“ಸಂಗೀತ ಬಾರ್ ಎಂಡ್ ರೆಸ್ಟೋರೆಂಟ್” ಚಿತ್ರದ ಪ್ರಮೋಷನಲ್ ಪ್ರೋಮೋ ಬಿಡುಗಡೆಯಾಗಿದೆ. ತಸ್ಮಯ್ ಪ್ರೊಡಕ್ಷನ್ ತಂಡ “ಕತ್ತಲೆಕೋಣೆ” ಚಿತ್ರದ ನಂತರ “ಅದೇ ಮುಖ” ತಯಾರಿಕೆಯ ಹಂತದಲ್ಲಿ ಇರುವಾಗಲೇ, ಕುಂದಗನ್ನಡ ಸಾಹಿತಿ ಅಶೋಕ್ ನೀಲಾವರ ಅಗಲಿದ್ದರು. ಇದು ಚಿತ್ರತಂಡಕ್ಕೆ ತುಂಬಲಾರದ ನಷ್ಟ ಎಂದು ತಂಡ ಹೇಳಿದ್ದು, ಅಗಲಿದ ಗೆಳೆಯನಿಗೆ ಸಿನೆಮಾ ಮೂಲಕವೇ ಗೌರವಾರ್ಪಣೆ ಸಲ್ಲಿಸುವ ನಮ್ಮ ಆಶಯದ ಮೂರ್ತ ರೂಪವೇ ಈ ಹೊಸಚಿತ್ರ ಎಂದಿದೆ.
ಕತ್ತಲೆಕೋಣೆ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಮೂರನೇ ಚಿತ್ರದ ಪ್ರೋಮೊ ಅವರ ಹುಟ್ಟಿದ ದಿನವಾದ ಏಪ್ರಿಲ್ 1ರಂದು ಬಿಡುಗಡೆಯಾಗಲಿದೆ. ಸಹೃದಯಿಗಳಾದ ಕಲಾಭಿಮಾನಿ ದೇವರುಗಳು ಹಿಂದೆ ಹರಿಸಿದಂತೆ, ಇಂದು ಮುಂದೆಯೂ ಹರಸಿ ಹಾರೈಸಬೇಕು ಎಂದು ತಂಡ ಮನವಿ ಮಾಡಿದೆ.




