ಸಿದ್ದರಾಮೋತ್ಸವ ವೇಳೆ ವ್ಯಕ್ತಿ ನಾಪತ್ತೆ: ಕುಟುಂಬಸ್ತರನ್ನು ಭೇಟಿಯಾದ ಸಿದ್ದರಾಮಯ್ಯ

4 years ago

ಬಾಗಲಕೋಟೆ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ಗಿರಮಲ್ಲ ರಾಮದಾಸ ಕಂಡೇಕರ (36) ಕಾರ್ಯಕ್ರಮ ಮುಕ್ತಾಯವಾಗಿ 25 ದಿನಗಳು ಕಳೆದರು ಇದುವರೆಗೂ ಮರಳಿ ಮನೆಗೆ ಬಂದಿಲ್ಲ ಎಂದು ಕುಟುಂಬಸ್ಥರು ಆತಂಕದಲ್ಲಿದ್ದರು.

ಬಾದಾಮಿ ಪ್ರವಾಸದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕುಟುಂಬಸ್ತರ ಮನೆಗೆ ಭೇಟಿ ನೀಡಿ ಗಿರಮಲ್ಲ ಎಲ್ಲೂ ಹೊಗಲ್ಲ ಮರಳಿ ಮನೆಗೆ ಬರುತ್ತಾನೆ ಎಂದು ನೊಂದ ಕುಟುಂಬಕ್ಕೆ ಧೈರ್ಯ ತುಂಬು ಸಮಾಧಾನ ಮಾಡಿದರು.

ಮಕ್ಕಳಿಗೆ ವಿದ್ಯಾಭ್ಯಾಸವನ್ನು ಚೆನ್ನಾಗಿ ಕೊಡಿಸಿ. ನಿಮ್ಮ ಸಹಾಯಕ್ಕೆ ನಾನು ಹಾಗೂ ನಮ್ಮ ಕಾರ್ಯಕರ್ತರು ಇದ್ದೇವೆ ಎಂದರು.

ಗಿರಮಲ್ಲ ಕಂಡೇಕರ ಕುಟುಬಂಸ್ತರು ಹುಡುಕಾಟ ನಡೆಸಿದ್ದಾರೆ. ಇದರ ಬಗ್ಗೆ ಸಾವಳಗಿ ಮತ್ತು ದಾವಣಗೆರೆ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದೆ ಎಂದರು.

Leave a Reply