ಶರವೇಗದಲ್ಲಿ 23,000 ರನ್ ಗಳಿಸಿದ ವಿರಾಟ್ ಕೊಹ್ಲಿ

5 years ago

4ನೇ ಟೆಸ್ಟ್ ಪಂದ್ಯದಲ್ಲಿ 1 ರನ್ ಗಳಿಸಿದ ಸಮಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 23,000 ರನ್ ಗಳಿಸಿದರು. ಅವರು ಇಂದಿನ ಪಂದ್ಯಕ್ಕೂ ಮುನ್ನ 434 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 22,999 ರನ್ ಬಾರಿಸಿದ್ದರು.

ಏಕದಿನ ಕ್ರಿಕೆಟ್ ನಲ್ಲಿ 12,175, ಟೆಸ್ಟ್ ಕ್ರಿಕೆಟ್ ನಲ್ಲಿ 7671 ಮತ್ತು ಟಿ20ಯಲ್ಲಿ 3159 ರನ್ ಗಳಿಸುವ ಮೂಲಕ 23,000 ರನ್ ಗಳಿಸಿದ ಸಾಧನೆ ಮಾಡಿದರು. ಈ ಮೂಲಕ 23 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿದ ಭಾರತದ 3ನೇ ಹಾಗೂ ವಿಶ್ವದ 7ನೇ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

ಸಚಿನ್ – 34,357

ಸಂಗಕ್ಕಾರ – 28,016

ಪಾಂಟಿಂಗ್ – 27,483

ಜಯವರ್ದನೆ – 25,927

ಕಾಲೀಸ್ – 25,534

ರಾಹುಲ್ ದ್ರಾವಿಡ್ – 24,208

ವಿರಾಟ್ ಕೊಹ್ಲಿ- 23,004

Leave a Reply