ಪಾಕ್ ವಿರುದ್ಧ ಭಾರತಕ್ಕೆ ಪ್ರಯಾಸಕರ ಗೆಲುವು

2 years ago

ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 6 ರನ್ ಗಳ ಪ್ರಯಾಸಕರ ಗೆಲುವು ದಾಖಲಿಸಿತು.

ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 19 ಓವರ್ಗಳಲ್ಲಿ 119 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತ ಕಲೆಹಾಕಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಸಿಟ್ಟಿಗೆ ಗುರಿಯಾಯಿತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಐಪಿಎಲ್ ನಲ್ಲಿ 200ರ ಗಡಿ ದಾಟಿಸುವವರು ಇಲ್ಲಿ ಏಕೆ ಕಡಿಮೆ ಮೊತ್ತಕ್ಕೆ ಔಟಾದರು ಎಂಬ ಪ್ರಶ್ನೆಗಳು ಕೇಳಿಬಂದವು.

ಪಾಕ್ ವಿರುದ್ಧದ ಭಾರತ ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು. ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ವಿಫಲವಾದರು. ಆದ್ದರಿಂದ ಭಾರತ 119 ರನ್ಗಳಿಗೆ ಆಲೌಟ್ ಆಯಿತು. ಗೆಲುವಿಗೆ 120 ರನ್ ಗಳ ಗುರಿ ಬೆನ್ನತ್ತಿದ ಪಾಕ್ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲುವ ಮೂಲಕ ಭಾರತೀಯ ಕ್ರಿಕೆಟ್ ತಂಡ ನಿಟ್ಟುಸಿರುಬಿಟ್ಟಿತು.

ಭಾರತದ ಬೌಲರ್ ಗಳು ಪಾಕ್ ಬ್ಯಾಟ್ಸ್ ಮನ್ ಗಳು ರನ್ ಹೊಡೆಯದಂತೆ ತಡೆಯುವಲ್ಲಿ ಯಶಸ್ವಿಯಾದರು. ಪಾಕ್ 14ನೇ ಓವರ್ಗಳಲ್ಲಿ ಮೂರು ವಿಕೆಟ್ಗೆ 80 ರನ್ ಕಲೆಹಾಕಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ರಿಜ್ವಾನ್ – ಶಾದಾಬ್ ಪೆವಿಲಿಯನ್ ಗೆ ತೆರಳಿದ ನಂತರ ದಿಡೀರ್ ಪತನ ಕಂಡು 6 ರನ್ಗಳಿಂದ ಸೋತಿತು.

ವಿರಾಟ್ ಕೊಹ್ಲಿ 4, ರೋಹಿತ್ ಶರ್ಮಾ 13 ರನ್ ಗಳಿಸಿ ಔಟ್ ಆದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್ ನಿಧಾನವಾಗಿ ರನ್ ಕಲೆ ಹಾಕಿ ಭಾರತದ ಮೊತ್ತದ ಹೆಚ್ಚಳಕ್ಕೆ ಕಾರಣರಾದರು.

ಪಾಕ್ ಪರ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್, ಮೊಹಮ್ಮದ್ ಅಮೀರ್ 2 ವಿಕೆಟ್ ಹಾಗೂ ಶಾಹೀನ್ ಅಫ್ರಿದಿ 1 ವಿಕೆಟ್ ಗಳಿಸಿದರು.

ಭಾರತ 119/10 (19 ಓವರ್) ರನ್ ರೇಟ್ 6.26
ಬ್ಯಾಟಿಂಗ್ R B 4s 6s
ರೋಹಿತ್ ಶರ್ಮಾ ಸಿ ಹ್ಯಾರಿಸ್ ರೌಫ್ ಬಿ ಶಾಹೀನ್ ಅಫ್ರಿದಿ 13 12 1 1
ವಿರಾಟ್ ಕೊಹ್ಲಿ ಸಿ ಉಸ್ಮಾನ್ ಖಾನ್ ಬಿ ನಸೀಮ್ ಶಾ 4 3 1 0
ರಿಷಭ್ ಪಂತ್ ಸಿ ಬಾಬರ್ ಅಜಮ್ ಬಿ ಮೊಹಮ್ಮದ್ ಅಮೀರ್ 42 31 6 0
ಅಕ್ಸರ್ ಪಟೇಲ್ ಬಿ ನಸೀಮ್ ಶಾ 20 18 2 1
ಸೂರ್ಯಕುಮಾರ್ ಯಾದವ್ ಸಿ ಮೊಹಮ್ಮದ್ ಅಮೀರ್ ಬಿ ಹ್ಯಾರಿಸ್ ರೌಫ್ 7 8 1 0
ಶಿವಂ ದುಬೆ ಸಿ & ಬಿ ನಸೀಮ್ ಶಾ 3 9 0 0
ಹಾರ್ದಿಕ್ ಪಾಂಡ್ಯ ಸಿ ಇಫ್ತಿಕರ್ ಅಹ್ಮದ್ ಬಿ ಹ್ಯಾರಿಸ್ ರೌಫ್ 7 12 1 0
ರವೀಂದ್ರ ಜಡೇಜಾ ಸಿ ಇಮಾದ್ ವಾಸಿಂ ಬಿ ಮೊಹಮ್ಮದ್ ಅಮೀರ್ 0 1 0 0
ಅರ್ಷದೀಪ್ ಸಿಂಗ್ ರನ್ ಔಟ್ (ಬಾಬರ್ ಆಜಮ್ / ಮೊಹಮ್ಮದ್ ರಿಜ್ವಾನ್) 9 13 1 0
ಜಸ್ಪ್ರೀತ್ ಬುಮ್ರಾ ಸಿ ಇಮಾದ್ ವಾಸಿಂ ಬಿ ಹ್ಯಾರಿಸ್ ರೌಫ್ 0 1 0 0
ಮೊಹಮ್ಮದ್ ಸಿರಾಜ್ ಔಟಾಗದೆ 7 7 0 0
ಒಟ್ಟು 119/10 (19 ಓವರ್) ರನ್ ರೇಟ್ 6.26
ವಿಕೆಟ್‌ಗಳ ಪತನ 1-12 (ವಿರಾಟ್ ಕೊಹ್ಲಿ, 1.3), 2-19 (ರೋಹಿತ್ ಶರ್ಮಾ, 2.4), 3-58 (ಅಕ್ಸರ್ ಪಟೇಲ್, 7.4), 4-89 (ಸೂರ್ಯಕುಮಾರ್ ಯಾದವ್, 11.2), 5-95 (ಶಿವಂ ದುಬೆ , 13.2), 6-96 (ರಿಷಭ್ ಪಂತ್, 14.1), 7-96 (ರವೀಂದ್ರ ಜಡೇಜಾ, 14.2), 8-112 (ಹಾರ್ದಿಕ್ ಪಾಂಡ್ಯ, 17.4), 9-112 (ಜಸ್ಪ್ರೀತ್ ಬುಮ್ರಾ, 17.5), -119 (ಅರ್ಷದೀಪ್ ಸಿಂಗ್, 19)

