ವಿಜಯಪುರ ಜಿಲ್ಲೆಯಲ್ಲಿ ಸಾರ್ವಜನಿಕ ಸಮಸ್ಯೆಗಳು ಹೆಚ್ಚು: ಅಪ್ಸರ್ ಕೊಡ್ಲಿಪೇಟೆ

2 years ago

ವಿಜಯಪುರ: ಕರ್ನಾಟಕ ಲೋಕಾಯುಕ್ತದಲ್ಲಿ ವಿಜಯಪುರ ಜಿಲ್ಲೆಯ 459 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುವುದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಸಾರ್ವಜನಿಕ ಸಮಸ್ಯೆಗಳು ಹೆಚ್ಚಿರುವುದನ್ನು ಸೂಚಿಸುತ್ತದೆ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಿಜಾಪುರ ನಗರ ಮತಕ್ಷೇತ್ರ ವ್ಯಾಪ್ತಿಯ ಹಸಿವು ಮತ್ತು ಭಯ ಮುಕ್ತ ಚಳುವಳಿಯಾಗಿರುವ ಎಸ್ಡಿಪಿಐ ಪಕ್ಷದ 2024-27 ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಬ್ರಾಂಚ್ ಪದಾಧಿಕಾರಿಗಳು ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಗಳ ಸದಸ್ಯರುಗಳ ನಾಯಕರುಗಳ ಸಭೆ ( #LeadersMeet ) ಯು ಸೂರಜ್ ಫಂಕ್ಷನ್ ಹಾಲ್ ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಪ್ಸರ್ ಕೊಡ್ಲಿಪೇಟೆ, ಪರಿಣಾಮಕಾರಿ ನಾಯಕತ್ವ  (EffectiveLeadership) ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಪರ್ಯಾಯ ರಾಜಕಾರಣದ (Alternative politics) ಅಗತ್ಯತೆ ಬಗ್ಗೆ ತರಬೇತಿ ನೀಡಿ ನಾಯಕರುಗಳೊಂದಿಗೆ ಸಂವಾದ ನಡೆಸಿದರು.

ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯ ನಂತರ ‘ವಿಜಯಪುರದಲ್ಲಿ ದುರಾಡಳಿತ ಹೆಚ್ಚಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಉಪಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಅವರ ಮಾತನ್ನು ಕೇಳಿದರೆ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಸಾರ್ವಜನಿಕ ಸಮಸ್ಯೆಗಳು ಹೆಚ್ಚಿರುವುದು ಸಾಬೀತಾಗಿದೆ ಎಂದರು.

ನಗರದಲ್ಲಿಎರಡು ದಿನಗಳ ಕಾಲ ಜಿಲ್ಲೆಯ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತಕ್ಕೆ ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಹಾಸ್ಟೆಲ್‌ ಗಳಲ್ಲಿ ಉಪಾಹರ ಗುಣಮಟ್ಟ ಸರಿಯಿಲ್ಲ ಎಂಬ ದೂರುಗಳ ಸಹಿತ ಒಟ್ಟು 192 ದೂರುಗಳು ಬಂದಿರುವುದು ಈ ಭಾಗದ ಜನ ಪ್ರತಿನಿಧಿಗಳು ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿಫಲರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಆರೋಪಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಅತಾವುಲ್ಲಾ ದ್ರಾಕ್ಷೀ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಸಾರ್ ಅಹ್ಮದ್ ಮನಿಯಾರ ಮತ್ತು ವಿಜಯಪುರ ನಗರ ಮತಕ್ಷೇತ್ರದ ಅಧ್ಯಕ್ಷರಾದ ಉಮರಖಾನ್ ಪಠಾಣ್, ಕಾರ್ಯದರ್ಶಿ ಮಹ್ಮದ್ ಇಸಾಕ್ ಸೈಯದ್ ಹಾಗೂ ಜಿಲ್ಲಾ ಮುಖಂಡರು ಮತ್ತು ವುಮೆನ್ ಇಂಡಿಯಾ ಮೊಮೆಂಟ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಸದಸ್ಯರು ಹಾಜರಿದ್ದರು.

Leave a Reply