ದೆಹಲಿ: ಕೊರೊನಾ ದೇಶಾದ್ಯಂತ ವ್ಯಾಪಿಸಿದೆ. ತಕ್ಷಣ ಕೇಂದ್ರ ಸರ್ಕಾರ ದೇಶದ ಎಲ್ಲ ನಾಗರಿಕರಿಗೆ ಸಾರ್ವತ್ರಿಕವಾಗಿ ಕೋವ್ಯಾಕ್ಸಿನ್ ಚುಚ್ಚುಮದ್ದು ನೀಡುವುದು ಮಾತ್ರ ಸದ್ಯದ ತುರ್ತು ಎಂದು ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಪ್ರಧಾನಿಗಾಗಿ ನಿರ್ಮಾಣವಾಗುತ್ತಿರುವ ನೂತನ ಸೆಂಟ್ರಲ್ ವಿಸ್ತಾ ಕಟ್ಟಡಕ್ಕೆ ನಿಗದಿಯಾಗಿರುವ ಮೊತ್ತ ಮತ್ತು ಕೇಂದ್ರ ಬಜೆಟ್ ನಲ್ಲಿ ಕೊರೊನಾ ನಿರ್ವಹಣೆಗಾಗಿ ನಿಗದಿ ಮಾಡಲಾದ 35,000 ಕೋಟಿ ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜೊತೆಗೆ, ಪಿಎಂ ಕೇರ್ಸ್ ಫಂಡ್ ಗೆ ಖಾಸಗಿಯವರು ನೀಡಿರುವ ಮೊತ್ತವನ್ನು ಕೊರೊನಾ ಚಿಕಿತ್ಸೆ, ಆಕ್ಸಿಜನ್ ಒದಗಿಸಲು ಬಳಸಬೇಕು. ಇದರೊಂದಿಗೆ ಕೆಲಸ ಕಳೆದುಕೊಂಡವರಿಗೆ, ಬಡವರಿಗೆ ಪ್ರತಿ ತಿಂಗಳು ಕನಿಷ್ಠ 6,000 ರೂ. ನೀಡಬೇಕು. ಉಚಿತವಾಗಿ ಪಡಿತರವನ್ನು ನೀಡಬೇಕು. ಇದರಿಂದ ದೇಶದಲ್ಲಿ ಹಸಿವು ನಿವಾರಣೆಯಾಗುತ್ತದೆ ಎಂದಿದ್ದಾರೆ.
ನಮ್ಮ ರೈತರು ಕೃಷಿ ಚಟುವಟಿಕೆಗೆ ಮರಳಬೇಕು. ಆಮೂಲಕ ಅವರು ನಮ್ಮೆಲ್ಲರಿಗೆ ಅನ್ನ ನೀಡಬಹುದು. ಕನಿಷ್ಠಪಕ್ಷ ಇವುಗಳನ್ನು ಪ್ರಧಾನಿ ಮತ್ತು ಸರ್ಕಾರ ಆಗುವಂತೆ ತತಕ್ಷಣ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.


