ಟೋಕಿಯೋ: ಮಹಿಳಾ ವಿಭಾಗದ 50 ಮೀಟರ್ ರೈಫಲ್ ವಿಭಾಗದಲ್ಲಿ ಅವನಿ ಲೇಖರಾ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತ 12ನೇ ಪದಕ ಬಾಚಿಕೊಂಡಿದೆ. ಜೊತೆಗೆ, ಟೋಕಿಯೋ ಪ್ಯಾರಾಲಿಂಪಿಕ್ನಲ್ಲಿ ಭಾರತದ ಪದಕ ಬೇಟೆ ಜೋರಾಗಿದೆ.
ಅವನಿ ಪದಕ ಗೆಲ್ಲುವುದರೊಂದಿಗೆ ಪಾರಾಲಿಂಪಿಕ್ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. ಈ ಮುನ್ನ 10 ಮೀಟರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅವರು ಚಿನ್ನದ ಪದಕ ಗೆದ್ದು ಬೀಗಿದ್ದರು. 1983ರಲ್ಲಿ ಜಿತೆಂದರ್ ಸಿಂಗ್ ಸೋಡಿ ಹಲವು ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಹಾಗೂ ಎರಡು ಕಂಚು ಗೆದ್ದು ಸಾಧನೆ ಮೆರೆದಿದ್ದರು. ಅವರ ನಂತರ ಮಹಿಳೆಯರ ವಿಭಾಗದಲ್ಲಿ ಅವನಿ ಎರಡು ಪದಕ ಪಡೆದಿದ್ದಾರೆ.
ಸ್ಪರ್ಧೆಯಲ್ಲಿ 457.9 ಅಂಕ ಪಡೆದ ಚೀನಾದ ಕುಲ್ಪಿಂಗ್ ಜಾಂಗ್ ಚಿನ್ನ, 445.9 ಅಂಕಗಳೊಂದಿಗೆ ಅವನಿ ಕಂಚು ಗೆದ್ದರು.




