ದೆಹಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಸೀತಾರಾಂ ಯೆಚೂರಿ(72) ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಲವಶರಾದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ದೆಹಲಿಯ ಏಮ್ಸ್ ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ, ಅವರು ಕೃತಕ ಉಸಿರಾಟದ ನೆರವಿನಿಂದ ಇದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಯೆಚೂರಿಯವರು 12 ಆಗಸ್ಟ್ 1952 ರಂದು ಮದ್ರಾಸಿನಲ್ಲಿ ತೆಲುಗು ಭಾಷಿಕ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಸರ್ವೇಶ್ವರ ಸೋಮಯಾಜುಲ ಯೆಚೂರಿ ಮತ್ತು ತಾಯಿ ಕಲ್ಪಕಂ ಯೆಚೂರಿ ಆಂಧ್ರಪ್ರದೇಶದ ಕಾಕಿನಾಡ ಮೂಲದವರು. ಅವರ ತಂದೆ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದರು. ತಾಯಿ ಸರ್ಕಾರಿ ಅಧಿಕಾರಿಯಾಗಿದ್ದರು.
ಯೆಚೂರಿ ಹೈದರಾಬಾದ್‌ನಲ್ಲಿ ಬಾಲ್ಯವನ್ನು ಕಳೆದರು. ಹೈದರಾಬಾದ್‌ನ ಆಲ್ ಸೇಂಟ್ಸ್ ಹೈಸ್ಕೂಲ್‌ನಲ್ಲಿ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು. 1969ರ ತೆಲಂಗಾಣ ಆಂದೋಲನದ ವೇಳೆ ಅವರು ದೆಹಲಿಗೆ ತೆರಳಿದರು. ನಂತರ ದೆಹಲಿಯ ಪ್ರೆಸಿಡೆಂಟ್ಸ್ ಎಸ್ಟೇಟ್ ಸ್ಕೂಲ್ ನಲ್ಲಿ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ದೆಹಲಿಯ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಅರ್ಥಶಾಸ್ತ್ರದಲ್ಲಿ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ (JNU) ಅರ್ಥಶಾಸ್ತ್ರದಲ್ಲಿ M.A. ಎರಡರಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿಗಾಗಿ ಜೆಎನ್‌ಯುನಲ್ಲಿ ಅಧ್ಯಯನ ನಡೆಸುತ್ತಿದ್ದರು. ತುರ್ತುಪರಿಸ್ಥಿತಿ ಸಮಯದಲ್ಲಿ ಬಂಧನಕ್ಕೆ ಒಳಗಾದ ನಂತರ ಅವರು ಅಧ್ಯಯನವನ್ನು ಕೈಬಿಟ್ಟರು.
2015ರಲ್ಲಿ ಪ್ರಕಾಶ್ ಕಾರಟ್ ಅವರ ನಂತರ ಸೀತಾರಾಂ ಯೆಚೂರಿ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಯೆಚೂರಿ ಅವರು ಪಕ್ಷದ ನಾಯಕ ಹರ್ಕಿಶನ್ ಸಿಂಗ್ ಸುರ್ಜೀತ್ ಅವರ ಗರಡಿಯಲ್ಲಿ ಪಳಗಿದ್ದರು. ವಿಪಿ ಸಿಂಗ್ ಸರ್ಕಾರ ಮತ್ತು 1996-97 ರ ಸಂಯುಕ್ತ ರಂಗ ಸರ್ಕಾರದಲ್ಲಿ ವಿಶೇಷವಾಗಿ ಸಮ್ಮಿಶ್ರ ಸರ್ಕಾರದ ಯುಗಗಳ ಆಡಳಿತದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಎಡಪಕ್ಷಗಳು ಮೊದಲ ಯುಪಿಎ ಸರ್ಕಾರವನ್ನು ಬೆಂಬಲಿಸಿದ ಸಮಯದಲ್ಲಿ ಯೆಚೂರಿ ಅವರು ತಮ್ಮ ಜನಪರ ಮನಸ್ಥಿತಿಯ ಕಾರಣದಿಂದ ಸರ್ಕಾರದ ನೀತಿ ನಿರೂಪಣೆಯಲ್ಲಿ ಕಾಂಗ್ರೆಸ್ ಒತ್ತಡ ಹೇರಿದರು. ಇದರ ಪರಿಣಾಮವಾಗಿ ಬಡವರು, ದೀನದಲಿತರು, ದುರ್ಬಲ ವರ್ಗಗಳಿಗೆ ಅನೇಕ ಯೋಜನೆಗಳು ಜಾರಿಯಾದವು.
ಕಾರಟ್ ಅವರ ಹಠಮಾರಿ ನಿಲುವಿನಿಂದಾಗಿ ಎಡಪಕ್ಷಗಳು ಯುಪಿಎ-1 ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಲು ಕಾರಣವಾದ ಭಾರತ – ಅಮೆರಿಕ ಪರಮಾಣು ಒಪ್ಪಂದದ ಕುರಿತು ಸರ್ಕಾರದೊಂದಿಗೆ ಮಾತುಕತೆಗಳಲ್ಲಿ ನಿರ್ಣಾಯಕ ಪಾತ್ರವನ್ನು ಸೀತಾರಾಮ್ ಯೆಚೂರಿ ನಿರ್ವಹಿಸಿದ್ದರು.
1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಗೆ ಸೇರಿದ ಯೆಚೂರಿ, ಮರುವರ್ಷ ಪಕ್ಷದ ಸದಸ್ಯರಾದರು. ಕೆಲ ತಿಂಗಳ ನಂತರ ತುರ್ತು ಪರಿಸ್ಥಿತಿ ಸಮಯದಲ್ಲಿ ಬಂಧಣಕ್ಕೆ ಒಳಗಾಗಿದ್ದರು.
ಸೀತಾರಾಮ್ ಯೆಚೂರಿಯವರ ಕೆಲವು ಕೃತಿಗಳು
1. What is This Hindu Rashtra?: On Golwalkar’s Fascistic Ideology and the Saffron Brigade’s Practice (Frontline Publications, Hyderabad, 1993)
2. Pseudo Hinduism Exposed: Saffron Brigade’s Myths and Reality (Communist Party of India (Marxist), New Delhi, 1993)
3. Caste and Class in Indian Politics Today (Prajasakti Book House, Hyderabad, 1997)
4. Oil Pool Deficit Or Cesspool of Deceit (Communist Party of India (Marxist), New Delhi, 1997)
5. Socialism in a Changing World (Prajasakti Book House, Hyderabad, 2008)
6. Left Hand Drive: Concrete Analysis of Concrete Conditions (Prajasakti Book House, Hyderabad, 2012)
7. Modi Government: New Surge of Communalism (Prajasakti Book House, Hyderabad, 2014)
8. Communalism vs. Secularism
9. Ghrina Ki Rajniti (Vani Prakashan, New Delhi, 2006) (in Hindi)
10. Yechury has edited the following books:
11. People’s Diary of Freedom Struggle (Communist Party of India (Marxist), New Delhi, 2008)
12. The Great Revolt A Left Appraisal (Communist Party of India (Marxist), New Delhi)
13. Global Economic Crisis: A Marxist Perspective




