ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಸಂಬಂಧ ಸ್ಥಳ ಮಹಜರು ನಡೆಸಲು ಅರಣ್ಯ ಇಲಾಖೆಯ ಅನುಮತಿ ಪಡೆದಿರುವ ವಿಶೇಷ ತನಿಖಾ ತಂಡ(ಎಸ್ ಐಟಿ)ದ ಅಧಿಕಾರಿಗಳು ಬಂಗ್ಲೆಗುಡ್ಡೆಯಲ್ಲಿ ವಿಠಲ್ ಗೌಡ ಬುರುಡೆ ತಂದ ಹಾಗೂ ಅಡಗಿಸಿಟ್ಟಿದ್ದ ಸ್ಥಳದ ಸುತ್ತ ಶೋಧ ಕೈಗೊಂಡಿದ್ದಾರೆ. ಈ ವೇಳೆ ಆರು ಅಸ್ತಿಪಂಜರಗಳು ಸಿಕ್ಕಿವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಅರಣ್ಯ ಇಲಾಖೆ ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಹಜರು ವೇಳೆ ಹಾಜರಿದ್ದರು. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯುತ್ತಿದೆ.
ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಶೋಧ ಆರಂಭವಾಗಿದೆ, 13 ಎಕರೆ ವಿಸ್ತೀರ್ಣದಲ್ಲಿರುವ ಬಂಗ್ಲೆಗುಡ್ಡೆ ಪೂರ್ತಿ ಎಸ್‌ಐಟಿ ಶೋಧ ನಡೆಸತೊಡಗಿದೆ.
ಭೂಮಿಯ ಮೇಲ್ಭಾಗದಲ್ಲಿರುವ ಅಸ್ಥಿಪಂಜರಗಳನ್ನು ಮಹಜರು ನಡೆಸಿ ತೆಗೆಯುವ ಸಾಧ್ಯತೆ ಇದೆ. ಬಂಗ್ಲೆಗುಡ್ಡೆಯಲ್ಲಿ ಭೂಮಿ ಅಗೆದು ಸ್ಥಳ ಪರಿಶೋಧನೆ ನಡೆಸುವುದಿಲ್ಲ. ವಿಠಲ್ ಗೌಡ ಬುರುಡೆ ತಂದ ಹಾಗೂ ಅಡಗಿಸಿಟ್ಟಿದ್ದ ಸ್ಥಳದ ಸುತ್ತ ಎಸ್‌ಐಟಿ ಮಹಜರು ಮಾಡಲಿದೆ.
ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತಂದಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ವಿಠಲ್ ಗೌಡ ಹೇಳಿಕೆ ನೀಡಿದ್ದ. ಬುರುಡೆ ತಂದ ಹಾಗೂ ಅಡಗಿಸಿಟ್ಟ ಜಾಗದಲ್ಲಿ ಎರಡು ಬಾರಿ ಮಹಜರು ನಡೆಸಲಿದೆ. ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಮಾನವನ ಕಳೇಬರ ಇದೆ ಎಂದು ಹೇಳಿದ್ದ. ಮಹಜರು ವೇಳೆ ಸಾಕಷ್ಟು ಅಸ್ಥಿಪಂಜರ ಕಾಣಸಿಕ್ಕಿದೆ ಎಂದಿದ್ದ.
ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಬಂಗ್ಲೆಗುಡ್ಡೆಗೆ ತಂಡ ತೆರಳಿದೆ. ಸೋಕೊ ತಂಡ, ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ, ಮೆಟಲ್ ಡಿಟೆಕ್ಟರ್ ತಂಡ ಸಾಥ್ ನೀಡಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಶೋಧ ಆರಂಭವಾಗಲಿದೆ. 13 ಎಕರೆ ವಿಸ್ತೀರ್ಣದಲ್ಲಿರುವ ಬಂಗ್ಲೆಗುಡ್ಡೆ ಪೂರ್ತಿ ಎಸ್‌ಐಟಿ ಶೋಧ ನಡೆಸಲಿದೆ.