ಬೌಲಿಂಗ್ O M R W
ಶಾಹೀನ್ ಅಫ್ರಿದಿ 4 0 29 1
ನಸೀಮ್ ಶಾ 4 0 21 3
ಮೊಹಮ್ಮದ್ ಅಮೀರ್ 4 0 23 2
ಇಫ್ತಿಕರ್ ಅಹ್ಮದ್ 1 0 7 0
ಇಮಾದ್ ವಾಸಿಮ್ 3 0 17 0
ಹ್ಯಾರಿಸ್ ರೌಫ್ 3 0 21 3

ಪಾಕಿಸ್ತಾನ 113/7 (20 ಓವರ್) ರನ್ ರೇಟ್ 5.65
ಬ್ಯಾಟಿಂಗ್ R B 4s 6s
ಮೊಹಮ್ಮದ್ ರಿಜ್ವಾನ್ ಬಿ ಜಸ್ಪ್ರೀತ್ ಬುಮ್ರಾ 31 44 1 1
ಬಾಬರ್ ಆಜಮ್ ಸಿ ಸೂರ್ಯಕುಮಾರ್ ಯಾದವ್ ಬಿ ಜಸ್ಪ್ರೀತ್ ಬುಮ್ರಾ 13 10 2 0
ಉಸ್ಮಾನ್ ಖಾನ್ lbw b ಅಕ್ಷರ್ ಪಟೇಲ್ 13 15 1 0
ಫಖರ್ ಜಮಾನ್ ಸಿ ರಿಷಭ್ ಪಂತ್ ಬಿ ಹಾರ್ದಿಕ್ ಪಾಂಡ್ಯ 13 8 1 1
ಇಮಾದ್ ವಾಸಿಮ್ ಸಿ ರಿಷಭ್ ಪಂತ್ ಬಿ ಅರ್ಷದೀಪ್ ಸಿಂಗ್ 15 23 1 0
ಶಾದಾಬ್ ಖಾನ್ ಸಿ ರಿಷಭ್ ಪಂತ್ ಬಿ ಹಾರ್ದಿಕ್ ಪಾಂಡ್ಯ 4 7 0 0
ಇಫ್ತಿಕರ್ ಅಹ್ಮದ್ ಸಿ ಅರ್ಶ್ದೀಪ್ ಸಿಂಗ್ ಬಿ ಜಸ್ಪ್ರೀತ್ ಬುಮ್ರಾ 5 9 0 0
ಶಾಹೀನ್ ಅಫ್ರಿದಿ ಔಟಾಗದೆ 0 1 0 0
ನಸೀಮ್ ಶಾ ಔಟಾಗದೆ 10 4 2 0
ಒಟ್ಟು 113/7 (20) RR 5.65

ಬೌಲಿಂಗ್ O M R W

ವಿಕೆಟ್‌ಗಳ ಪತನ 1-26 (ಬಾಬರ್ ಅಜಂ, 4.4), 2-57 (ಉಸ್ಮಾನ್ ಖಾನ್, 10.1), 3-73 (ಫಖರ್ ಜಮಾನ್, 12.2), 4-80 (ಮೊಹಮ್ಮದ್ ರಿಜ್ವಾನ್, 14.1), 5-88 (ಶದಾಬ್ ಖಾನ್ , 16.3 ov), 6-102 (ಇಫ್ತಿಕರ್ ಅಹ್ಮದ್, 19), 7-102 (ಇಮಾದ್ ವಾಸಿಮ್, 19.1)


ಅರ್ಷದೀಪ್ ಸಿಂಗ್ 4 0 31 1
ಮೊಹಮ್ಮದ್ ಸಿರಾಜ್ 4 0 19 0
ಜಸ್ಪ್ರೀತ್ ಬುಮ್ರಾ 4 0 14 3
ಹಾರ್ದಿಕ್ ಪಾಂಡ್ಯ 4 0 24 2
ರವೀಂದ್ರ ಜಡೇಜಾ 2 0 10 0
ಅಕ್ಷರ್ ಪಟೇಲ್ 2 0 11 1

Leave a Reply