2007ನೇ ಇಸವಿಯಲ್ಲಿ ನೃಪತುಂಗ ಅವರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ 7 ಲಕ್ಷದ ಒಂದು ರೂಪಾಯಿಗಳ ಪ್ರತಿಷ್ಠಿತ ಪ್ರಶಸ್ತಿ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ಕೊಡುವಂತಹ ಸಂಪ್ರದಾಯವನ್ನು 2022 ರ ತನಕ ನಡೆಸಿಕೊಂಡು ಬಂದಿರುತ್ತದೆ. ಇದಕ್ಕೆ ಬಿಎಂಟಿಸಿ ಅವರು ಆರ್ಥಿಕ ನೆರವನ್ನು ಒದಗಿಸಿರುತ್ತಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
2022ರ ನಂತರ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಈ ಪ್ರಶಸ್ತಿಯನ್ನು ಸಾಹಿತ್ಯ ಪರಿಷತ್ ಯಾರಿಗೂ ಸಹ ಆಯ್ಕೆ ಮಾಡಿಲ್ಲ. ಬೇರೆಬೇರೆ ಪ್ರಶಸ್ತಿಗಳನ್ನು ಪ್ರತಿ ವರ್ಷವೂ ರಾಜ್ಯ ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ವಿತರಿಸುತ್ತಾರೆ. ಆದರೆ ನಾಡಿನ ಅತ್ಯಂತ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿಯನ್ನು ಮಾತ್ರ 4 ವರ್ಷದಿಂದ ಯಾರಿಗೂ ಕೊಡದೆ ಇರುವುದು ಸರಿಯಲ್ಲ.
ಅನೇಕ ಹಿರಿಯ ಸಾಧಕರು ತಮ್ಮ ವಯಸ್ಸಿನ ಕಾರಣದಿಂದ ಮತ್ತು ಅನಾರೋಗ್ಯದ ಕಾರಣದಿಂದ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ. ಯಾವುದೇ ವ್ಯಕ್ತಿಗೆ ಅವರು ಬದುಕಿರುವ ಸಂದರ್ಭದಲ್ಲಿ ಪ್ರಶಸ್ತಿಯನ್ನು ನೀಡಿದರೆ ಸಂತೋಷ ಮತ್ತು ಸಮಾಧಾನವಾಗುತ್ತದೆ. ಸಾಧಕರು ಸತ್ತ ಮೇಲೆ ಪ್ರಶಸ್ತಿ ನೀಡಿದರೆ ಅವರ ಕುಟುಂಬದವರು ಮತ್ತು ಅಭಿಮಾನಿಗಳಷ್ಟೇ ಸಂಭ್ರಮಿಸಬಹುದು. ಆದರೆ ಸ್ವತಹ ಸಾಧಕರು ಆ ಕ್ಷಣವನ್ನ ಅನುಭವಿಸಲು ಉಪಸ್ಥಿತರಿರುವುದಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತಿನ ನಡುವೆ ನಡೆಯುತ್ತಿರುವ ಅನೇಕ ಗೊಂದಲಗಳ ಕಾರಣದಿಂದ ಈ ಪ್ರಶಸ್ತಿ ವಿತರಣೆಯಾಗಿರುವುದಿಲ್ಲ. ಈಗ ಪರಿಷತ್ತಿಗೆ ಆಡಳಿತ ಅಧಿಕಾರಿಯವರು ನೇಮಕವಾಗಿರುವ ಹಿನ್ನೆಲೆಯಲ್ಲಿ, ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಬಾಕಿ ಇರುವ ನಾಲ್ಕು ವರ್ಷದ ಪ್ರಶಸ್ತಿಗಳನ್ನು ಕಡೆಯ ಪಕ್ಷ ನವಂಬರ್ ತಿಂಗಳಿನಲ್ಲಿ ವಿತರಿಸುವಂತಹ ಕೆಲಸವನ್ನು ಮಾಡಬೇಕೆಂದು ಕೋರಿಕೊಳ್ಳುತ್ತೇನೆ.
ಕರ್ನಾಟಕ ರಾಜ್ಯ ಸರ್ಕಾರ ಸಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ಆಯಾ ವರ್ಷದಲ್ಲಿಯೇ ಯೋಗ್ಯರಿಗೆ ನೀಡುವಂತಹ ಸಂಪ್ರದಾಯವನ್ನು ಅನುಸರಿಸಿ.
– ಕೆ ಎಸ್ ನಾಗರಾಜ್, ಬೆಂಗಳೂರು




