು. ಅಬ್ರಾರ್ ಅಹ್ಮದ್ ಸ್ವಾಗತಿಸಿದರು. ಅಪ್ಸರ್ ಕೊಡ್ಲಿಪೇಟೆ ವಂದನಾರ್ಪಣೆ ಮಾಡಿದರು.
ಸಭೆಯಲ್ಲಿ ರಾಜ್ಯದ ಪ್ರಮುಖ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ನಾಯಕ ಅಬ್ದುಲ್ ಹನ್ನಾನ್, ಮೌಲಾನಾ ಇಕ್ರಾಮ್, ಶಾಹೀದ್ ಅಲಿ ಉಡುಪಿ, ನಿವೃತ್ತ ಕೆ.ಎ.ಎಸ್ ಅಧಿಕಾರಿಗಳಾದ ಅಬ್ದುಲ್ ಹಮೀದ್, ಪ್ರೊ.ನಾಝ್ನೀನ್ ಬೇಗಂ, ಡಾ.ಅವಾಜ್ ಶರೀಫ್, ಪತ್ರಕರ್ತೆ ನಾಝಿಯಾ ಕೌಸರ್, ಡಾ. ಝಾಹಿದಾ ಖಾನ್, ರಜಾಕ್ ಉಸ್ತಾದ್ , ಡಿ. ಎಂ. ಎಸ್ ರಾಜ್ಯಾಧ್ಯಕ್ಷ ಎ.ಜೆ. ಖಾನ್, ಪ್ರೊ. ಅಬ್ದುರ್ ರಹಮಾನ್, ಅಡ್ವೊಕೇಟ್ ಮಜೀದ್ ಖಾನ್ (ಎ.ಐ.ಎಲ್.ಸಿ), ರಿಯಾಝ್ ಕಡಂಬು, ವಕೀಲ ಎಮ್.ಕೆ. ಮೇತ್ರಿ, ದಾದಾಪೀರ್, ದಾದಾ ಖಲಂದರ್, ಸೇರಿದಂತೆ ಅನೇಕ ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು.




