ದೇಶಾದ್ಯಂತ ಜಾತಿ ಗಣತಿ ಮಾಡಬೇಕು ಎಂಬುದು ರಾಹುಲ್ ಗಾಂಧಿ ಅವರ ಉದ್ದೇಶ: ಡಾ.ಎಚ್.ಸಿ.ಮಹದೇವಪ್ಪ

3 years ago

#SadashivaReport #reservation #RahulGandhi #intention #castecensus #country #HCMahadevappa

ಹಿಂದುಳಿದವರು, ಅಲ್ಪಸಂಖ್ಯಾತರು ಕಾಂಗ್ರೆಸ್ ಸರ್ಕಾರ ಬರುವುದಕ್ಕೆ ಕಾರಣ

ಹಿಂದುಳಿದವರು, ಅಲ್ಪಸಂಖ್ಯಾತ ವರ್ಗಗಳು ರಾಜಕೀಯವಾಗಿ ಐಕ್ಯವಾಗಬೇಕು

ಸದಾಶಿವ ಆಯೋಗದ ವರದಿಯನ್ನು ಕ್ಯಾಬಿನೆಟ್ ಮುಂದೆ ಚರ್ಚೆಗೆ ತಂದು ಕೂಲಂಕೂಷವಾದ ಚರ್ಚೆ

ಬೆಂಗಳೂರು: ಛಲವಾದಿಗಳು ಮತ್ತು ಮಾದಿಗರು ಈ ಹಿಂದೆ ತಮ್ಮ ಹಕ್ಕುಗಳನ್ನು ಹಂಚಿಕೊಳ್ಳಲು ಹಲವು ಸಭೆಗಳನ್ನು ನಡೆಸಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಬೆಂಗಳೂರಿನ Freedom Park ನಲ್ಲಿ ಜರುಗಿದ ಸದಾಶಿವ ಆಯೋಗದ ಜಾರಿ ಹೋರಾಟದ ಸಭೆಯಲ್ಲಿ ಮಾತನಾಡಿದ ಅವರು, ಇನ್ನು ಸದಾಶಿವ ಆಯೋಗದ ಜಾರಿಗೆ ಸಂಬಂಧಿಸಿದಂತೆ ಆ ಕೂಗು ಕೇವಲ ಚುನಾವಣೆಗೆ ಮಾತ್ರ ಸಂಬಂಧಪಟ್ಟಿತ್ತು ಎಂದು ಅಭಿಪ್ರಾಯಪಟ್ಟರು.

ಆದರೆ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಕ್ಯಾಬಿನೆಟ್ ನಲ್ಲಿ ಅನುಮೋದನೆ ಪಡೆದು ಅದು ಕೇಂದ್ರದಲ್ಲಿ ಚರ್ಚೆಯಾಗಿ ಊರ್ಜಿರ್ತಗೊಂಡಾಗ ಮಾತ್ರ ಒಳ ಮೀಸಲಾತಿಯ ಬೇಡಿಕೆಗೆ ಹೆಚ್ಚು ಮಾನ್ಯತೆ ಸಿಗುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ಹೀಗಾಗಿ ಈ ಮಹತ್ತರ ಮಾನ್ಯತೆಗಾಗಿ ನಾವು ಮುಖ್ಯಮಂತ್ರಿಗಳೊಂದಿಗೆ  ಚರ್ಚೆ ನಡೆಸಿ ವರದಿಯ ಜಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಡಾ ಬಿ ಆರ್ ಅಂಬೇಡ್ಕರ್ ಅವರ ಆಶಯಕ್ಕೆ ಅನುಗುಣವಾಗಿ ಅಸ್ಪೃಶ್ಯ ಸಮುದಾಯಗಳ ಮೀಸಲಾತಿಯ ಹಕ್ಕನ್ನು ನ್ಯಾಯಬದ್ಧವಾಗಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಲಿದೆ ಎಂದು ಭರವಸೆ ನೀಡಿದರು.

ಇದರ ಜೊತೆಗೆ ಬಿಜೆಪಿ ಅವಧಿಯಲ್ಲಿ ತಿರಸ್ಕಾರಗೊಂಡಿರುವ ಸದಾಶಿವ ಆಯೋಗದ ವರದಿಯನ್ನು ಕ್ಯಾಬಿನೆಟ್ ಮುಂದೆ ಚರ್ಚೆಗೆ ತಂದು ಕೂಲಂಕೂಷವಾದ ಚರ್ಚೆ ನಡೆಸಿ ಸಂವಿಧಾನಾತ್ಮಕವಾಗಿ ಇದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದರ ಮುಖ್ಯ ಉದ್ದೇಶವು ಅಸ್ಪೃಶ್ಯರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಉಳಿದವರೊಂದಿಗೆ ಸಾಮರಸ್ಯದಿಂದಲೇ ಮೀಸಲಾತಿಯ ನ್ಯಾಯ ಬದ್ಧ ಹಂಚಿಕೆಯ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಈ ಬಾರಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್ ಸರ್ಕಾರ ಬರುವುದಕ್ಕೆ ಕಾರಣವಾಗಿದ್ದು ಈ ವರ್ಗಗಳು ರಾಜಕೀಯವಾಗಿ ಐಕ್ಯವಾಗಬೇಕು. ಇಲ್ಲದೇ ಹೋದರೆ ನಮ್ಮಲ್ಲೇ ಒಡಕು ತರಲಾಗುತ್ತದೆ. ಹೀಗೆ ಒಡಕು ಬಂದ ಮೇಲೆ ಸಮುದಾಯಗಳು ನಾಯಕತ್ವ ಇಲ್ಲದೆ ಅನಾಥವಾಗುತ್ತದೆ. ಹೀಗಾಗಿ ನಾವೆಲ್ಲರೂ ಈ ಬಗ್ಗೆ ಸದಾ ಎಚ್ಚರವಾಗಿರಬೇಕು ಮತ್ತು ಜಾಗೃತವಾಗಿರಬೇಕು ಎಂದು ಕರೆ ನೀಡಿದರು.

ಇದರ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಪೂರಕವಾದ ಜಾತಿ ಗಣತಿಯನ್ನೂ ಕೂಡಾ ಜಾರಿ ಮಾಡಿ ನ್ಯಾಯಬದ್ದ ಹಕ್ಕುಗಳನ್ನು ನೀಡುವತ್ತ ಸರ್ಕಾರ ಶ್ರಮಿಸಲಿದ್ದು ದೇಶಾದ್ಯಂತ ಜಾತಿ ಗಣತಿಯನ್ನು ಮಾಡಬೇಕು ಎಂಬುದು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಉದ್ದೇಶವೂ ಆಗಿದೆ ಎಂದು ಹೇಳಿದರು.

Leave a Reply