ಔಷಧವಿಲ್ಲದ ಆರೋಗ್ಯಕರ ಜೀವನ ನಡೆಸುವ ಕುರಿತು ಕಾರ್ಯಕ್ರಮ

3 years ago

#program #drug #free #healthy #living

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ, ನೌಕರರ ಭವನ ಸಭಾಂಗಣದಲ್ಲಿ ಬಿಬಿಎಂಪಿ ನಿವೃತ್ತ ನೌಕರರ ಸಂಘದ ವತಿಯಿಂದ ಔಷದವಿಲ್ಲದ ಆರೋಗ್ಯ ಜೀವನ ತಿಳುವಳಿಕೆ ಕಾರ್ಯಕ್ರಮವನ್ನು ಕರ್ನಾಟಕ ಟ್ರೆಡಿಷನಲ್ ಆಕ್ಯುಪಂಕ್ಚರಿಸ್ಟ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಬಿಬಿಎಂಪಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೈ.ಎ.ಶಿವಪ್ರಸಾದ್, ಉಪಾಧ್ಯಕ್ಷ ಚ.ನಾಗರಾಜ್, ಕಾರ್ಯದರ್ಶಿ ತರೀಕೆರೆ ಗುರುಮೂರ್ತಿ,  ಪದಾಧಿಕಾರಿಗಳಾದ ಬಿ.ಆರ್.ಶಿವಕುಮಾರ್, ವಿ.ನಂಜುಂಡಸ್ವಾಮಿ ಮತ್ತು ಆಕ್ಯುಪಂಕ್ಚರಿಸ್ಟ್ ಸಂಸ್ಥೆಯ ಆನಂದ್ ಭಾಗವಹಿಸಿದ್ದರು.

ನಿವೃತ್ತಿ ನಂತರ ಮನೆಯಲ್ಲಿ ಕೂರದೇ ಸದಾ ಕಾರ್ಯಚಟುವಟಿಕೆಯಿಂದ ಇದ್ದರೆ ಮಾನಸಿಕ, ದೈಹಿಕವಾಗಿ ನೆಮ್ಮದಿಯಿಂದ ಜೀವನ ಸಾಗಿಸಬಹುದು.60 ವರ್ಷದ ನಂತರ ಹಿರಿಯರು ಮಕ್ಕಂತೆ ಆಗುತ್ತಾರೆ. ಅರಳು ಮರುಳು ಅಲ್ಲ, ಮರಳಿ ಅರಳುವ ಸಮಯವಾಗಿದೆ ಎಂದು ಶಿವಪ್ರಸಾದ್ ಹೇಳಿದರು.

ನಿವೃತ್ತ ನೌಕರರಿಗೆ ಸಕಾಲಕ್ಕೆ ಪಿಂಚಣಿ ಸೌಲಭ್ಯ, ಉಚಿತ ಆರೋಗ್ಯ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಿವೃತ್ತ ನೌಕರರಿಗೆ ಪ್ರವಾಸ ಕಾರ್ಯಕ್ರಮ ಹಾಗೂ ಆರೋಗ್ಯವಂತ ಜೀವನ ಸಾಗಿಸಲು ನಿವೃತ್ತ ನೌಕರರ ಸಂಘ ಸಹಾಯ, ಸಹಕಾರ ನೀಡುತ್ತಾ ಬಂದಿದೆ ಎಂದು ಹೇಳಿದರು.

ವಯಸ್ಸು ದೇಹಕ್ಕೆ ಹೊರತು, ಮನಸ್ಸಿಗಲ್ಲ, ಮನಸ್ಸು ಸಂತೋಷವಾಗಿ ಇದ್ದರೆ ಆರೋಗ್ಯವಂತರಾಗಿ ಬಾಳಬಹುದು ಎಂಬುದು ನಿವೃತ್ತ ನೌಕರರ ಸಂಘ ಆಶಯವಾಗಿದೆ. ನಿವೃತ್ತ ನೌಕರರ ಹಿತಾರಕ್ಷಣೆಗಾಗಿ ಬಿಬಿಎಂಪಿ ನಿವೃತ್ತ ನೌಕರರ ಸಂಘ ಶ್ರಮಿಸುತ್ತಿದೆ ಎಂದು ಹೇಳಿದರು.

Leave a Reply