ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣದ ಸಂಬಂಧ ಬುರುಡೆ ಎಲ್ಲಿಂದ ತರಲಾಗಿತ್ತು ಎನ್ನುವುದನ್ನು ಪತ್ತೆಹಚ್ಚುವಲ್ಲಿ ಎಸ್ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ವಿಚಾರಣೆಯ ವೇಳೆ ಮುಸುಕುಧಾರಿ ಚಿನ್ನಯ ಎಸ್ ಐ ಟಿ ಅಧಿಕಾರಿಗಳ ಮುಂದೆ ಬುರುಡೆ ಸತ್ಯವನ್ನು ಬಾಯಿಬಿಟ್ಟಿದ್ದಾನೆ.ಇದರಿಂದ ಬುರುಡೆ ಪ್ರಕರಣ ಶೀಘ್ರದಲ್ಲಿ ತಾರ್ಕಿಕ ಅಂತ್ಯಗೊಳ್ಳುವ ಸಾಧ್ಯತೆ ಇದೆ.
ಸೌಜನ್ಯ ಮಾವ ವಿಠಲ ಗೌಡನಿಂದಲೇ ಚಿನ್ನಯ್ಯ ತಲೆಬುರುಡೆ ತಂದಿರುವುದನ್ನು ವಿಚಾರಣೆ ವೇಳೆ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಎರಡು ವರ್ಷಗಳ ಹಿಂದೆ ಚಿನ್ನಯ್ಯ ಉಜಿರೆಗೆ ವಾಪಸ್ ಬಂದು ಅಲ್ಲಿನ ಗ್ರಾಮ ಪಂಚಾಯಿತಿನಲ್ಲಿ ಕೆಲವು ತಿಂಗಳುಗಳ ಕಾಲ ಕೆಲಸ ಮಾಡಿಕೊಂಡಿದ್ದ.
ಸೌಜನ್ಯ ಮಾವ ವಿಠಲ ಗೌಡನ ಕಣ್ಣಿಗೆ ಆರೋಪಿ ಚಿನಯ್ಯ ಇದೇ ವೇಳೆ ಬಿದ್ದಿದ್ದಾನೆ. ವಿಠಲ ಗೌಡನಿಗೆ ಚೆನ್ನಯ್ಯನ ಮೊದಲೇ ಪರಿಚಯವಿತ್ತು. ಕಾನೂನು ಪ್ರಕ್ರಿಯೆಗೆ ಒಳಪಟ್ಟ ಆರೋಪಿ ಚಿನಯ್ಯನನ್ನು ವಿಠಲ ಗೌಡ ಗ್ಯಾಂಗ್ ಗೆ ಪರಿಚಯಿಸಿದ್ದ. ಗ್ಯಾಂಗ್ ಜೊತೆ ಸೇರಿ ಜಂಟಿಯಾಗಿ ಷಡ್ಯಂತ್ರದ ಸಂಚು ಮಾಡಲಾಗಿತ್ತು. ವಿಠಲ ಗೌಡನ ಜೊತೆಗೆ ಬುರುಡೆ ತರಲು ಮತ್ತೋರ್ವ ವ್ಯಕ್ತಿ ಹೋಗಿದ್ದ ಎನ್ನಲಾಗಿದೆ. ವಿಠಲ ಗೌಡನ ಜೊತೆಗೆ ಕಾರಿನಲ್ಲಿ ಪ್ರದೀಪ್ ಗೌಡ ಎನ್ನುವ ವ್ಯಕ್ತಿ ಹೋಗಿದ್ದು, ಈ ಮಾಹಿತಿ ಆಧರಿಸಿ ವಿಠಲ ಗೌಡ ಹಾಗೂ ಪ್ರದೀಪ್ ಗೌಡನನ್ನು ಕರೆದೊಯ್ದು ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಸ್ಥಳ ಮಹಜರು ಮಾಡಲಾಗಿದೆ.
