ಭಾ.ಜ.ಪ. ಸಮರ್ಥಕ್ ಮಂಚ್ ವತಿಯಿಂದ ಸಾಧಕರಿಗೆ ಸನ್ಮಾನ

4 years ago

ಬೆಂಗಳೂರು: ಒಬ್ಬ ಶಿಕ್ಷಕನಿಗೆ ಇಡೀ ಸಮಾಜವನ್ನು ಸರಿ ದಾರಿಗೆ ತರುವ ಶಕ್ತಿ ಇದೆ. ವೈದ್ಯರು ಇಲ್ಲವೆಂದರೆ ಬದುಕಬಹುದು. ಆದರೆ ಶಿಕ್ಷಕ ಇಲ್ಲದೇ ಸಮಾಜ ಮುಂದುವರೆಯಲು ಸಾಧ್ಯವಿಲ್ಲ ಎಂದು ಭಾ.ಜ.ಪ. ಸಮರ್ಥಕ್ ಮಂಚ್ ರಾಷ್ಟ್ರೀಯ ಅಧ್ಯಕ್ಷ ಪುರುಷೋತ್ತಮ ನಾರಾಯಣ್ ಶ್ರೀ ವಾಸ್ತವ ಹೇಳಿದರು.

ಭಾ.ಜ.ಪ ಸಮರ್ಥಕ್ ಮಂಚ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ಪ್ರಧಾನ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತಾಡಿದ ಅವರು,

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿ ಗುರುಗಳ ಮಾರ್ಗದರ್ಶನ ಅವಶ್ಯಕತೆ ಇದೆ. ಬಾಲ್ಯದಲ್ಲಿ ತಾಯಿ ಗುರುವಾಗಿ ಪೋಷಣೆ ಮಾಡುವಳು. ನಂತರ ವಿದ್ಯೆ ಕಲಿಯುವ ಸಮಯದಲ್ಲಿ ಶಿಕ್ಷಕರು ನಮ್ಮ ಉತ್ತಮ ಪ್ರಜೆಯಾಗಿ ಮಾಡಲು ಶ್ರಮಿಸುತ್ತಾರೆ ಎಂದರು.

ವಿದ್ಯಾವಂತರಾದರೆ ಸಾಲದು ಈ ಸಮಾಜದಲ್ಲಿ ನೊಂದವರ, ಧ್ವನಿ ಇಲ್ಲದವರ ಆಸರೆಯಾಗಿ, ಉತ್ತಮ ಪ್ರಜೆಯಾಗಿ ಬಾಳಬೇಕು ಆಗ ಸಮಾಜದ ಅಭಿವೃದ್ದಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ, ಯೋಗ, ಕಲೆ, ಸಾಹಿತ್ಯ, ನಾಟ್ಯ, ವಿವಿಧ ಕಲೆಗಳಲ್ಲಿ ಸಾಧನೆ ಮಾಡಿದ ಗುರುಹಿರಿಯರನ್ನುಗೆ ಸನ್ಮಾನಿಸಲಾಯಿತು.
ಭಾ.ಜ.ಪ. ಸಮರ್ಥಕ್ ಮಂಚ್ ರಾಜ್ಯಾಧ್ಯಕ್ಷ ನಿತೇಶ್ ಶರಣ್, ಬಿ.ಜೆ.ಪಿ. ರಾಜ್ಯ ಪರಿಷತ್ ಜೆ.ಸು.ನಾಗರಾಜ್, ಬಿ.ಜೆ.ಪಿ. ವಕ್ತಾರ ಅಶೋಕ್ ಎನ್.ಗೌಡ, ವಿಜಯಕಾಶಿ, ಭಾ.ಜ.ಪ. ರಾಜ್ಯ ಮಾಧ್ಯಮ ಕಾರ್ಯದರ್ಶಿ ಎಸ್.ಗೋವಿಂದರಾಜ್ ಹಾಗೂ ಪ್ರಮುಖ ಬಿ.ಜೆ.ಪಿ. ನಾಯಕರು ಹಾಜರಿದ್ದರು.

Leave a Reply