ಇದ್ದಾಗ, ದೇಹದಲ್ಲಿ ಆರೋಗ್ಯವಿದ್ದು ಜೀವ ಇದ್ದಾಗ ರಕ್ತ ಮಾತ್ರ ನೀಡಬಹುದು, ಜೀವ ಹೋಗುವುದು ನಿಶ್ಚಯವಾದಾಗ ಅಂಗಾಂಗ ದಾನ ಮಾಡಬಹುದು, ಜೀವ ಹೋದ ನಂತರ ದೇಹ ದಾನ ಮಾಡಬಹುದು, ಜೊತೆಗೆ ನೇತ್ರದಾನವನ್ನು ಮಾಡಬಹುದು. ಇದು ಸಾಧ್ಯವಾಗದಿದ್ದರೆ, ಕನಿಷ್ಠ ದೇಹ ಸುಟ್ಟ ಬೂದಿಯನ್ನಾದರೂ ಒಂದಷ್ಟು ಗಿಡ ಮರಗಳಿಗೆ ಗೊಬ್ಬರವಾಗಿ ಚೆಲ್ಲಬಹುದು.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಜೀವವಿದ್ದಾಗ ಒಂದಷ್ಟು ಪ್ರೀತಿಯಿಂದ ಎಲ್ಲರೊಂದಿಗೆ ಹಂಚಿಕೊಂಡು, ಸಂತೋಷದಿಂದ, ಸಂಕುಚಿತ ಭಾವನೆಗಳಿಲ್ಲದೆ, ಅಸೂಯೆ ಪಡದೆ, ನೆಮ್ಮದಿಯಿಂದ ಬದುಕುತ್ತ, ನಮ್ಮ ಸುತ್ತಲಿನ ಪರಿಸರವನ್ನು ಶಾಂತವಾಗಿ ಕಾಯಬಹುದು.
ಜೀವವಿದ್ದಾಗ ಏನನ್ನು ಮಾಡದೆ ಯಾರಿಗೂ ನೆರವು ನೀಡದೆ ಯಾರಿಗೂ ಸ್ಪಂದಿಸದೆ ಇರುವ ಬದುಕು ಬದುಕಿಯು ಸತ್ತಂತಿರದೆ, ಒಂದಷ್ಟು ಒಳಿತನ್ನು ನೆರೆಹೊರೆಯವರಿಗೆ ಮಾಡಿದ್ದರೆ ಒಂದಷ್ಟು ಮಂದಿಯಾದರೂ ಸತ್ತ ಮೇಲು ನೆನಪು ಮಾಡಿ ಕೊಳ್ಳುವುದರ ಮೂಲಕ ಸತ್ತು ಬದುಕಿದ್ದಾರೆಂಬ ಅರ್ಥದಲ್ಲಿ ಕಾಣುತ್ತಾರೆ.
ಶ್ರೀಮಂತಿಕೆ ಉಳ್ಳವರು ಕೊಡುವ ಬುದ್ಧಿಯನ್ನು, ಅಧಿಕಾರದಲ್ಲಿದ್ದವರು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರೆ ಸಾರ್ಥಕವಾಗುತ್ತದೆ. ಸತ್ತ ನಂತರ ಕೊಡಲು ಶ್ರೀಮಂತನಿಗೆ ಏನು ಅವನೊಂದಿಗೆ ಬರುವುದಿಲ್ಲ, ಅಧಿಕಾರ ಕಳೆದುಕೊಂಡವರು ಏನನ್ನು ಮಾಡಲು ಆಗದು.
– ಕೆ ಎಸ್ ನಾಗರಾಜ್, ಬೆಂಗಳೂರು