ವಿಶೇಷ ತನಿಖಾ ತಂಡದ ಪೊಲೀಸರು ಸೌಜನ್ಯಳ ಮಾವ ವಿಠಲ ಗೌಡ ಅವರನ್ನು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಇರುವ ಬಂಗ್ಲೆಗುಡ್ಡಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಸ್ಥಳ ಮಹಜರು ಮಾಡಿದ ಬಳಿಕ ಬೆಳ್ತಂಗಡಿ ಠಾಣೆಗೆ ಮರಳಿದ್ದಾರೆ.
ವಿಠಲ ಗೌಡ ಮತ್ತು ಜಯಂತ್ ಅವರು ಬುರುಡೆಯನ್ನು ಈ ಜಾಗದಿಂದ ತೆಗೆದು ಚಿನ್ನಯ್ಯನಿಗೆ ನೀಡಿದ ಹಿನ್ನೆಲೆಯಲ್ಲಿ ಸಂಜೆ ಸ್ಥಳ ಮಹಜರು ಮಾಡಿದ್ದಾರೆ.
ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟದಲ್ಲಿರುವ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆಯನ್ನು ತಂದು ನೀಡಿದ್ದು, ಅದನ್ನು ಚಿನ್ನಯ್ಯನಿಗೆ ಒಪ್ಪಿಸಿರುವುದು ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌಜನ್ಯ ಪ್ರಕರಣದ ಆರೋಪ ಹೊತ್ತಿದ್ದ ಮೂವರಿಗೆ ಎಸ್ ಐಟಿ ಅಧಿಕಾರಿಗಳು ಕರೆ ಮಾಡಿದ್ದಾರೆ. ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದ್ದು, ಉದಯ್ ಜೈನ್ ಕೂಡ ತೆರಳಿದ್ದರು. ಉದಯ್ ಜೈನ್, ಮಲ್ಲಿಕ್ ಜೈನ್, ಧೀರಜ್ ಕೆಲ್ಲಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕರೆ ಮಾಡಲಾಗಿದೆ. ಸೌಜನ್ಯ ಪ್ರಕರಣದ ಸಿಬಿಐ ತನಿಖೆಯಲ್ಲಿಯೂ ಈ ಮೂವರ ವಿರುದ್ಧ ಪ್ರಕರಣ ಸಾಬೀತಾಗಿಲ್ಲ. ಕೆಲ ದಿನಗಳ ಹಿಂದೆ ಸೌಜನ್ಯ ಪ್ರಕರಣದ ಪ್ರತ್ಯಕ್ಷದರ್ಶಿ ಒಬ್ಬರು ಎಸ್ ಐಟಿಗೆ ದೂರು ಸಲ್ಲಿಕೆ ಮಾಡಿದ್ದರು. ಆ ದೂರಿನ ಹಿನ್ನೆಲೆ ಕರೆ ನೀಡಿರುವ ಸಾಧ್ಯತೆ ಇದೆ.
ಉದಯ್ ಜೈನ್ ಮಾತನಾಡಿ, ಕರೆ ಮಾಡಿದ್ದರು, ಹಾಗಾಗಿ ಬಂದಿದ್ದೆ. ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಬರಲು ಹೇಳಿದ್ದಾರೆ. ಮೂವರಿಗೂ ಹೇಳಿದ್ದಾರೆ ಎಂದರು.
ಸಿಎಂ, ಗೃಹಸಚಿವರು ಹೇಳಿದ್ದ ಪ್ರಕಾರ ಸೌಜನ್ಯ ಪ್ರಕರಣ ಹೊರಗಿಟ್ಟು ಉಳಿದ ಪ್ರಕರಣ ಅಷ್ಟೆ ಎಸ್‌ಐಟಿ ತನಿಖೆ ಎಂದಿದ್ದರು.
ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಜೊತೆ ವಿಠಲ ಗೌಡ ನಿಕಟ ಸಂಪರ್ಕದಲ್ಲಿದ್ದ ಕಾರಣ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಹೀಗಾಗಿ ವಿಠಲ್ ಗೌಡ ಎಸ್‌ಐಟಿ ಕಚೇರಿಗೆ ಹಾಜರಾಗಿದ್ದರು.




