ಸದನದಲ್ಲಿ ಸಂಚಾರಿ ವಿಜಯ್ ಸಾಧನೆ ಚರ್ಚೆ

5 years ago

ಬೆಂಗಳೂರು: ಸಂಚಾರಿ ವಿಜಯ್​ ತುಂಬ ಪ್ರತಿಭಾನ್ವಿತ ಕಲಾವಿದರಾಗಿದ್ದರು. ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಅವರು ಮಂಗಳಮುಖಿ ಪಾತ್ರ ಮಾಡಿ ಜನಮನ ಗೆದ್ದಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸದನದಲ್ಲಿ ಮಾತಾಡಿದ ಅವರು, ಮಂಗಳ ಮುಖಿ ಪಾತ್ರ ಮಾಡುವುದು ಅಷ್ಟು ಸುಲಭವಲ್ಲ. ನಟನೆಯಲ್ಲಿ ಪರಿಣತಿ ಇರುವವರು ಮತ್ತು ಮಂಗಳಮುಖಿಯರ ಬದುಕನ್ನು ಅರಿತವರಿಂದ ಮಾತ್ರ ಸಾಧ್ಯ. ಅವರು ನಟಿಸಿದ್ದ ‘ಹರಿವು’ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಮಾನವೀಯತೆ ಮೆರೆದಿದ್ದರು ಎಂದು ಶ್ಲಾಘಿಸಿದರು.

ಜೂನ್ 15, 2021ರಂದು ಅವರು ಅಪಘಾತದಿಂದ ಅಕಾಲಿಕವಾಗಿ ನಿಧನರಾದರು. ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಕರ್ನಾಟಕಕ್ಕೆ ಗರಿ ಮೂಡಿಸಿದವರು. ಅಂತಹ ನಟನಿಗೆ ವಿಧಾನಮಂಡಲ ಅಧಿವೇಶನದ ಸಮಯದಲ್ಲಿ ಸಿದ್ದರಾಮಯ್ಯ ಸದನದಲ್ಲಿ ನಮನ ಸಲ್ಲಿಸಿದರು.

Leave a Reply