ಮಣ್ಣಿನ ಮಗ ಕೃತಿ ಬಿಡುಗಡೆಗೆ

2 years ago

ಆತ್ಮೀಯರೇ ಮಹತ್ತರವಾಗಿ ನಾನು ನಾಲ್ಕೈದು ವರ್ಷಗಳ ಕಾಲ ಶ್ರಮಿಸಿ ಬಹಳ ಇಷ್ಟಪಟ್ಟು ಕಷ್ಟಪಟ್ಟು ರಾಷ್ಟ್ರೀಯ ರಾಜಕಾರಣಿ ಹೆಚ್ ಡಿ ದೇವೇಗೌಡರ ಕುರಿತು ಮಣ್ಣಿನ ಮಗ ಪುಸ್ತಕವನ್ನು ಬರೆದು ಅಂತಿಮಗೊಳಿಸಿ ಇದೇ ತಿಂಗಳ ಗುರುವಾರ 29ನೇ ತಾರೀಕು ಸಂಜೆ 5:00 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೋಕಾರ್ಪಣೆಯಾಗುತ್ತದೆ.

ನನ್ನ ಬಗ್ಗೆ ಅಪಾರವಾದ ಪ್ರೀತಿ ಹೊಂದಿರುವ ತಾವು ಆವತ್ತು ಬಿಡುವು ಮಾಡಿಕೊಂಡು ಬಂದು ನನ್ನ ಜೊತೆ ಜೊತೆಯಾಗಿ ಸೇರಿ ಮುಖ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮಹೇಶ್ ಜೋಶಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ, ಜನಪ್ರಿಯ ವೈದ್ಯ ಹೃದಯ ತಜ್ಞ ಪದ್ಮಶ್ರೀ ಡಾ ಸಿ ಎನ್ ಮಂಜುನಾಥ್, ಅನುಸೂಯ ಮಂಜುನಾಥ್ ಅವರು ಮಿತ್ರ ಗೋ ಮೂರ್ತಿ ಯಾದವ್ ನಮ್ಮ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್ ಎ ರವಿ ಸುಬ್ರಹ್ಮಣ್ಯ ಅವರು ಸ್ನೇಹ ಬುಕ್ ಹೌಸ್ ಪ್ರಕಾಶಕರು ಆದ ಕೆ ಬಿ ಪರಶಿವಪ್ಪ ಅವರು ಮಣ್ಣಿನ ಮಗ ಪುಸ್ತಕದ ಮುಖಪುಟದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ ಇನ್ನು ತಾವುಗಳು ಕಾರ್ಯಕ್ರಮಕ್ಕೆ ಬರುವುದು ನನ್ನ ಬೇಡಿಕೆಯಾಗಿದೆ ಬನ್ನಿ ಹರಸಿ ಹಾರೈಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಮನುಷ್ಯನ ಬದುಕಿನಲ್ಲಿ ಯೋಗ ಮತ್ತು ಯೋಗ್ಯತೆ ಇದ್ದರೆ ಅದೃಷ್ಟ ತಾನಾಗಿಯೇ ಬರುತ್ತದೆಯಂತೆ ನಿಜ ನನ್ನ ಬದುಕಿನಲ್ಲೂ ಕೂಡ ಅದೃಷ್ಟ ಮತ್ತು ಯೋಗ್ಯತೆ ಎರಡು ಇದೆ ಎಂಬುವುದಕ್ಕೆ ಸ್ನೇಹಿತರೆ ರಾಷ್ಟ್ರೀಯ ನಾಯಕರದ ರಾಜಕೀಯಮುತ್ಸದಿ ಮಣ್ಣಿನ ಮಗ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಹೆಚ್ ಡಿ ದೇವೇಗೌಡರು ಅವರ ಒಂದಷ್ಟು ಹೋರಾಟದ ಬದುಕು, ಕೊಟ್ಟ ಕೊಡುಗೆಗಳು, ನಡೆದು ಬಂದ ಹಾದಿಯ ಕುರಿತು, ನಾನು ಬರೆದಿರುವ ಮಣ್ಣಿನ ಮಗ ಪುಸ್ತಕದಲ್ಲಿ ಮುದ್ರಣವಾಗಿದೆ.

ಬಹಳ ಸಂಭ್ರಮವೆಂದರೆ ಅನ್ನದಾತರ ಆರಾಧ್ಯ ದೈವ ತ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಎಚ್ ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ಅವರು ಭಾಗವಹಿಸುತ್ತಾರೆ. ಮಣ್ಣಿನ ಮಗ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಹೇಶ್ ಜೋಶಿ ಲೋಕಾರ್ಪಣೆ ಮಾಡುತ್ತಾರೆ, ಮುಖ್ಯವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ, ಮಣ್ಣಿನ ಮಗ ಪುಸ್ತಕವನ್ನು ಕುರಿತು ನಾಡಿನ ಹಿರಿಯ ಸಾಹಿತಿಗಳಾದ ನಾಡೋಜ ಡಾ ಹಂ ಪ ನಾಗರಾಜಯ್ಯ ಅವರು ಶುಭ ನುಡಿಯುತ್ತಾರೆ.

ಹೃದಯವಂತ ಹೃದಯ ತಜ್ಞ ಪದ್ಮಶ್ರೀ ಡಾ ಸಿ ಎನ್ ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ನಮ್ಮೊಂದಿಗೆ ಇರುತ್ತಾರೆ. ಸ್ನೇಹ ಪುಸ್ತಕ ಪ್ರಕಾಶನದ ಪ್ರಕಾಶಕರಾದ ಕೆ ಬಿ ಪರಶಿವಪ್ಪ ಅವರು ಉಪಸ್ಥಿತರಿದ್ದು ನಿಮ್ಮನ್ನು ಸ್ವಾಗತಿಲು ಕಾಯುತ್ತಿರುವೆ ಬಂದು ನನಗೆ ಶುಭ ಕೋರಿ ಈ ನಿಮ್ಮ ಕಾರ್ಯಕ್ರಮದಲ್ಲಿ ನೀವು ಉಪಸ್ಥಿತರಿರಲು ನನ್ನ ಹೃದಯಪೂರ್ವಕ ಸ್ವಾಗತವನ್ನು ಬಯಸುತ್ತೇನೆ ಇರಲಿ ನನಗೆ ನಿಮ್ಮ ಅಖಂಡ ಆಶೀರ್ವಾದ ಮತ್ತಷ್ಟು ವಿವರಗಳಿಗೆ ಆಹ್ವಾನ ಪತ್ರಿಕೆಯನ್ನು ಗಮನಿಸಲು ಮನವಿ ಮಾಡುತ್ತೇನೆ.

ನಿಮ್ಮ ನೇ ಭ ರಾಮಲಿಂಗಶೆಟ್ಟಿ

Leave a Reply