ಮಂಗಳೂರು: ಬೆಂಗ್ರೆ ಪ್ರದೇಶಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಪ್ರಾರಂಭಿಸಲು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ CPIM ಬೆಂಗ್ರೆ ಸಮಿತಿಯಿಂದ ಮನವಿ ಸಲ್ಲಿಸಿದರು.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಕಸಬಾ ಬೆಂಗ್ರೆ ಪ್ರದೇಶ ನದಿ ಮತ್ತು ಸಮುದ್ರ ಮದ್ಯ ಇರುವ ಪ್ರದೇಶವಾಗಿದ್ದು ಇಲ್ಲಿನ ಜನರು ನಗರ ಪ್ರದೇಶಕ್ಕೆ ತಲುಪಲು ಜಾಸ್ತಿಯಾಗಿ ಫೆರಿಬೋಟ್ ಗಳನ್ನೇ ಅವಲಂಬಿಸಬೇಕಾಗುತ್ತದೆ. ಇನ್ನೊಂದು ಭಾಗದಲ್ಲಿ ರಸ್ತೆಯ ಮುಖಾಂತರ ಕುಳೂರು ಪ್ರದೇಶದ ವರೆಗೆ ನೇರ ರಸ್ತೆಯಿದ್ದು ಮಂಗಳೂರು ನಗರದ ಪ್ರದೇಶಗಳಿಗೆ ಹಾಗೆಯೇ ರಾಷ್ಟ್ರೀಯ ಹೆದ್ದಾರಿಗೂ ತಲುಪಬಹುದಾಗಿದೆ.
ಬೆಂಗ್ರೆ ಪ್ರದೇಶಕ್ಕೆ ಬಸ್ ವ್ಯವಸ್ಥೆ ಬೇಕು ಅನ್ನುವುದು ಬಹುಕಾಲದ ಬೇಡಿಕೆಯಾಗಿದೆ.ಸದ್ಯಕ್ಕೆ ಬೆಂಗ್ರೆಯಿಂದ ಬಜಪೆವರೆಗೆ ಕೇವಲ ಒಂದೇ ಖಾಸಗಿ ಬಸ್ ದಿನಕ್ಕೆ ಬೆಳಿಗ್ಗೆ ಮತ್ತು ಸಂಜೆ ಕೆಲವು ಟ್ರೀಪ್ ಮಾತ್ರ ಸಂಚಾರ ಮಾಡುತ್ತದೆ.ಇಲ್ಲಿನ ಜನಸಂಖ್ಯೆ, ಈ ಭಾಗದಿಂದ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಬೇರೆ ಬೇರೆ ವಲಯದ ದುಡಿಯುವ ಜನರಿಗೆ ಸಮಯಕ್ಕೆ ಸರಿಯಾದ ಸೂಕ್ತ ಬಸ್ ವ್ಯವಸ್ಥೆ ಇರುವುದಿಲ್ಲ.ಕೇವಲ ಒಂದು ಖಾಸಗಿ ಬಸ್ಸಿನ ನಿಗದಿತ ಸೇವೆ ಈ ಭಾಗಕ್ಕೆ ಸಾಕಾಗುವುದಿಲ್ಲ ಮತ್ತು ಸರಿಯಾದ ಸಮಯಕ್ಕೆ ಅನುಗುಣವಾಗಿಯೂ ಇರುವುದಿಲ್ಲ.

ಈ ಭಾಗದ ತೋಟಬೆಂಗ್ರೆ, ಕಸಬಾ ಬೆಂಗ್ರೆ, ತಣ್ಣೀರುಬಾವಿ ಪ್ರದೇಶಗಳ ಬಹಳಷ್ಟು ಜನರಿಗೆ ಸರಕಾರಿ ಬಸ್ಸಿನ ವ್ಯವಸ್ಥೆಯ ಅಗತ್ಯತೆ ಹೆಚ್ಚಿದ್ದು ಹಾಗೆಯೇ ಬೆಂಗ್ರೆ ಪರಿಸರ ಬೀಚ್ ಗಳಿಗೆ ಪ್ರವಾಸಿಗರು ಹೆಚ್ಚು ಬರುತ್ತಾರೆ ಅದಲ್ಲದೇ ಈ ಭಾಗಕ್ಕೂ ದುಡಿಯಲು ಮೀನುಗಾರರು ಕಾರ್ಮಿಕರು ಹೆಚ್ಚು ಬರುತ್ತಾರೆ.
ಈ ನಿಟ್ಟಿನಲ್ಲಿ ಪ್ರಸ್ತುತ ತೋಟ ಬೆಂಗ್ರೆಯಿಂದ ಕಸಬಾ ಬೆಂಗ್ರೆ ಮಾರ್ಗವಾಗಿ ತನ್ನೀರುಬಾವಿ, ಕುಳೂರು, ಕೊಟ್ಟಾರ, ಲಾಲ್ ಭಾಗ್ ಕೊಟ್ಟಾರ, ಕಾರ್ಪೋರೇಷನ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಛೇರಿ, ಮಂಗಳೂರು ರೈಲ್ವೆ ನಿಲ್ದಾಣ ಜಂಕ್ಷನ್ ವರೆಗೆ ಚಲಿಸಲು ಸರಕಾರಿ ಬಸ್ ವ್ಯವಸ್ಥೆ ಅಗತ್ಯವಿದೆ ಮತ್ತು ಅದಲ್ಲದೇ ಈ ಭಾಗದಿಂದ ಬೇರೆ ಬೇರೆ ಪ್ರದೇಶಗಳಿಗೂ ಸಂಚರಿಸಲು ಸರಕಾರಿ ಬಸ್ ಅಗತ್ಯತೆ ಇದೆ. ವಿಶೇಷವಾಗಿ ಮಹಿಳೆಯರಿಗೆ,ವಿದ್ಯಾರ್ಥಿನಿಗಳಿಗೆ ಸರಕಾರದ ಉಚಿತ ಪ್ರಯಾಣದ ಸೌಲಭ್ಯವು ದೊರೆಯಬೇಕು ಎಂದು CPIM ಬೆಂಗ್ರೆ ನಿಯೋಗ ಆಗ್ರಹಿಸಿದೆ.
ಸರಕಾರಿ ಬಸ್ ಸಂಚಾರ ವ್ಯವಸ್ಥೆ ಬೆಂಗ್ರೆಗೆ ಪ್ರಾರಂಭಿಸಲು ಶೀಘ್ರ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಮಂಗಳೂರು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ CPIM ಬೆಂಗ್ರೆ ನಿಯೋಗ ಮನವಿ ಮಾಡಿದೆ. ನಿಯೋಗದಲ್ಲಿ CPIM ಮಂಗಳೂರು ದಕ್ಷಿಣ ನಗರ ಸಮಿತಿ ಸದಸ್ಯ ತೈಯೂಬ್ ಬೆಂಗ್ರೆ, CPIM ಬೆಂಗ್ರೆ ಕಾರ್ಯದರ್ಶಿ ನಾಸಿರ್ ಬಾಸ್, ಬಿಲಾಲ್ ಬೆಂಗ್ರೆ, ಮುಖಂಡರಾದ ಹನೀಫ್ ಬೆಂಗ್ರೆ, ಮುಹಾಝ್, ರಿಝ್ವಾನ್ ಹಾಗೆಯೇ ಫಝುಲ್ ಹಾಜರಿದ್ದರು.



