ಅಮರೇಶ್ ನುಡಿ ನಮನ
ಬೆಂಗಳೂರು: ಬಿಬಿಎಂಪಿ ನೌಕರರ ಭವನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸ್ನೇಹಜೀವಿ, ಸಮಾಜ ಸೇವಕರು, ಮಕ್ಕಳ ಶಿಕ್ಷಣ ಚಿಂತಕ ಅಮರೇಶ್ (ಅಂಬರೀಷ್)ರವರಿಗೆ ನುಡಿ ನಮನ ಹಾಗೂ ಹೃದಯ ರಕ್ಷಣೆ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಸ್ಲಂ ಸಂಸ್ಥೆಯ ಸಂಸ್ಥಾಪಕಿ ಭಾಗ್ಯವತಿ ಅಮರೇಶ್, ಯುನೈಟೆಡ್ ಆಸ್ಪತ್ರೆಯ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್ ಸಿದ್ದಾರೆಡ್ಡಿ, ಸಿ.ಓ.ಓ. ಕರ್ನಲ್ ರಾಕೇಶ್ ಕುಮಾರ್ ಭಾರದ್ವಾಜ್ (ವಿ.ಎಸ್.ಎಮ್) ಹೃದಯ ತಜ್ಞ ವೈದ್ಯರುಗಳಾದ ಡಾ.ಲೋರಿಯ ರೆಹಮಾನ್, ಡಾ.ಪೂರ್ವಿಕ್ ದೇಶಮುಖ್, ಡಾ.ತೆನ್ ಮೌಳಿ ಯತಿಶ್, ಜನರಲ್ ಮ್ಯಾನೇಜರ್ ಆನಂದ್ ಭಾಗವಹಿಸಿದ್ದರು.
ಅಮರೇಶ್ ಅವರು ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ ಸಿಗಬೇಕು, ಶ್ರೀಂಮತರ ಮಕ್ಕಳಂತೆ ಅವರು ಸಹ ಸಮಾಜದಲ್ಲಿ ಮುಂದೆ ಬರಬೇಕು ಎಂಬ ಅಭಿಲಾಷೆಯಿಂದ ಸ್ಲಂ ಸಂಸ್ಥೆ ಎಂಬ ಸಾಮಾಜಿಕ ಸೇವಾ ಸಂಘಟನೆ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಸಹಕಾರ, ಸಹಾಯಹಸ್ತ ನೀಡಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳಿಗೆ ಉತ್ತಮ ಅಂಕಗಳಿಸಲು ಉಚಿತ ಟ್ಯೂಶನ್ ಮತ್ತು ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್ ಟಾಪ್, ವಿದ್ಯಾರ್ಥಿ ವೇತನ ಹಲವಾರು ಸಮಾಜಮುಖ ಕಾರ್ಯಗಳನ್ನು ಮಾಡಿದ್ದರು.
ಅಮರೇಶ್ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಉತ್ತಮಜೀವನ ಸಿಗಬೇಕು ಎಂದು ಹೋರಾಟ ಮಾಡಿದ್ದರು. ಇಂದು ಅವರ ನೆನಪು ಮಾತ್ರ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರು ಸಾಗೋಣ ಎಂದು ಎಲ್ಲರು ನುಡಿನಮನ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿದರು.
ನಂತರ ಸಾರ್ವಜನಿಕರು ಹೃದಯದ ರಕ್ಷಣೆ ಮತ್ತು ಹೃದಯಾಘಾತವಾದಾಗ ಜನರು ಯಾವ ರೀತಿಯಲ್ಲಿ ಪ್ರಥಮ ಚಿಕಿತ್ಸೆ ಮಾಡಬೇಕು ಎಂದು ತಜ್ಞ ವೈದ್ಯರುಗಳಿಂದ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಯಿತು.
ಪ್ರತಿಯೊಬ್ಬರು ಪ್ರತಿದಿನ 1 ಗಂಟೆ ಯೋಗ, ವಾಕಿಂಗ್ ಮಾಡಬೇಕು ಮತ್ತು ಉತ್ತಮ ಆಹಾರ ಸೇವನೆ ಹಾಗೂ ಸಕ್ಕರೆ ಪ್ರಮಾಣ, ಬಿಪಿ ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಮದ್ಯಪಾನ, ಧೂಮಪಾನದಿಂದ ದೂರ ಇರಿ ಎಂದು ವೈದ್ಯರು ಸಲಹೆ ನೀಡಿದರು.
ಯಾವುದಾದರೂ ವ್ಯಕ್ತಿಗೆ ಹೃದಯಾಘಾತವಾದಾಗ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಯುನೈಟೆಡ್ ಹಾಸ್ಪಿಟಲ್ ವತಿಯಿಂದ ಛಾಯಾಚಿತ್ರ ಪ್ರದರ್ಶನ ಹಾಗೂ ಕಾರ್ಯಾಗಾರ ಮಾಡಿ ಜನರಿಗೆ ಅರಿವು ಮೂಡಿಸಿದರು.




