ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿಧಾನಸಭಾ ಚುನಾವಣೆ ಅಂಗವಾಗಿ ಕಡ್ಡಾಯ ಮತದಾನಕ್ಕಾಗಿ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥ ಮತ್ತು ಬೀದಿ ನಾಟಕ ಕಾರ್ಯಕ್ರಮ.
ಕಬ್ಬನ್ ಪಾರ್ಕ್ ಮುಖ್ಯದ್ವಾರದಲ್ಲಿ ಜಾಥ ಹಾಗೂ ಕಾಲ್ನಡಿಗೆ ಜಾಥವನ್ನು ಉದ್ಘಾಟನೆಯನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಬೆಂಗಳೂರುನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ವಿಶೇಷ ಆಯುಕ್ತರುಗಳಾದ ತ್ರಿಲೋಕಚಂದ್ರ, ಹರೀಶ್ ಕುಮಾರ್, ಐ.ಎ.ಎಸ್.ಅಧಿಕಾರಿ ರಾಜೇಂದ್ರ ಚೋಳನ್, ಜಂಟಿ ಆಯುುಕ್ತರಾದ ಪಲ್ಲವಿ, ಉಪ ಆಯುಕ್ತರಾದ ಲಕ್ಷ್ಮೀದೇವಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಅವರು ಬಲೂನ್ ಹಾರಿ ಬಿಡುವ ಮತದಾನ ಜಾಗೃತಿ ಕಾಲ್ನಡಿಗೆ ಜಾಥ ಮತ್ತು ಬೀದಿ ನಾಟಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ತುಷಾರ್ ಗಿರಿನಾಥ್ ಮಾತನಾಡಿ ಬೆಂಗಳೂರುನಗರ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ವರ್ಷಗಳಿಂದ ಮತದಾನ ಶೇಕಡ 50ಕ್ಕಿಂತ ಕಡಿಮೆಯಾಗುತ್ತಿದೆ. ಅದರಿಂದ ಬಿಬಿಎಂಪಿ ನೇತೃತ್ವದಲ್ಲಿ ನಗರ ಪ್ರದೇಶದಲ್ಲಿ ಶೇಕಡ 100ರಷ್ಟು ಮತದಾನವಾಗಲು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದಾಜು ಶೇಕಡ 85ರಷ್ಟು ಮತದಾನವಾಗಬೇಕು ಎಂಬುದು ಉದ್ದೇಶ ಎಂದರು.
ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಮಾತನಾಡಿ ನಗರ ಪ್ರದೇಶದ ನಾಗರಿಕರು ಮನೆಯಿಂದ ಹೊರಬಂದು ಮತದಾನ ಮಾಡಬೇಕು.ಮತದಾರರು ನಿರ್ಭಿತಿಯಿಂದ,ಭಯಮುಕ್ತರಾಗಿ ಮತದಾನ ಮಾಡಬೇಕು. ಪೊಲೀಸ್ ಇಲಾಖೆ ಶಾಂತಿಯುತ ಮತದಾನಕ್ಕೆ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಎ.ಅಮೃತ್ ರಾಜ್ ಮಾತನಾಡಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರುನಗರ ಜನರ ಒಡನಾಡಿಯಾಗಿ ಕೆಲಸ ಮಾಡುತ್ತಿದೆ. ಬಿಬಿಎಂಪಿ ಮತ್ತು ನಗರ ನಾಗರಿಕರ ಜೊತೆಯಲ್ಲಿ ಪ್ರತಿದಿನ ಸಂಪರ್ಕವಿರುತ್ತದೆ. ನಮ್ಮ ಸಂಘದ ವತಿಯಿಂದ ಜನಸ್ನೇಹಿಯಾಗಿ ಕೆಲಸ ಮಾಡಬೇಕು ನಗರದ ಜನತೆಗೆ ಒಳಿತು ಮಾಡಬೇಕು ಎಂದು ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ನಗರ ಪ್ರದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಮತದಾನವಾಗಬೇಕು ಎಂದು ಕಾಲ್ನಡಿಗೆ ಜಾಥ ಮತ್ತು ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗೆಜ್ಜೆ-ಹೆಜ್ಜೆ ತಂಡದವರಿಂದ ಬೀದಿ ನಾಟಕ ಮತ್ತು ಕಬ್ಬನ್ ಮುಖ್ಯದ್ವಾರದಿಂದ ಪ್ರಾರಂಭವಾಗಿ ಕಸ್ತೂರಬಾ ರಸ್ತೆ ಹಾದಿಯಲ್ಲಿ ಹೋಗಿ ಕಂಠೀರವ ಕ್ರೀಡಾಂಗಣದ ಒಳಾಂಗಣದ ರಸ್ತೆಯಲ್ಲಿ ಬಂದು ರಾಜಾರಾಮ್ ಮೋಹನ್ ರಾಯ್ ರಸ್ತೆಯ ಹಾದಿಯಲ್ಲಿ ನಡೆದು ಬಿಬಿಎಂಪಿ ನೌಕರರ ಸಂಘದ ಬಳಿ ಮುಕ್ತಾಯಗೊಂಡಿತು.
ಮತದಾನ ಜಾಗೃತಿ ಕಾಲ್ನಡಿಗೆ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಕೆ.ಜಿ.ರವಿ, ಸೂರ್ಯಕುಮಾರಿ,ಮಂಜೇಗೌಡ, ರುದ್ರೇಶ್, ಮಂಜುನಾಥ್, ಸಂತೋಷ್ ಕುಮಾರ್ ನಾಯಕ್, ರೇಣುಕಾಂಬ, ಸಂಧ್ಯಾ, ನಂಜಪ್ಪ, ನರಸಿಂಹ, ಬಾಬಣ್ಣ ಹಾಗೂ ಅಧಿಕಾರಿ, ನೌಕರರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.




